ಅದ್ಭುತ ನಟನೆ ಹಾಗೂ ಸೌಂದರ್ಯದಿಂದ ಹೆಸರು ಗಳಿಸಿರುವ ನಟಿ ಶ್ರುತಿ ಹಾಸನ್ ಕೇವಲ ಪ್ರತಿಭಾವಂತ ನಟಿಯಷ್ಟೇ ಅಲ್ಲ. ತಂದೆ ಕಮಲ್ ಹಾಸನ್ರಂತೆ ಅನುಕೂಲ ಹಾಗೂ ಅವಶ್ಯಕತೆಗೆ ತಕ್ಕಂತೆ ಪರಿಸ್ಥಿತಿ ಬಿಗಿಗೊಳಿಸುವ ಹಾಗೂ ಸಡಿಲಗೊಳಿಸುವ ಸಾಮರ್ಥ್ಯವನ್ನೂ ಹೊಂದಿದ್ದಾರೆ.

ಇತ್ತೀಚೆಗೆ ಶ್ರುತಿ ಮದ್ಯ ಸೇವನೆ ನಿಲ್ಲಿಸಿದ್ದರು. ಈ ಬಗ್ಗೆ ಅವರ ಬಳಿ ಕಾರಣ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ; ‘ನಾನು ನನ್ನ ಅನೇಕ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದೆ. ರಾತ್ರಿಯಿಡೀ ಕುಡಿದಿದ್ದು ಇದೆ. ಸಾಮಾನ್ಯವಾಗಿ ವೀಕೆಂಡ್ ಎಂದುಕೊಂಡು ಶನಿವಾರ ರಾತ್ರಿ ಮಾಡುವ ಪಾರ್ಟಿಗಿಂತಲೂ ಕೆಲವು ಸಂದರ್ಭಗಳಲ್ಲಿ ಹೆಚ್ಚೇ ಕುಡಿಯುತ್ತಿದ್ದೆ. ಹಾಗಾಗಿ ಇಷ್ಟು ದಿನ ಕುಡಿದಿದ್ದೆ ಸಾಕು, ಇನ್ನು ಮುಂದೆ ಡ್ರಿಂಕ್ಸ್ ಮುಟ್ಟುವುದಿಲ್ಲ ಎಂಬ ನಿರ್ಧಾರ ಮಾಡಿದ್ದೇನೆ. ಆ ಮೂಲಕ ಆಲ್ಕೋಹಾಲ್ ಕೆಟ್ಟದ್ದೋ ಒಳ್ಳೆಯದೋ ಎಂಬುದರ ಬಗ್ಗೆ ನಾನು ಭೋದನೆ ಮಾವುದಿಲ್ಲ. ಆದರೆ ಕುಡಿತ ಬಿಟ್ಟ ಮೇಲೆ ನನ್ನ ಜೀವನ ಚೆನ್ನಾಗಿದೆ ಎಂಬುದನ್ನಷ್ಟೇ ನಾನು ಹೇಳಬಲ್ಲೆ’ ಎಂದಿದ್ದಾರೆ.

ಇದೇ ವೇಳೆ ವಿವಾದಗಳು ಹಾಗೂ ಟ್ರೋಲ್ಗಳನ್ನು ನೀವು ಹೇಗೆ ಎದುರಿಸುತ್ತೀರಿ ಎಂಬ ಪ್ರಶ್ನೆಗೆ ‘ಒಬ್ಬ ಗಂಡಸು ಕುಡಿದರೆ ಅದನ್ನು ಯಾರೂ ಬೊಟ್ಟು ಮಾಡಿ ತೋರಿಸುವುದಿಲ್ಲ. ಅದೇ ಒಬ್ಬ ಮಹಿಳೆ ಕುಡಿದರೆ ಅದು ವಿವಾದಕ್ಕೆ ಎಡೆ ಮಾಡಿದಂತಾಗುತ್ತದೆ. ಅದು ನಿಜಕ್ಕೂ ನಮ್ಮ ಮನಃಸ್ಥಿತಿಯನ್ನು ತೋರಿಸುತ್ತದೆ. ನಿಮಗೆ ಗೊತ್ತೆ, ಭಾರತದ ಅನೇಕ ಹಳ್ಳಿಗಳಲ್ಲಿ ಹೆಂಗಸರು ಗಂಡನ ಹೊಡೆತ ತಡೆದುಕೊಳ್ಳುವ ಸಲುವಾಗಿ ಪ್ರತಿದಿನ ಕುಡಿಯುತ್ತಾರೆ. ನೀವೇಕೆ ಅಂತಹ ಸಮಸ್ಯೆಗಳನ್ನು ಪರಿಹರಿಸುವತ್ತ ಮನಸ್ಸು ಮಾಡುವುದಿಲ್ಲ’ ಎಂದು ಖಡಕ್ ಆಗಿ ಮರುಪ್ರಶ್ನಿಸುವ ಧಾಟಿಯಲ್ಲಿ ಉತ್ತರಿಸಿದ್ದಾರೆ.

ವಿವಾದಗಳನ್ನು ಅರಗಿಸಿಕೊಳ್ಳುವ ಕಲೆ ಶ್ರುತಿಗೆ ತನ್ನ ತಂದೆಯಿಂದ ಬಳುವಳಿಯಾಗಿ ಪಡೆದಿದ್ದಾರೆ ಎಂಬುದನ್ನು ಪ್ರತ್ಯೇಕಿಸಿ ಹೇಳಬೇಕಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.