ಶಿವಾಜಿ ಸುರತ್ಕಲ್ ಭಾಗ–1 ಒಂದಿಷ್ಟು ಕುತೂಹಲ ಕೆರಳಿಸಿದ್ದು ಗೊತ್ತೇ ಇದೆ. ಈಗ ಶಿವಾಜಿ ಬೇಧಿಸಿದ ಹೊಸ ಪ್ರಕರಣ ಯಾವುದು ಎಂಬ ಕುತೂಹಲ ಪ್ರೇಕ್ಷಕನದ್ದು. ಅದನ್ನು ಹೇಳಲಿದೆ ‘ಶಿವಾಜಿ ಸುರತ್ಕಲ್ 2 ’- ದ ಮಿಸ್ಟೀರಿಯಸ್ ಕೇಸ್ ಆಫ಼್ ಮಾಯಾವಿ. ಇದು ನಟ, ನಿರ್ದೇಶಕ ರಮೇಶ್ ಅರವಿಂದ್ ಅವರ 103ನೇ ಚಿತ್ರ. ಚಿತ್ರ ಏಪ್ರಿಲ್ 14ರಂದು ತೆರೆ ಕಾಣಲು ಮುಹೂರ್ತ ನಿಗದಿಯಾಗಿದೆ.

ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ಮೂಲಕ ನಿರ್ಮಾಣ ಮಾಡುತ್ತಿರುವವರು ಅನೂಪ್ ಗೌಡ ಮತ್ತು ರೇಖಾ ಕೆ.ಎನ್. ಅವರು. ಅಭಿಜಿತ್ ವೈ.ಆರ್. ಚಿತ್ರಕಥೆಗೆ ಸಾಥ್ ನೀಡಿದ್ದಾರೆ. ಗುರುಪ್ರಸಾದ್ ಎಂ.ಜಿ. ಮತ್ತು ದರ್ಶನ್ ಅಂಬಟ್ ಅವರ ಛಾಯಾಗ್ರಹಣವಿದೆ. ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ರಮೇಶ್ ಅರವಿಂದ್ ಜೊತೆ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತಾ ಶೃಂಗೇರಿ, ರಾಘು ರಮಣಕೊಪ್ಪ, ವಿದ್ಯಾ ಮೂರ್ತಿ, ಆರಾಧ್ಯ ತಾರಾಗಣದಲ್ಲಿದ್ದಾರೆ.

ಈ ಚಿತ್ರ ಶಿವಾಜಿಯ ಬುದ್ಧಿವಂತಿಕೆಗೆ ಸಾಕಷ್ಟು ಸವಾಲನ್ನೊಡ್ಡಿದೆ. ಇದು ಶಿವಾಜಿಯ ಕೇಸ್ ನಂಬರ್ 131. ಶಿವಾಜಿಯ ಖಾಸಗಿ ಬದುಕೂ ತೆರೆದುಕೊಂಡಿದೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ರಾಜನ್ ಅವರ ಸೌಂಡ್ ಎಫೆಕ್ಟ್ ಇದೆ. ಕೆಆರ್ಜಿ ಸ್ಟುಡಿಯೋಸ್ ಮೂಲಕ ಚಿತ್ರ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.