ತಿಪಟೂರು: ನಗರದ ತ್ರಿಮೂರ್ತಿ ಚಿತ್ರಮಂದಿರದ ಆವರಣದಲ್ಲಿ ಗುರುವಾರ ‘ರಾಬರ್ಟ್’ ಸಿನಿಮಾ ಪ್ರದರ್ಶನಕ್ಕೂ ಮುನ್ನ ನಟ ದರ್ಶನ್ ಕಟೌಟ್ ಹಾಗೂ ಭಾವಚಿತ್ರಕ್ಕೆ ಕೆಲ ಅಭಿಮಾನಿಗಳು ಮದ್ಯ (ಬಿಯರ್) ಸುರಿದರು. ಬಳಿಕ ತಾವು ಕುಡಿದು ಸಂಭ್ರಮಿಸಿದರು. ಈ ಕುರಿತಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಾಶಿವರಾತ್ರಿ ಹಬ್ಬದಂದು ‘ರಾಬರ್ಟ್’ ಬಿಡುಗಡೆಯ ದಿನಾಂಕ ನಿಗದಿಯಾಗಿದ್ದರಿಂದ ಎರಡು ದಿನಗಳಿಂದ ಅಭಿಮಾನಿಗಳು ಚಿತ್ರಮಂದಿರದ ಮುಂಭಾಗ ಬ್ಯಾನರ್, ಕಟೌಟ್‌ಗಳನ್ನು ಕಟ್ಟಿದ್ದರು. ಟಿಕೆಟ್‍ಗಾಗಿ ಹಗಲು–ರಾತ್ರಿ ಕಾದು ಕುಳಿತಿದ್ದರು. ಬೆಳಿಗ್ಗೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳ ಗುಂಪಿನಲ್ಲಿದ್ದ ಕೆಲವರು ಬಿಯರ್ ಬಾಟಲ್‌ಗಳನ್ನು ಹೊರತೆಗೆದು ದರ್ಶನ್ ಪರವಾಗಿ ಘೋಷಣೆ ಕೂಗಿದರು. ಬಳಿಕ ಮದ್ಯ ಸುರಿದರು.

ಅಭಿಮಾನಿಗಳ ಇಂತಹ ವರ್ತನೆಗೆ ಸಿನಿಮಾ ನೋಡಲು ಬಂದಿದ್ದ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.