ಮುಂಬೈ: ವಿಚ್ಛೇದನ ವದಂತಿ ನಡುವೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾನ್ಕೊವಿಕ್ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ವೊಂದು ಸದ್ದು ಮಾಡಿದ್ದು, ಹಲವು ಸಂಶಯಗಳನ್ನು ಹುಟ್ಟುಹಾಕಿದೆ.

ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಒಂದನ್ನು ಹಾಕಿರುವ ನತಾಶಾ, ‘ಯಾರೋ ಒಬ್ಬರು ಬೀದಿಗೆ ಇಳಿಯಲಿದ್ದಾರೆ’ ಎಂದು ಕಾರು ಮತ್ತು ಸ್ಮೈಲಿ ಇಮೋಜಿಯನ್ನು ಬಳಸಿದ್ದಾರೆ. ಸಂಚಾರ ನಿಯಮಗಳನ್ನು ವಿವರಿಸುವ ಚಾರ್ಟ್‌ನ ಚಿತ್ರದ ಮೇಲೆ ಈ ಪೋಸ್ಟ್ ಅನ್ನು ಬರೆಯಲಾಗಿದೆ.

ನತಾಶಾ ಅವರ ಪೋಸ್ಟ್ ಅನ್ನು ನಾನಾ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದ್ದು, ಯಾರನ್ನಾದರೂ ಗುರಿಯಾಗಿಸಿಕೊಂಡು ಪೋಸ್ಟ್ ಮಾಡಲಾಗಿದೆಯೇ? ಎಂಬ ಬಗ್ಗೆ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ಡ್ರೈವಿಂಗ್ ಕಲಿಯುತ್ತಿರುವ ಬಗ್ಗೆ ನಟಿ ಮಾರ್ಮಿಕವಾಗಿ ತಿಳಿಸಿರಬಹುದು ಎಂದು ಕೆಲ ನೆಟ್ಟಿಗರು ವಾದ ಮಾಡಿದರೆ, ಹಾರ್ದಿಕ್ ಪಾಂಡ್ಯರನ್ನು ಗುರಿಯಾಗಿಸಿಕೊಂಡೇ ಈ ಪೋಸ್ಟ್ ಹಾಕಲಾಗಿದೆ ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ವಿಚ್ಛೇದನ ನಂತರ ಹೊಸ ಜೀವನ ಪ್ರಾರಂಭಿಸುವ ಬಗ್ಗೆ ಪರೋಕ್ಷವಾಗಿ ಹೇಳಿರಬಹುದು ಎಂದೂ ಹೇಳಿದ್ದಾರೆ.

2020ರಲ್ಲಿ ಸರಳ ವಿವಾಹವಾಗಿದ್ದ ಪಾಂಡ್ಯ–ನತಾಶಾ ದಂಪತಿ, 2023ರಲ್ಲಿ ಕ್ರಿಶ್ಚಿಯನ್–ಹಿಂದೂ ಸಂಪ್ರದಾಯದಂತೆ ಅದ್ಧೂರಿ ವಿವಾಹವಾಗಿದ್ದರು. ದಂಪತಿಗೆ ಅಗಸ್ತ್ಯ ಎಂಬ ಮಗನಿದ್ದಾನೆ.

ವಿಚ್ಛೇದನ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ನಿನ್ನೆಯಿಂದಲೇ ಚರ್ಚೆಗಳು ಪ್ರಾರಂಭವಾಗಿದ್ದು, ನತಾಶಾ ಆಗಲಿ, ಹಾರ್ದಿಕ್ ಪಾಂಡ್ಯ ಆಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.