F2(ಫನ್ ಆ್ಯಂಡ್ ಫ್ರಸ್ಟ್ರೇಷನ್) ಚಿತ್ರ ಸೂಪರ್ ಹಿಟ್ ಆಗಿರುವ ಖುಷಿಯಲ್ಲಿರುವಾಗಲೇ ವರುಣ್ ತೇಜ ಅವರಿಗೆ ಮತ್ತೊಂದು ಬಂಪರ್ ಬಹುಮಾನ ಸಿಕ್ಕಿದೆ. ತಮಿಳಿನ ಸೂಪರ್ ಹಿಟ್ ಚಿತ್ರ ‘ಜಿಗರ್ಥಂಡ’ದ ತೆಲುಗು ರೀಮೇಕ್ನಲ್ಲಿ ನಾಯಕನಟನ ಪಾತ್ರ ಅವರನ್ನು ಹುಡುಕಿ ಬಂದಿದೆ.

ಈ ಖುಷಿಯಲ್ಲೇ ವರುಣ್, ‘ವಾಲ್ಮೀಕಿಯಾಗಿ ನಿಮ್ಮ ಮುಂದೆ ಬರಲಿದ್ದೇನೆ. ಇದು ನನ್ನ ಮುಂದಿನ ಚಿತ್ರ’ ಎಂದು ಟ್ವೀಟ್ ಮಾಡಿದ್ದಾರೆ. ಚಿತ್ರದ ನಿರ್ದೇಶಕ ಹರೀಶ್ ಶಂಕರ್ ಟ್ವೀಟ್ ಮಾಡಿ, ‘ವರುಣ್ ತೇಜ್ ಅವರನ್ನು ವಾಲ್ಮೀಕಿಯಾಗಿ ನೀವು ಮೆಚ್ಚುತ್ತೀರೆಂಬ ಭರವಸೆ ನನಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್ನ ರಾಮಾ ನಾಯ್ಡು ಸ್ಟುಡಿಯೊದಲ್ಲಿ ಸಿನಿಮಾದ ಮುಹೂರ್ತವೂ ನಡೆದಿದೆ. ಹಿಟ್ ಚಿತ್ರಗಳ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ‘ವಾಲ್ಮೀಕಿ’ಗೆ ಸಂಗೀತ ನೀಡಲಿದ್ದಾರೆ. ಸಿನೆಮಾಟೊಗ್ರಫಿ ಅಯನಂಕ ಬೋಸ್ ಅವರದು. ನಾಯಕನಟಿ ಹಾಗೂ ಇತರ ಪಾತ್ರವರ್ಗ ಇನ್ನೂ ಅಂತಿಮಗೊಂಡಿಲ್ಲ.

ತಮಿಳಿನ ‘ಜಿಗರ್ಥಂಡ’ವನ್ನು ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.