ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿನ್ನೋಟ | ಭಾರತೀಯ ಚಿತ್ರರಂಗ-2023: ಗೆಲುವಿನ ರಕ್ತಸಿಕ್ತ ಅಧ್ಯಾಯ

Published : 21 ಡಿಸೆಂಬರ್ 2023, 23:30 IST
Last Updated : 21 ಡಿಸೆಂಬರ್ 2023, 23:30 IST
ಫಾಲೋ ಮಾಡಿ
Comments
‘ಜೈಲರ್’ ಚಿತ್ರದಲ್ಲಿ ರಜನೀಕಾಂತ್
‘ಜೈಲರ್’ ಚಿತ್ರದಲ್ಲಿ ರಜನೀಕಾಂತ್
‘ಜೈಲರ್’ ಚಿತ್ರದಲ್ಲಿ ತಮನ್ನಾ ರಜನೀಕಾಂತ್
‘ಜೈಲರ್’ ಚಿತ್ರದಲ್ಲಿ ತಮನ್ನಾ ರಜನೀಕಾಂತ್
ಸಮಾಜದ ಹೊರಗೆ ಚೆನ್ನಾಗಿಲ್ಲ ಕುಟುಂಬ ಕುಳಿತು ನೋಡಲು ಸಾಧ್ಯವಿಲ್ಲ ಎಂಬ ವರದಿ ಬಂದ ದೊಡ್ಡ ಚಿತ್ರಗಳು ಈ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗೆಲುವು ಕಂಡಿವೆ. ಪಾಲಕರು ಕುಟುಂಬ ಕುಳಿತು ನೋಡಲು ಸಾಧ್ಯವಿಲ್ಲ ಎಂದು ದೂರುತ್ತಾರೆ. ಮಜವೆಂದರೆ ಈ ಎಲ್ಲ ಕ್ರೌರ್ಯಭರಿತ ಸಿನಿಮಾಗಳನ್ನು ಅತಿ ದೊಡ್ಡ ಪ್ರಮಾಣದಲ್ಲಿ ವೀಕ್ಷಿಸಿ ಗೆಲ್ಲಿಸಿದ್ದು 18–25 ವರ್ಷದೊಳಗಿನ ಮಕ್ಕಳು. 25 ವರ್ಷದಿಂದ ಚಿತ್ರರಂಗದಲ್ಲಿದ್ದರೂ ಪ್ರೇಕ್ಷಕರ ಪಲ್ಸ್‌ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಇದೇ ಗೆಲುವಿಗೆ ನಿಖರ ಕಾರಣವೆಂದು ಹೇಳಲು ಸಾಧ್ಯವಿಲ್ಲ.
–ಜಯಣ್ಣ, ಸಿನಿಮಾ ನಿರ್ಮಾಪಕ ವಿತರಕ
ಹಿಂದಿನಿಂದಲೂ ಇದೇ ಥರ ಇದ್ದಿದ್ದು ಅನ್ನಿಸುತ್ತದೆ. ಒಬ್ಬ ನಾಯಕ ಇರುತ್ತಾನೆ, ಅವನ ಎದುರಾಳಿ ಖಳನಾಯಕ. ಖಳನಾಯಕ ಹೆಣ್ಣನ್ನು ಅವಮಾನಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಅತ್ಯಾಚಾರ ಮಾಡುವ ದೃಶ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದ. ಈಗ ಅದರ ವಿಸ್ತೃತ ರೂಪವಿದೆ. ದುರಂತವೆಂಬಂತೆ ಈಗಿನ ಚಿತ್ರದ ನಾಯಕನಲ್ಲಿಯೇ ಖಳನಾಯಕನ ಗುಣಗಳು, ಬೈಗುಳಗಳು ಕಾಣಿಸುತ್ತಿವೆ. ಈಗಿನ ವಿಡಿಯೋ ಗೇಮ್‌ ಜನರೇಷನ್‌ಗೆ ಇಂತಹ ಥ್ರಿಲ್‌ಗಳೇ ಮನರಂಜನೆ ನೀಡಲೂಬಹುದು.
–ರೂಪಾ ರಾವ್‌, ನಿರ್ದೇಶಕಿ
Pathan
Pathan
ಕ್ರೈಂ, ಹಿಂಸೆ, ಸೆಕ್ಸ್‌ ಸಂಬಂಧಿತ ಸಿನಿಮಾಗಳು ಹೆಚ್ಚು ಆಸಕ್ತಿ ಹುಟ್ಟಿಸುತ್ತವೆ. ಜೀವನದಲ್ಲಿ ನೋಡದೇ ಇರುವುದನ್ನು ತೆರೆಯ ಮೇಲೆ ನೋಡಲು ಪ್ರೇಕ್ಷಕರು ಇಷ್ಟಪಡುತ್ತಾರೆ. ಯಾವುದನ್ನು ಮುಚ್ಚಿಟ್ಟಿರುತ್ತೇವೋ ಅದರ ಕುರಿತು ಆಸಕ್ತಿ ಹೆಚ್ಚು. ಹೀಗಾಗಿ ಹಿಂದಿನಿಂದಲೂ ಈ ರೀತಿ ಸಿನಿಮಾಗಳು ಬಂದಿವೆ. ಆದರೆ ತೋರಿಸುವ ರೀತಿ ಈಗ ಬದಲಾಗಿದೆ. ನಾಲ್ಕೈದು ವರ್ಷಗಳಿಂದ ಪ್ರೇಕ್ಷಕರು ಒಟಿಟಿಯಿಂದಾಗಿ ಪ್ರಪಂಚದ ಸಿನಿಮಾಗಳಿಗೆ ತೆರೆದುಕೊಂಡಿದ್ದಾರೆ. ಫಾರಿನ್‌ ಸಿನಿಮಾಗಳಲ್ಲಿ ಕ್ರೈಂ, ಸೆಕ್ಸ್‌ ಅನ್ನು ಅತಿ ವೈಭವೀಕರಿಸುತ್ತಾರೆ. ಒಟಿಟಿ ಯುಗದ ಪ್ರಭಾವವಿದು. ಸಿನಿಮಾ ನೋಡಲು ಯಾರನ್ನೂ ಬಲವಂತವಾಗಿ ತಂದು ಕೂರಿಸಲು ಆಗದು. ಪ್ರೇಕ್ಷಕ ಸ್ವಇಚ್ಛೆಯಿಂದ ನೋಡುತ್ತಿದ್ದಾನೆ.
–ಶಶಾಂಕ್‌ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT