ಬೆಂಗಳೂರು: ಎಲ್ಲಾ ವರ್ಗದ ಜನರನ್ನು ಆಕರ್ಷಿಸುವ ರಾಮಾಯಣದ ಕಥೆಗಳು, ಧಾರಾವಾಹಿಗಳು ಎಂದಿಗೂ ಹೊಸತರಂತೆ ಕಾಣುತ್ತದೆ. ಕೋವಿಡ್ ಕಾಲದಲ್ಲಿ ಹಿಂದಿ ಭಾಷೆಯ ರಾಮಾಯಣ, ಮಹಾಭಾರತ, ರಾಧಾಕೃಷ್ಣ ಧಾರಾವಾಹಿಗಳು ಕನ್ನಡದಲ್ಲಿ ಪ್ರಸಾರಗೊಂಡು ಜನರನ್ನು ಸೆಳೆದಿದ್ದವು. ಇದೀಗ ಉದಯ ಟಿವಿಯಲ್ಲಿ ಮತ್ತೆ ‘ಶ್ರೀಮದ್ ರಾಮಾಯಣ’ವನ್ನು ಪ್ರಸಾರ ಮಾಡಲಾಗುತ್ತಿದೆ.

ಇದೇ 20ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 6 ಕ್ಕೆ ಪ್ರಸಾರ ಮಾಡಲಾಗುತ್ತಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಉದಯ ಟಿವಿ ‘ಅಯೋಧ್ಯೆಯ ಪುತ್ರ, ಕಿಷ್ಕಿಂದೆಯ ಮಿತ್ರ, ಶುರುವಾಗಲಿದೆ ಮರ್ಯಾದಾ ಪುರುಷೋತ್ತಮನ ಜೀವನಗಾಥೆ. ಹೊಚ್ಚಹೊಸ ಧಾರಾವಾಹಿ 'ಶ್ರೀಮದ್ ರಾಮಾಯಣ' ಮೇ 20 ರಿಂದ ಸಂಜೆ 6 ಗಂಟೆಗೆ’ ಎಂದು ಬರೆದುಕೊಂಡಿದೆ.

ವಿಶೇಷ ಬಹುಮಾನ

ಧಾರಾವಾಹಿ ಪ್ರಸಾರದ ಜತೆಗೆ ವೀಕ್ಷಕರನ್ನು ಸೆಳೆಯಲು ವಾಹಿನಿ ವಿಶೇಷ ಬಹುಮಾನವನ್ನೂ ಘೋಷಿಸಿದೆ. ಶ್ರೀಮದ್ ರಾಮಾಯಣದ ಪ್ರತಿ ಸಂಚಿಕೆಯ 250 ವೀಕ್ಷಕರಿಗೆ ತಲಾ ಒಂದು ಸಾವಿರ ನಗದು ಬಹುಮಾನ ಗೆಲ್ಲುವ ಅವಕಾಶ ನೀಡುತ್ತಿದೆ.

ಧಾರಾವಾಹಿ ವೀಕ್ಷಿಸಿ ಕೊನೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಮಿಸ್ಡ್ ಕಾಲ್ ಮೂಲಕ ಸರಿ ಉತ್ತರ ನೀಡಿದರೆ ಅದೃಷ್ಟಶಾಲಿ 250 ವೀಕ್ಷಕರಿಗೆ ಪ್ರತಿ ಸಂಚಿಕೆಗೆ ತಲಾ ₹1000 ನಗದು ಬಹುಮಾನ ನೀಡಲಾಗುವುದು ಎಂದು ವಾಹಿನಿ ಮಾಹಿತಿ ಹಂಚಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.