ಬೆಂಗಳೂರು: ನಟ ವಿಜಯ್ ದೇವರಕೊಂಡ ಅವರು, ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ಗರಂ ಆಗಿದ್ದಾರೆ. ತಮ್ಮ ಮುಂಬರಲಿರುವ ‘ಲಿಗರ್‘ ಸಿನಿಮಾದ ಬಗ್ಗೆ ಅವರು ಟ್ವಿಟರ್ನಲ್ಲಿ ಫೋಸ್ಟ್ ಹಾಕಿದ್ದಾರೆ.

ಲಿಗರ್ ಯಾವುದೇಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ‘ಲಿಗರ್ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗುತ್ತದೆ. ಇದಕ್ಕಾಗಿ ಸುಮಾರು 200 ಕೋಟಿ ರೂಪಾಯಿ ವ್ಯವಹಾರ ಖುದುರಿಸಿದೆ‘ ಎಂಬ ಸುದ್ದಿಗಳು ಹರಿದಾಡಿದ್ದವು.

‘ಓಟಿಟಿ ಎಂಬುದು ತುಂಬಾ ಸಣ್ಣದು, ನಾನು ಸಿನಿಮಾ ಮಂದಿರಗಳಲ್ಲೇ ಹೆಚ್ಚಿನದನ್ನು ತೋರಿಸುತ್ತೇನೆ‘ ಎಂದು ಫೊಸ್ಟ್ ಒಂದನ್ನು ಹಂಚಿಕೊಂಡು ಮಂಗಳವಾರ ಟ್ವೀಟ್ ಮಾಡಿದ್ದಾರೆ.

ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶಿಸುತ್ತಿರುವ ಲಿಗರ್ನಲ್ಲಿ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ, ಮಕರಂದ ದೇಶಪಾಂಡೆ, ರೋನಿ ರಾಯ್, ಮೈಕ್ ಟೈಸನ್, ರಮ್ಯಾ ಕೃಷ್ಣ ಮುಖ್ಯ ತಾರಾಗಣದಲ್ಲಿ ಅಭಿನಯಿಸಿದ್ದಾರೆ. ಹಿಂದಿ ಮತ್ತು ತೆಲುಗಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಲಿಗರ್ ಕನ್ನಡ, ತಮಿಳು, ಮಲಯಾಳಂಗೆ ಡಬ್ ಆಗಲಿದೆ. ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಇತ್ತೀಚೆಗೆ ದೊಡ್ಡ ದೊಡ್ಡ ಸಿನಿಮಾಗಳೇ ಲಾಕ್ಡೌನ್ ಕಾರಣದಿಂದ ನೇರವಾಗಿ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿವೆ. ಆದರೆ, ಕೆಲ ನಾಯಕ ನಟರು ಓಟಿಟಿಗೆ ಮನಸ್ಸು ಮಾಡುತ್ತಿಲ್ಲ ಎಂಬುದು ವಿಜಯ್ ದೇವರಕೊಂಡ ಅವರ ಟ್ವೀಟ್ನಿಂದ ಸಾಬೀತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.