ವರ್ಷಾಂತ್ಯಕ್ಕೆ ಒಂದೂ ಕನ್ನಡ ಚಿತ್ರ ತೆರೆಗೆ ಬಾರದೆ ಅಚ್ಚರಿ ಮೂಡಿಸಿದೆ. ತೆಲುಗಿನ ಪ್ರಭಾಸ್ ನಟಿಸಿ, ‘ಕೆ.ಜಿ.ಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸಿರುವ ‘ಸಲಾರ್’ ಇಂದು(ಡಿ.22) ತೆರೆ ಕಾಣುತ್ತಿರುವ ಏಕೈಕ ಕನ್ನಡ ಚಿತ್ರವಾಗಿದೆ.

ಇದು ಕೂಡ ನೇರ ಕನ್ನಡ ಚಿತ್ರವಲ್ಲ; ತೆಲುಗಿನಿಂದ ಡಬ್ ಆಗಿರುವುದು. ಹೀಗಾಗಿ ಒಂದು ರೀತಿಯಲ್ಲಿ ಈ ವಾರ ಯಾವುದೇ ಚಿತ್ರ ತೆರೆ ಕಾಣುತ್ತಿಲ್ಲ. ಹಿಂದಿಯಲ್ಲಿ ಶಾರೂಕ್ ಖಾನ್ ನಟನೆಯ ‘ಡಂಕಿ’ ಕೂಡ ಗುರುವಾರ ತೆರೆಕಂಡಿದ್ದು, ಈ ಎರಡು ದೊಡ್ಡ ಚಿತ್ರಗಳಿಗೆ ಈ ವಾರ ಕನ್ನಡ ಚಿತ್ರರಂಗ ದಾರಿ ಬಿಟ್ಟುಕೊಟ್ಟಿದೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದಲ್ಲಿ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ತಾಂತ್ರಿಕವಾಗಿ ‘ಕೆಜಿಎಫ್’ ತಂಡವೇ ಇದೆ. ರವಿ ಬಸ್ರೂರು ಸಂಗೀತ, ಭುವನ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ಮೂಲ ತೆಲುಗು ಸಿನಿಮಾವಾಗಿರುವುದರಿಂದ ಕನ್ನಡ ಅವತರಣಿಕೆ ಬೆರೆಳೆಣಿಕೆ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.