ಸಂಗೀತ ನಿರ್ದೇಶಕ ವಿ.ಮನೋಹರ್ ನಿರ್ದೇಶನದ ‘ದರ್ಬಾರ್’ ಚಿತ್ರ ಜೂನ್ 9ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ರಾಜ್ಯದಾದ್ಯಂತ ಪ್ರವಾಸ ಹೊರಟಿದೆ.

ಈ ಕುರಿತು ಮಾಹಿತಿ ನೀಡಿದ ಮನೋಹರ್, ’ಸುಮಾರು 23 ವರ್ಷಗಳ ನಂತರ ನಾನು ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ಅದಕ್ಕೆ ಈ ಚಿತ್ರದ ನಾಯಕ, ನಿರ್ಮಾಪಕ ಸತೀಶ್ ಅವರೇ ಕಾರಣ. ನಾನು ‘ಓ ಮಲ್ಲಿಗೆ’ ಚಿತ್ರ ನಿರ್ದೇಶನ ಮಾಡಿದಾಗ ಎಲ್ಲರೂ ನನ್ನನ್ನು ಇವನ ಕೈಲೇನಾಗುತ್ತೆ ಅನ್ನೋ ರೀತಿ ನೋಡಿದ್ದರು. ನನ್ನ ಮೇಲೆ ಸಂಶಯಪಟ್ಟವರಿಗೆ ಈ ಚಿತ್ರವೇ ಉತ್ತರ. ನಾವು ಎಲ್ಲೇ ಹೋದರೂ ಇದು ಪರಿಶುದ್ದ ಹಾಸ್ಯಚಿತ್ರನಾ ಎಂದೇ ಕೇಳುತ್ತಾರೆ. ಈಗ ಹಾಸ್ಯ ಅಂದ್ರೆ ಡಬಲ್ ಮೀನಿಂಗ್ ಅನ್ನುವಂತಾಗಿದೆ. ಮೊದಲ ಪ್ರದರ್ಶನಕ್ಕೆ ಬಂದವರು ಮೆಚ್ಚುವ ಎಲ್ಲ ಅಂಶಗಳು ಚಿತ್ರದಲ್ಲಿವೆ’ ಎಂದರು.

ನಾಯಕ, ನಿರ್ಮಾಪಕ ಸತೀಶ್ ಮಾತನಾಡಿ, ‘ಒಂದು ಬಜೆಟ್ ಅಂದುಕೊಂಡು ಸಿನಿಮಾ ಪ್ರಾರಂಭಿಸಿದೆವು. ಗುಣಮಟ್ಟ ನೋಡುತ್ತ ಹೋದಂತೆ ಖರ್ಚು ಜಾಸ್ತಿಯೇ ಆಯಿತು. ಒಂದೊಳ್ಳೆ ಸಿನಿಮಾ ಮಾಡಿದ್ದೇವೆಂಬ ನಂಬಿಕೆಯಿದೆ. ಒಬ್ಬರು ಬಂದು ಸಿನಿಮಾ ನೋಡಿದರೆ ಖಂಡಿತ 10 ಜನಕ್ಕೆ ಹೇಳುತ್ತಾರೆ ಎಂಬ ರೀತಿಯಿದೆ ಸಿನಿಮಾ. ಗಿಚ್ಚಿ ಗಿಲಿಗಿಲಿ ಕಾರ್ತೀಕ್ ಉತ್ತಮ ಪಾತ್ರ ಮಾಡಿದ್ದಾರೆ. ಸಾಧು ಕೋಕಿಲ, ನವೀನ್ ಪಡೀಲ್ ಜೋಡಿ ನೋಡುಗರನ್ನು ರಂಜಿಸುತ್ತದೆ’ ಎಂದರು.

‘ಚಿತ್ರದಲ್ಲಿ ಮಂಡ್ಯ, ಮದ್ದೂರು ಭಾಗದ ರಂಗಭೂಮಿ ಕಲಾವಿದರನ್ನೇ ಹೆಚ್ಚಾಗಿ ಬಳಸಿಕೊಂಡಿದ್ದೇವೆ. ಈ ಸಿನಿಮಾ ಬಿಡುಗಡೆ ನಂತರ ಸಾಕಷ್ಟು ಜನ ಬೆಳಕಿಗೆ ಬರುತ್ತಾರೆ. ಉಪೇಂದ್ರ ಎಲೆಕ್ಷನ್ ಸಾಂಗ್, ಡ್ಯುಯೆಟ್ ಸಾಂಗ್ ಜನ ಇಷ್ಟಪಟ್ಟಿದ್ದಾರೆ. ಚಂದನ್ ಶೆಟ್ಟಿ ಹಾಡಿರುವ ಹಾಡನ್ನು ಬಿಡುಗಡೆ ಮಾಡಬೇಕಿದೆ’ ಎಂದು ಮನೋಹರ್ ವಿವರಿಸಿದರು.

ನಾಯಕಿ ಜಾಹ್ನವಿ ಮಾತನಾಡಿ, ’ಇದು ನನ್ನ ಮೊದಲ ಚಿತ್ರ. ತುಂಬಾ ಚೆನ್ನಾಗಿ ಬಂದಿದೆ. ಈ ಚಿತ್ರದಲ್ಲಿ ನಾನು ಸೈಕಾಲಜಿ ಸ್ಟೂಡೆಂಟ್. ರಜೆಗೆಂದು ಊರಿಗೆ ಬಂದಾಗ ನಾಯಕನ ಪರಿಚಯವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.