‘ಉಪ್ಪಿ–2’ ರಿಲೀಸ್ ಆದ 9 ವರ್ಷಗಳ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ಆ್ಯಕ್ಷನ್ ಕಟ್ ಹೇಳಿರುವ ‘UI’ ಸಿನಿಮಾ ಬಿಡುಗಡೆ ಯಾವಾಗ ಎನ್ನುವ ಪ್ರಶ್ನೆ ಕೇಳಿಬರುತ್ತಿರುವಾಗಲೇ, ಉಪೇಂದ್ರ ಹಂಗೆರಿ ರಾಜಧಾನಿ ಬುಡಾಪೆಸ್ಟ್‌ನಲ್ಲಿ ಬೀಡುಬಿಟ್ಟಿದ್ದಾರೆ.

ತಮ್ಮ ‘UI’ ಸಿನಿಮಾಗಾಗಿ, ಚಿತ್ರದ ಸಂಗೀತ ನಿರ್ದೇಶಕ ಬಿ.ಅಜನೀಶ್ ಲೋಕನಾಥ್ ಜೊತೆಗೂಡಿ ಉಪೇಂದ್ರ ಬುಡಾಪೆಸ್ಟ್‌ನಲ್ಲಿ ಸಂಗೀತವನ್ನು ರೆಕಾರ್ಡ್ ಮಾಡುತ್ತಿದ್ದಾರೆ. 90 ಪೀಸ್ ಆರ್ಕೆಸ್ಟ್ರಾ ಬಳಸಿಕೊಂಡು ಸಂಗೀತ ರೆಕಾರ್ಡ್ ಮಾಡಲಾಗುತ್ತಿದೆ. ಯುರೋಪ್‌ನ ವಿಶ್ವ-ದರ್ಜೆಯ ಬುಡಾಪೆಸ್ಟ್ ಆರ್ಕೆಸ್ಟ್ರಾದೊಂದಿಗೆ ಈ ರೆಕಾರ್ಡಿಂಗ್ ನಡೆಯುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.

‘ಸರಿಲೇರು ನೀಕೆವ್ವರು’, ‘ವಿಕ್ರಾಂತ್ ರೋಣಾ’, ‘ಕೆಜಿಎಫ್- 2’ ಮತ್ತು ‘ಸಲಾರ್’ನಂತಹ ಸಿನಿಮಾಗಳು ಈ ಹಿಂದೆ ಬುಡಾಪೆಸ್ಟ್‌ನಲ್ಲಿ ತಮ್ಮ ಸ್ಕೋರ್‌ಗಳನ್ನು ರೆಕಾರ್ಡ್ ಮಾಡಿದ್ದವು. ‘ಯುಐ’ ಪೂರ್ಣ 90-ಪೀಸ್ ಅನ್ನು ಬಳಸಿಕೊಂಡ ಮೊದಲ ಸಿನಿಮಾ ಎಂದಿದೆ ಚಿತ್ರತಂಡ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.