ಮುಂಬೈ: ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಕುಮಾರ್ ಮೇಲಿನ ಅತ್ಯಾಚಾರ ಆರೋಪವನ್ನು ಟಿ-ಸಿರೀಸ್ ಅಲ್ಲಗಳೆದಿದೆ.

ಮಹಿಳೆಯ ಅತ್ಯಾಚಾರದ ಆರೋಪವು ಸುಳ್ಳು ಮತ್ತು ದುರುದ್ದೇಶದಿಂದ ಕೂಡಿದೆ ಎಂದು ಟಿ-ಸಿರೀಸ್ ಹೇಳಿಕೆ ನೀಡಿದೆ.

ಭೂಷಣ್ ಕುಮಾರ್ ಮೇಲೆ ದೂರು ದಾಖಲಿಸಿರುವ ಮಹಿಳೆಯ ವಿರುದ್ಧವೇ ಪ್ರತಿದೂರು ನೀಡಲಾಗಿದೆ ಎಂದು ಟಿ-ಸಿರೀಸ್ ಹೇಳಿದೆ.

ಟಿ-ಸಿರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ವಿರುದ್ಧ ಶುಕ್ರವಾರ ಅತ್ಯಾಚಾರ ಪ್ರಕರಣ ದಾಖಲಾಗಿದೆ.

'ಕ್ಯಾಸೆಟ್ ಕಿಂಗ್' ಎಂದೇ ಖ್ಯಾತರಾಗಿದ್ದ ದಿವಂಗತ ಗುಲ್ಶನ್ ಕುಮಾರ್ ಪುತ್ರ ಭೂಷಣ್ ಕುಮಾರ್ ಅವರು 30 ವರ್ಷದ ಮಹಿಳೆಯೊಬ್ಬರಿಗೆ ಕೆಲಸ ನೀಡುವ ಆಮಿಷ ಒಡ್ಡಿ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮುಂಬೈನ ಅಂಧೇರಿಯಲ್ಲಿರುವ (ಪಶ್ಚಿಮ) ಡಿ.ಎನ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.