ಮುಂಬೈ: ಬಾಲಿವುಡ್ನಲ್ಲಿ ವಿಭಿನ್ನ ಉಡುಗೆಯಿಂದ ಗಮನ ಸೆಳೆಯುವ ನಟಿಯರಲ್ಲಿ ಸೋನಮ್ ಕಪೂರ್ ಕೂಡ ಒಬ್ಬರು. ಇತ್ತೀಚೆಗೆ ಸೋನಮ್ ತಮ್ಮ ಗೆಳತಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅಮ್ಮನ 35 ವರ್ಷ ಹಳೆಯ ಸೀರೆಯನ್ನುಟ್ಟು ಮಿಂಚಿದ್ದಾರೆ.

ಸೋನಮ್, ತಾಯಿ ಸುನೀತಾ ಕಪೂರ್ ಅವರ ಕೆಂಪು ಬಣ್ಣದ ಘರ್ಚೋಲಾ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಘರ್ಚೋಲಾ ಸೀರೆಗಳು ಗುಜರಾತ್ ಮೂಲದ್ದಾಗಿದೆ. ರೇಷ್ಮೆ ಮತ್ತು ಜರಿ ದಾರಗಳೊಂದಿಗೆ ಚೆಕರ್ಡ್ ಮಾದರಿಯಲ್ಲಿ ಹತ್ತಿ ಅಥವಾ ರೇಷ್ಮೆಯ ಮೇಲೆ ನೇಯಲಾಗುತ್ತದೆ. ಸಾಂಪ್ರದಾಯಿಕ ಕುಂದನ್ ಆಭರಣಗಳನ್ನು ಸೋನಮ್ ಧರಿಸಿದ್ದರು. ಜತೆಗೆ ಅವರು ಧರಿಸಿದ್ದ ಚೋಕರ್ ನೆಕ್ಲೇಸ್, ಕಿವಿಯೋಲೆಗಳು, ಮಾಂಗ್ ಟಿಕ್ಕಾ ಬಳೆಗಳು ಸೋನಮ್ ಉಡುಪಿನ ಮೆರುಗನ್ನು ಹೆಚ್ಚಿಸಿತ್ತು.

ಈ ಕುರಿತು ಸೋನಮ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

‘ನನ್ನ ಅಮ್ಮನ 35 ವರ್ಷದ ಘರ್ಚೋಲಾ. ಈ ಸೀರೆ ಮತ್ತು ಕುಪ್ಪಸವನ್ನು ನನಗೆ ನೀಡಿದ್ದಕ್ಕಾಗಿ ಧನ್ಯವಾದಗಳು ಅಮ್ಮಾ, ಘರ್ಚೋಲಾ ಎಂದರೇನು ಮತ್ತು ಅದರ ಮಹತ್ವವೇನು ಎಂದು ನಿಮಗೆ ತಿಳಿದಿದ್ದರೆ ಕಾಮೆಂಟ್ನಲ್ಲಿ ತಿಳಿಸಿ’ ಎಂದು ಕ್ಯಾಪ್ಶನ್ನಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.