ಭಾರತದ ಗಡಿಭಾಗದಲ್ಲಿ ಭಾರತೀಯ ಸೇನೆ ನಡೆಸಿದನಿರ್ದಿಷ್ಟ ದಾಳಿ (ಸರ್ಜಿಕಲ್ ಸ್ಟ್ರೈಕ್) ಆಧಾರಿಸಿದಆದಿತ್ಯಧಾರ್ ನಿರ್ದೇಶನದಉರಿ ಸಿನಿಮಾದ ಮೊದಲ ಟೀಸರ್ ಗುರುವಾರ ಬಿಡುಗಡೆಯಾಗಿದೆ.

ಗುರುವಾರ ಸರ್ಜಿಕಲ್ಸ್ಟ್ರೈಕ್‌ನ ಎರಡನೇ ವಾರ್ಷಿಕೋತ್ಸವ ಆಚರಿಸಲಾಯಿತು.

ಈ ಟೀಸರ್ಎರಡು ವರ್ಷಗಳ ಹಿಂದೆ ಉಗ್ರರು ಉರಿ ಸೇನಾ ಶಿಬಿರದ ಮೇಲೆ ನಡೆದಿದ್ದ ಅಮಾನವೀಯ ದಾಳಿಯ ಪಕ್ಷಿ ನೋಟವನ್ನು ತೆರೆದಿಟ್ಟಿದ್ದು, ಈ ವೇಳೆ 19ಯೋಧರು ಹುತಾತ್ಮರಾದನೆನಪನ್ನು ಮರುಕಳಿಸುತ್ತದೆ.

2016, 18ನೇ ಸೆಪ್ಟೆಂಬರ್ ಭಾರತಕ್ಕೆ ಕರಾಳ ದಿನ ಎಂದು ನೆನಪಿಸುತ್ತಲೇ ಆರಂಭವಾಗುವ ಟೀಸರ್ ಭಾರತ ಪಾಕಿಸ್ತಾನದ ನಡುವಿನ ಯುದ್ಧ, ಸಾವು–ನೋವು ಇಂದಿನದಲ್ಲ ಹಾಗೂ ಹಿಂದೂಸ್ತಾನದ ಮೇಲಿನ ದಾಳಿಯೂ ಮೊದಲೇನಲ್ಲ ಎನ್ನುತ್ತಲೇ ತೆರೆದುಕೊಳ್ಳುತ್ತದೆ.

ಇದು ನವ ಭಾರತ, ಶತ್ರುಗಳನ್ನು ಒಳ ಪ್ರವೇಶಿಸಲು ಅವಕಾಶ ಕೊಡುವುದಿಲ್ಲ. ಅವರನ್ನು ಕೊಲ್ಲುತ್ತೇವೆ.ಇದನ್ನೆಲ್ಲಾ ಸಹಿಸಿಕೊಂಡು ಭಾರತವು ಸುಮ್ಮನೆ ಕೈ ಕಟ್ಟಿಕೊಂಡು ಕೂರುವುದಿಲ್ಲ ಎನ್ನುವ ಯೋಧರ ದೇಶಪ್ರೇಮದ ಮೇಲೆ ಬೆಳಕು ಚೆಲ್ಲುತ್ತದೆ. ಜೊತೆಗೆ ಯುದ್ಧದಲ್ಲಿ ಹುತಾತ್ಮ ಯೋಧರ ಕುಟುಂಬದ ಪರಿಸ್ಥಿತಿ, ನೋವು, ಆಕ್ರಂದನ, ಆಕ್ರೋಶವು ಮನಕಲುಕುತ್ತದೆ.

ಈ ಸಿನಿಮಾವು ಜನವರಿ 11ರಂದು ಬಿಡುಗಡೆಯಾಗಲಿದೆ.

ವಿಕಿ ಕೌಶಲ್, ಯಾಮಿ ಗೌತಮ್ ಕಿರ್ತಿ ಕುಲ್ಹರಿ ತಾರಾಗಣವಿದ್ದು, ಒಂದು ನಿಮಿಷ 16 ಸೆಕೆಂಡ್ ಇರುವ ಈ ಟೀಸರ್ ಅನ್ನು 20ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.