ಲಾಸ್ ಏಂಜಲೀಸ್: ‘ದಿಸ್ ಮೂಮೆಂಟ್’ ಆಲ್ಬಮ್‌ಗಾಗಿ ಗಾಯಕ ಶಂಕರ್ ಮಹದೇವನ್, ತಬಲ ವಾದಕ ಜಾಕೀರ್ ಹುಸೇನ್, ಗಿಟಾರಿಸ್ಟ್ ಜಾನ್ ಮೆಕ್ಲಾಲಿನ್, ಪಿಟೀಲು ವಾದಕ ಗಣೇಶ್ ರಾಜಗೋಪಾಲನ್, ತಾಳ ವಾದಕ ವಿ.ಸೆಲ್ವಗಣೇಶ್ ಅವರನ್ನೊಳಗೊಂಡ ಫ್ಯೂಷನ್ ಬ್ಯಾಂಡ್ ‘ಶಕ್ತಿ’, ಈ ಬಾರಿಯ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ‘Best Global Music Album’ ಪ್ರಶಸ್ತಿ ಪಡೆದಿದೆ.

ಅಮೆರಿಕದ ಲಾಸ್ ಏಂಜಲೀಸ್‌ನ ಕ್ರಿಪ್ಟೋ ಡಾಟ್ ಕಾಮ್ ಅರೇನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಯಕಿಯರಾದ ಟೆಲರ್ ಸ್ವೀಫ್ಟ್, ಮಿಲ್ಲಿ ಸೈರಸ್, ಬಿಲ್ಲಿ ಐರಿಶ್, ರ್‍ಯಾಪ್ ಗಾಯಕಿ ಡೊಜಾ ಕ್ಯಾಟ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಇದೇ ಸಮಾರಂಭದಲ್ಲಿ ಭಾರತದ ಸುಪ್ರಸಿದ್ಧ ಕೊಳಲು ವಾದಕ ರಾಕೇಶ್ ಚೌರಾಸಿಯಾ, ಎರಡು ಪ್ರಶಸ್ತಿ ಗೆದ್ದಿದ್ದಾರೆ.

ಅಂತಿಮ ಸುತ್ತಿನಲ್ಲಿ ಸುಸಾನಾ ಬಾಕಾ, ಬೊಕಾಂಟೆ, ಬರ್ನಾ ಬಾಯ್ ಮತ್ತು ಡೇವಿಡೊ ಅವರಂತಹ ಪ್ರಸಿದ್ಧ ಕಲಾವಿದರಿಂದ ಕಠಿಣ ಸ್ಪರ್ಧೆಯನ್ನು ಎದುರಿಸಿದ ಶಕ್ತಿ ಬ್ಯಾಂಡ್, ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಶಕ್ತಿ – ಶಾಸ್ತ್ರೀಯ ಸಂಗೀತವನ್ನು ಪಾಶ್ಚಿಮಾತ್ಯ ಸಂಗೀತದೊಂದಿಗೆ ಸಂಯೋಜಿಸುವ ಒಂದು ಫ್ಯೂಷನ್ ಬ್ಯಾಂಡ್ ಆಗಿದ್ದು, 1973ರಲ್ಲಿ ಗಿಟಾರಿಸ್ಟ್ ಜಾನ್ ಮೆಕ್ಲಾಲಿನ್ ಇತರ ಸಂಗೀತಗಾರರ ಸಹಯೋಗದೊಂದಿಗೆ ಸ್ಥಾಪಿಸಿದ್ದರು. 1978ರಲ್ಲಿ ಬ್ಯಾಂಡ್‌ನಿಂದ ಸ್ಥಾಪಕ ಸದಸ್ಯರು ಬೇರ್ಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.