ಬೆಂಗಳೂರು: ಕೆ.ವಿ. ವಿಜಯೇಂದ್ರ ಪ್ರಸಾದ್ ಕಥೆ ಬರೆದಿರುವ ಮತ್ತು ಎಸ್.ಎಸ್. ರಾಜಮೌಳಿ ನಿರ್ದೇಶನದ ಚಿತ್ರ ‘ಆರ್ಆರ್ಆರ್‘ ಬಿಡುಗಡೆಯಾದ ದಿನವೇ ಪೈರಸಿ ಕಾಟಕ್ಕೆ ಸಿಲುಕಿದೆ.

‘ಆರ್ಆರ್ಆರ್‘ ಚಿತ್ರ ಆನ್ಲೈನ್ನಲ್ಲಿ ಸೋರಿಕೆಯಾಗಿದ್ದು, ಪೈರಸಿ ಸಿನಿಮಾ ಒದಗಿಸುವ ಫಿಲ್ಮಿವ್ಯಾಪ್, ತಮಿಳ್ರಾಕರ್ಸ್, ಮೂವಿರೂಲ್ಸ್ ಸಹಿತ ಹಲವು ತಾಣಗಳಲ್ಲಿ ಪೂರ್ತಿ ಸಿನಿಮಾ ಲಭ್ಯವಾಗಿದೆ ಎಂದು ಡಿಎನ್ಎ ವರದಿ ಮಾಡಿದೆ.

ಆರ್ಆರ್ಆರ್ ಚಿತ್ರದ ಕುರಿತು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಉತ್ತಮ ವಿಮರ್ಶೆ ಹಂಚಿಕೊಂಡಿದ್ದಾರೆ. ಅಲ್ಲದೆ, ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಅವರ ನಟನೆಗೆ ಶಹಬ್ಬಾಸ್ ನೀಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ‘ರಾಧೇ ಶ್ಯಾಮ್‘ ಚಿತ್ರವೂ ಪೈರಸಿಗೆ ಸಿಲುಕಿತ್ತು.

ರುದ್ರ ರಮಣೀಯ ಆರ್ಆರ್ಆರ್: ಸಾಮಾಜಿಕ ಮಾಧ್ಯಮಗಳಲ್ಲಿ ವೀಕ್ಷಕರ ವಿಮರ್ಶೆ

ಆರ್ಆರ್ಆರ್ ಸಿನಿಮಾ ಸೋರಿಕೆಯಾಗುತ್ತಿದ್ದಂತೆ, ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಪೈರಸಿ ಸಿನಿಮಾ ವೀಕ್ಷಿಸದಂತೆ ಮನವಿ ಮಾಡಿಕೊಂಡಿದ್ದಾರೆ.

#BoycottRRR | ಚಿತ್ರಮಂದಿರಗಳ ಮಾಲೀಕರ ಮನವೊಲಿಕೆ ಯತ್ನ: ಕೆವಿಎನ್ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.