ಹೈದರಾಬಾದ್: ತೆಲುಗು ಚಿತ್ರರಂಗದಲ್ಲಿ ಇತ್ತೀಚೆಗೆ ಸಖತ್ ಸುದ್ದಿ ಮಾಡುತ್ತಿರುವ ಚಿತ್ರ ಹನುಮ್ಯಾನ್ (HanuMan). ತೇಜ್ ಸಜ್ಜಾ ನಟನೆಯ ಈ ಸಿನಿಮಾ ಕಳೆದ ಶುಕ್ರವಾರ(ಜ.12) ಬಿಡುಗಡೆಯಾಗಿದ್ದು, ನಾಲ್ಕು ದಿನದಲ್ಲಿ ಜಗತ್ತಿನಾದ್ಯಂತ ಬಾಕ್ಸ್ ಆಫೀಸ್ನಲ್ಲಿ ₹100 ಕೋಟಿ ಗಳಿಕೆ ಮಾಡಿದೆ ಎಂದು ಚಿತ್ರತಂಡ ಮಂಗಳವಾರ ಹೇಳಿದೆ.

ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಸಿನಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರೊಡಕ್ಷನ್ ಹೌಸ್ ಪ್ರೈಮ್ ಶೋ ಎಂಟರ್ಟೈನ್ಮೆಂಟ್, ‘ಸಣ್ಣ ಚಿತ್ರ - ಪ್ರೇಕ್ಷಕರಿಂದ ದೊಡ್ಡ ನ್ಯಾಯ. ಗಲ್ಲಾಪೆಟ್ಟಿಗೆಯಲ್ಲಿ ಹನುಮಾನ್ನ ಘರ್ಜನೆ ಪ್ರತಿಧ್ವನಿಸಿದೆ. ಸೀಮಿತ ಥಿಯೇಟರ್ಗಳಲ್ಲಿ ಪ್ರದರ್ಶನ ಮತ್ತು ಕನಿಷ್ಠ ಟಿಕೆಟ್ ದರಗಳೊಂದಿಗೆ ಕೇವಲ 4 ದಿನಗಳಲ್ಲಿ ವಿಶ್ವದಾದ್ಯಂತ ₹100 ಕೋಟಿ ಗಳಿಕೆ ಕಂಡಿದೆ ಎಂದು ಹೇಳಿದೆ.

ಹನುಮಾನ್ ಚಿತ್ರದ ಕಥೆ ಅಂಜನಾದ್ರಿ ಎನ್ನುವ ಪುಟ್ಟ ಹಳ್ಳಿಯಲ್ಲಿ ಸಾಗುತ್ತದೆ. ಹನುಮಂತದ ರಕ್ತದ ಹನಿಯೊಂದು ಮಣಿಯಾಗಿ ಪರಿವರ್ತನೆಗೊಂಡು ಸಮುದ್ರದ ಆಳದಲ್ಲಿ ಭದ್ರವಾಗಿರುತ್ತದೆ. ಅದು ನಾಯಕನಿಗೆ ಸಿಕ್ಕಾಗ, ಆತನಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ, ಸೂಪರ್ಮ್ಯಾನ್ ಆಗಬೇಕೆಂದು ಆ ಮಣಿಯನ್ನು ಕದಿಯಲು ಬಂದ ಖಳನಾಯಕನಿಂದ ಸ್ವಂತ ಊರು ಮತ್ತು ಮಣಿಯನ್ನು ನಾಯಕ ಹೇಗೆ ರಕ್ಷಿಸುತ್ತಾನೆ ಎನ್ನುವುದು ಕಥೆಯ ಸಣ್ಣ ಸಾರ.

ಕಾಡಿನ ಮಧ್ಯೆ ಇರುವ ಅಂಜನಾದ್ರಿ ಊರು ಹಾಗೂ ಹನುಮಂತನ ಬೃಹತ್ ಮೂರ್ತಿಯ ಗ್ರಾಫಿಕ್ಸ್ ನೋಡುಗರನ್ನು ಅಚ್ಚರಿಗೊಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.