ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ನಟಿಸಿರುವ ‘ಕರಟಕ ದಮನಕ’ ಸಿನಿಮಾ ಶಿವರಾತ್ರಿಗೆ (ಮಾರ್ಚ್ 8) ಬಿಡುಗಡೆಯಾಗುತ್ತಿದ್ದು, ಚಿತ್ರದ ಪಾತ್ರಗಳ ಪರಿಚಯ ಮಾಡುವ ವಿಡಿಯೊವನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಶಿವರಾಜ್‌ಕುಮಾರ್ ಅವರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡ ಸುದೀಪ್, ‘ಶಿವಣ್ಣನ ಜೊತೆ ನಟನೆಯನ್ನೂ ಮಾಡಿದ್ದೇನೆ. ಅವರಿಗೆ ಆ್ಯಕ್ಷನ್ ಕಟ್ ಕೂಡಾ ಹೇಳಿದ್ದೇನೆ. ಪ್ರಭುದೇವ ಅವರು ನನಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹರಿಕೃಷ್ಣ ಅವರು ನನ್ನ ಕೆಲವು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ರಾಕ್‌ಲೈನ್ ಅವರೊಂದಿಗೆ ಸ್ನೇಹ, ಭಟ್ರ ಜೊತೆ ಸಲಿಗೆ. ಹೀಗಾಗಿ ‘ಕರಟಕ ದಮನಕ’ ಒಂದು ಫ್ಯಾಮಿಲಿ ಪ್ಯಾಕೇಜ್ ಸಿನಿಮಾ ಎಂದರೆ ತಪ್ಪಲ್ಲ. ಶಿವಣ್ಣ–ಪ್ರಭುದೇವ ಅವರು ಒಂದೇ ಫ್ರೇಮ್‌ನಲ್ಲಿ ಡ್ಯಾನ್ಸ್ ಮಾಡುವುದನ್ನು ನೋಡುವುದೇ ಅದ್ಭುತ. ಜೊತೆಗೆ ಇಬ್ಬರಲ್ಲೂ ಒಳ್ಳೆಯ ಕಾಮಿಡಿ ಟೈಮಿಂಗ್ ಇದೆ. ಇದೊಂದು ಬಹಳ ವಿರಳವಾದ ಕಾಂಬಿನೇಷನ್. ‘ಓಂ’ ಸಿನಿಮಾವನ್ನು ನಾನು ಮೊದಲ ವಾರದಲ್ಲೇ ಮೂರು ಬಾರಿ ನೋಡಿದ್ದೆ. ಈ ಸಿನಿಮಾ ಅಂದು ಗೇಮ್ ಚೇಂಜರ್ ಆಗಿತ್ತು. ‘ಸ್ಪರ್ಶ’ ಸಿನಿಮಾದ ಆಡಿಯೊ ಲಾಂಚ್ ಮಾಡಿದ್ದು ಶಿವಣ್ಣನೇ. ‘ವಿಲನ್’ನಲ್ಲಿ ಅವರೊಂದಿಗೆ ನಟನೆ ಮಾಡಲು ಅವಕಾಶ ಸಿಕ್ಕಿತ್ತು. ಅವರೊಬ್ಬರು ಮಜವಾದ, ಅದ್ಭುತವಾದ ವ್ಯಕ್ತಿ’ ಎಂದರು.

ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳಿರುವ ‘ಕರಟಕ ದಮನಕ’ ಚಿತ್ರವನ್ನು ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದು, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ನಾಯಕಿಯರಾಗಿ ಬಣ್ಣಹಚ್ಚಿದ್ದಾರೆ. ಉತ್ತರ ಕರ್ನಾಟಕದ ಬ್ಯಾಕ್‌ಡ್ರಾಪ್‌ನಲ್ಲಿ ಈ ಸಿನಿಮಾ ಕಥೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.