ಗುರುಮೂರ್ತಿ ನಿರ್ದೇಶನದ, ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ‘ಉಗ್ರಾವತಾರ’ ಸಿನಿಮಾ ನವೆಂಬರ್‌ನಲ್ಲಿ ತೆರೆಗೆ ಬರಲಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಅನ್ನು ನಟ ಉಪೇಂದ್ರ ಬಿಡುಗಡೆಗೊಳಿಸಿದರು. ಎಸ್‌ಜಿಎಸ್ ಕ್ರಿಯೇಶನ್ಸ್ ಅಡಿಯಲ್ಲಿ ಎಸ್.ಜಿ.ಸತೀಶ್ ನಿರ್ಮಾಣ ಮಾಡಿದ್ದಾರೆ.

‘ನಿರ್ದೇಶಕರ ಶ್ರಮ ಸಿನಿಮಾದ ಟ್ರೇಲರ್‌ನಲ್ಲೇ ಕಾಣಿಸುತ್ತದೆ. ಆದರೂ ಅವರು ದುಗಡದಿಂದ ಇದ್ದಾರೆ. ಮೊದಲ ಬಾರಿ ನನಗೂ ಅದೇ ಆಗಿತ್ತು. ಭವಿಷ್ಯದಲ್ಲಿ ನೀವು ಸ್ಟಾರ್ ನಿರ್ದೇಶಕರಾಗುತ್ತೀರಿ. ಮನೆಯಲ್ಲಿ ಪ್ರಿಯಾಂಕಾ ಉಗ್ರಾವತಾರ ನೋಡಿದ್ದೇನೆ. ಮುಂದೆ ಪ್ರೇಕ್ಷಕರು ತೆರೆಯಲ್ಲಿ ಇದನ್ನು ನೋಡಬಹುದು’ ಎಂದು ಚಟಾಕಿ ಹಾರಿಸಿದರು ಉಪೇಂದ್ರ.

‘ಪೊಲೀಸ್ ಅಧಿಕಾರಿ ಪಾತ್ರವನ್ನು ಮಾಡಲು ಸಾಧ್ಯವೇ ಎಂಬ ಪ್ರಶ್ನೆ ನನ್ನಲ್ಲಿ ಮೂಡಿತ್ತು. ಭಾರತದಲ್ಲಿ ಹೆಣ್ಣುಮಕ್ಕಳ ಮೇಲೆ ಶೋಷಣೆ ನಡೆಯುತ್ತಲೇ ಇದೆ. ಅದರ ವಿರುದ್ಧ ಈ ಸಿನಿಮಾದ ಕಥಾಹಂದರವಿದೆ’ ಎಂದರು ಪ್ರಿಯಾಂಕಾ ಉಪೇಂದ್ರ.

‘ಸಮಾಜದಲ್ಲಿ ನಡೆದಿರುವಂತಹ ಒಂದಷ್ಟು ನೈಜ ಅಂಶಗಳನ್ನು ಚಿತ್ರರೂಪಕ್ಕೆ ಬಳಸಲಾಗಿದೆ. ಪ್ರಿಯಾಂಕಾ ಅವರು ಈ ಚಿತ್ರದಿಂದ ಆ್ಯಕ್ಷನ್ ಕ್ವೀನ್ ಆಗಿದ್ದಾರೆ. ಐದು ಸಾಹಸಗಳು ವಿಭಿನ್ನವಾಗಿ ಸೆರೆಹಿಡಿಯಲಾಗಿದೆ. ನಾಲ್ಕು ಭಾಷೆಯ ಡಬ್ಬಿಂಗ್ ಮುಗಿದಿದೆ’ ಎಂದು ಮಾಹಿತಿ ನೀಡಿದರು ನಿರ್ದೇಶಕ ಗುರುಮೂರ್ತಿ.

ಚಿತ್ರದಲ್ಲಿ ರೋಬೊ ಗಣೇಶ್, ಲತಾ, ದರ್ಶನ್ ಸೂರ್ಯ, ಲಕ್ಷೀ ಶೆಟ್ಟಿ, ಚರಣ್, ಲೀಲಾ ಮೋಹನ್, ಕಾರ್ಯನ್ ಮುಂತಾದವರು ನಟಿಸಿದ್ದಾರೆ. ಕೃಷ್ಣ ಬಸ್ರೂರು ಸಂಗೀತ ಸಂಯೋಜನೆ, ನಂದಕುಮಾರ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.