ನಿರ್ದೇಶಕಿ ಸುಮನ್ ಕಿತ್ತೂರು ಅವರು ಪುದುಚೇರಿಯಲ್ಲಿ ನೆಲೆಸಿರುವ ಸಾಫ್ಟ್‌ವೇರ್ ಎಂಜಿನಿಯರ್ ಶ್ರೀನಿವಾಸ್ ಅವರನ್ನು ಸರಳವಾಗಿ ವಿವಾಹ ಆಗಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ನಡೆದ ಈ ವಿವಾಹದಲ್ಲಿ ವಧು ಹಾಗೂ ವರನ ಕುಟುಂಬದ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು.

‘ಲಾಕ್‌ಡೌನ್ ಆಗಿದ್ದ ಕಾರಣ ಯಾರನ್ನೂ ಕರೆಯಲು ಆಗಿರಲಿಲ್ಲ. ವಿವಾಹದ ದಿನಾಂಕ ನಿಶ್ಚಯಿಸಲು ಎರಡೂ ಕುಟುಂಬದ ಸದಸ್ಯರು ಪುದುಚೇರಿಯಲ್ಲಿ ಸೇರಿದ್ದರು. ಆ ಹೊತ್ತಿನಲ್ಲೇ ಲಾಕ್‌ಡೌನ್ ಘೋಷಣೆಯಾಗಿ, ವಿಮಾನಗಳು ರದ್ದಾಗಿಬಿಟ್ಟವು. ಹಾಗಾಗಿ, ಪುದುಚೇರಿಯಲ್ಲೇ ಸರಳವಾಗಿ ವಿವಾಹ ಆಗಬೇಕಾಯಿತು’ ಎಂದರು ಸುಮನ್.

ಶ್ರೀನಿವಾಸ್ ಅವರ ತಾಯಿ ಶಿವಮೊಗ್ಗ ಜಿಲ್ಲೆಯ ಮಂಡಗದ್ದೆಯವರು, ತಂದೆ ಆಂಧ್ರಪ್ರದೇಶದ ಕಡಪದವರು. ಅವರ ಕುಟುಂಬ ಪುದುಚೇರಿಯಲ್ಲೇ ನೆಲೆಸಿದೆ. ಈ ಕುಟುಂಬವು ಸುಮನ್ ಅವರಿಗೆ ವರ್ಷಗಳಿಂದ ಪರಿಚಿತವಾಗಿತ್ತು. ಶ್ರೀನಿವಾಸ್ ಅವರು ಮೈಸೂರಿನಲ್ಲಿ ತಮ್ಮ ವೃತ್ತಿ ಮುಂದುವರಿಸಲಿದ್ದಾರಂತೆ.

‘ಕಿರಗೂರಿನ ಗಯ್ಯಾಳಿಗಳು’, ‘ಕಳ್ಳರ ಸಂತೆ’ ಸುಮನ್ ನಿರ್ದೇಶನದ ಕೆಲವು ಸಿನಿಮಾಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.