ನಟಿ ಸುಶ್ಮಿತಾ ಸೇನ್ ಅವರ ಸಹೋದರ ರಾಜೀವ್ ಸೇನ್ ಬಾಲಿವುಡ್ ಪ್ರವೇಶಿಸಲು ಸಿದ್ಧರಾಗಿದ್ದಾರೆ. ನಟ ವಿವೇಕ್ ಓಬೇರಾಯ್ ನಿರ್ಮಾಣ ಮಾಡುತ್ತಿರುವ ‘ಇಟಿ: ಕ್ಯಾನ್ ಯು ಸಾಲ್ವ್ ಯುವರ್ ಓನ್ ಮರ್ಡರ್’ ಚಿತ್ರದಲ್ಲಿ ಅವರು ನಾಯಕನಟನಾಗಿ ಅಭಿನಯಿಸಲಿದ್ದಾರೆ.

‘ಸಿನಿಮಾ, ನಟನೆ ನನ್ನ ಜೀವನದ ಮುಖ್ಯವಾದ ಭಾಗಗಳು. ಈ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಥ್ರಿಲ್ಲಿಂಗ್ ಆಗಿದೆ. ಮೊದಲ ಸಿನಿಮಾದಲ್ಲೇ ಇಂತಹ ಪಾತ್ರ ಸಿಕ್ಕಿರೋದು ನನ್ನ ಹೆಮ್ಮೆ’ ಎಂದು ರಾಜೀವ್ ಸೇನ್ ಹೇಳಿದ್ದಾರೆ.

ಈ ಚಿತ್ರಕ್ಕೆ ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವವರು ವಿಶಾಲ್ ಮಿಶ್ರಾ. ಈ ಸಿನಿಮಾದ ಉಳಿದ ಕಲಾವಿದರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಒಂದು ಕೊಲೆಯ ಸುತ್ತ ನಡೆಯುವ ಕತೆ ಈ ಸಿನಿಮಾದ್ದಾಗಿದ್ದು, ವಿವೇಕ್ ಒಬೇರಾಯ್ ತಮ್ಮ ಹೋಂಬ್ಯಾನರ್ ಒಬೇರಾಯ್ ಮೆಗಾ ಎಂಟರ್ಟೇನ್ಮೆಂಟ್ನಡಿ ಈ ಸಿನಿಮಾ ನಿರ್ಮಿಸಲಿದ್ದಾರೆ. ಮಂದಿರಾ ಎಂಟರ್ಟೇನ್ಮೆಂಟ್ ಕೂಡ ಇದಕ್ಕೆ ಬಂಡವಾಳ ಹೂಡಲಿದೆ.

ವಿವೇಕ್ ಒಬೇರಾಯ್ ಈ ಚಿತ್ರದ ಪೋಸ್ಟರ್ನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಅವರ ನಿರ್ಮಾಣದ ಮೊದಲ ಚಿತ್ರ. ಅಕ್ಟೋಬರ್ ತಿಂಗಳಲ್ಲಿ ಚಿತ್ರ ಸೆಟ್ಟೇರಲಿದೆ ಎಂದು ಟ್ವೀಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ವಿವೇಕ್ ಓಬೇರಾಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಕತೆ ‘ಪಿಎಂ ನರೇಂದ್ರ ಮೋದಿ’ ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ವಿವೇಕ್ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ದಕ್ಷಿಣ ಭಾರತದ ಸಿನಿಮಾದಲ್ಲಿ ಅವರು ಆ್ಯಕ್ಟೀವ್ ಆಗಿದ್ದು, ಮಲಯಾಳಂನ ‘ಲೂಸಿಫರ್', ತೆಲುಗಿನಲ್ಲಿ ‘ವಿನಯ ವಿಧೇಯ ರಾಮ', ಹಾಗೂ ಕನ್ನಡದ ‘ರುಸ್ತುಂ’ ಚಿತ್ರದಲ್ಲಿ ಅಭಿನಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.