ಏಳು ವರ್ಷಗಳ ಬಳಿಕ ಮಾಲಿವುಡ್ಗೆ ಮರಳುತ್ತಿದ್ದಾರೆ ಸೋನು ಗೌಡ. ಇಂತಿ ನಿನ್ನ ಪ್ರೀತಿಯ ಚಿತ್ರದಲ್ಲಿ ಗಮನ ಸೆಳೆದ ಸೋನು ಗೌಡ ಬಳಿಕ ಮಲಯಾಳಂ ಚಿತ್ರದಲ್ಲಿ ಮುಮ್ಮಟ್ಟಿ ಅವರಿಗೆ ಜೋಡಿ ಆಗಿದ್ದರು. ‘ಫಹಾದ್ ಫಾಸಿಲ್’, ‘ಒನ್ಬೈಟು’ ಅವರು ನಟಿಸಿದ ಪ್ರಮುಖ ಚಿತ್ರಗಳು. ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ಅಭಿನಯದ ‘ಯುವರತ್ನ’ದಲ್ಲೂ ಸೋನು ಗೌಡ ಪ್ರಮುಖ ಪಾತ್ರದಲ್ಲಿದ್ದಾರೆ.

ಮುಂದಿನ ಏಪ್ರಿಲ್ 9ರಂದು ತ್ರಿಶೂರ್ನಲ್ಲಿ ಹೊಸ ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಚಿತ್ರದಲ್ಲಿ ಸೋನು ಅವರದ್ದು ಗಾಯಕಿಯ ಪಾತ್ರ. ಪಾತ್ರದ ನಿರೂಪಣೆಯು ಗಾಯಕಿ ಮತ್ತು ಅವಳ ತಾಯಿಯ ಸುತ್ತ ಸುತ್ತುತ್ತದೆ. ಇದು ವಿಷಯ-ಆಧಾರಿತ ಚಿತ್ರವಾಗಿದ್ದು, ಚೊಚ್ಚಲ ನಿರ್ದೇಶಕ ಸುನಿಲ್ ಸುಬ್ರಹ್ಮಣ್ಯ ನಿರ್ದೇಶಿಸಲಿದ್ದಾರೆ ಎಂದು ಚಿತ್ರ ತಂಡದ ಮೂಲಗಳು ಹೇಳಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸೋನು ಗೌಡ, ‘ಮಲಯಾಳಂ ಚಿತ್ರದಲ್ಲಿ ಕೆಲಸ ಮಾಡುವುದೂ ನನಗೆ ಇಷ್ಟ. ಅಲ್ಲಿ ನನ್ನ ಪಾತ್ರ ಹೇಗಿರುತ್ತದೆ ಎಂಬ ಕುತೂಹಲ ನನಗೂ ಇದೆ. ಸದ್ಯ ‘ಯುವರತ್ನ’ದ ಬಿಡುಗಡೆಯನ್ನು ಕಾತರದಿಂದ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ ಸೋನುಗೌಡ.

ಹೊಸ ಚಿತ್ರವು ಚಿತ್ರದಲ್ಲಿ ಕರ್ನಾಟಕ ಮತ್ತು ಮಲಯಾಳಂ ಪ್ರತಿಭೆಗಳು ಬೆರೆತಿವೆ. ಚಿತ್ರೋದ್ಯಮದ ಬೆಳವಣಿಗೆ ಈಗ ಸಕಾರಾತ್ಮಕವಾಗಿದೆ. ಎಲ್ಲ ಭಾಷೆಗಳಲ್ಲೂ ಸಾಕಷ್ಟು ಬರಹಗಾರರು ಇದ್ದಾರೆ. ವೈವಿಧ್ಯಮಯ ಪಾತ್ರಗಳಿಗೆ ಈಗ ಸಾಕಷ್ಟು ಅವಕಾಶ ಇದೆ ಎಂದಿದ್ದಾರೆ ಸೋನು ಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.