ಉಡುಪಿ: ಆನಂದ್ ಕುಂಪಲ ಅವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ಇಲ್ಲಿನ ಕಲ್ಪನಾ ಥಿಯೇಟರ್‌ನಲ್ಲಿ ಜರುಗಿತು. ತುಳುನಾಡ ಬಾವುಟ ಹಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಬಳಿಕ ಸಾಯಿರಾಧಾ ಡೆವಲಪರ್ಸ್ ಮಾಲಕ ಮನೋಹರ್ ಶೆಟ್ಟಿ ಅವರು ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದರು. ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಮಾತನಾಡಿದರು. ಸಮಾಜಮುಖಿ ಸೇವೆ ಮಾಡಿರುವ ರವಿ ಕಟಪಾಡಿ, ಹುಲಿ ವೇಷ ಧರಿಸುವ ಸುಷ್ಮಾ ರಾಜ್, ಯೂಟ್ಯೂಬರ್ ಸಚಿನ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಉದ್ಯಮಿ ರಮೇಶ್ ಕಾಂಚನ್, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಹರಿಪ್ರಸಾದ್ ರೈ, ದಿನೇಶ್ ಕಿಣಿ, ಲಯನ್ಸ್ ಜಿಲ್ಲಾ ಗವರ್ನರ್ ಮುಹಮ್ಮದ್ ಹನೀಫ್, ಗಿರೀಶ್ ರಾವ್ ಇದ್ದರು. ಮಧುರಾಜ್ ನಿರ್ವಹಿಸಿದರು.

ಚಿತ್ರದಲ್ಲಿ ವಿನೀತ್ ಕುಮಾರ್ ನಾಯಕ ನಟ, ಸಮತಾ ಅಮೀನ್ ನಾಯಕಿಯಾಗಿ, ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಚೈತ್ರಾ ಶೆಟ್ಟಿ ಅಭಿನಯಿಸಿದ್ದಾರೆ. ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದಾರೆ. ನವೀನ್ ಕುಮಾರ್ ಶೆಟ್ಟಿ ನೃತ್ಯ ಸಂಯೋಜಿಸಿದ್ದಾರೆ. ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್‌ಟೈನ್‌ಮೆಂಟ್, ಎಚ್.ಪಿ.ಆರ್ ಫಿಲ್ಮ್ಸ್‌ನ ಹರಿಪ್ರಸಾದ್ ರೈ ಸಹಯೋಗದಲ್ಲಿ ಚಿತ್ರ ತೆರೆಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.