ಸಿನಿಮಾ ಎಂದರೆ ಹತ್ತಾರು ಕಲಾವಿದರಿರುವುದು ಸಾಮಾನ್ಯ. ಆದರೆ ಈ ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟು ನಿರ್ದೇಶಕ ಎಂ.ಆನಂದ್ ರಾಜ್ ತಮ್ಮ ಚೊಚ್ಚಲ ಚಿತ್ರದಲ್ಲಿ ಭಿನ್ನ ಪ್ರಯೋಗಕ್ಕೆ ಇಳಿದಿದ್ದಾರೆ.

ಆನಂದ್ ರಾಜ್ ನಿರ್ದೇಶನದಲ್ಲಿ ವಿಜಯ ರಾಘವೇಂದ್ರ ನಟಿಸುತ್ತಿರುವ ಸಿನಿಮಾ ‘ರಾಘು’. ಈಸಿನಿಮಾ ಮೂಲಕ ತಮ್ಮ ಸಿನಿಜೀವನದಲ್ಲಿ ಹೊಸದೊಂದು ಪ್ರಯೋಗಕ್ಕೆ ತಮ್ಮನ್ನು ತಾವು ಒಡ್ಡಿಕೊಂಡಿದ್ದಾರೆ ವಿಜಯ್. ‘ರಾಘು’ ಸೋಲೋ ಆ್ಯಕ್ಟಿಂಗ್(ಒಂದೇ ಪಾತ್ರ)
ಸಿನಿಮಾವಾಗಿದೆ. ಕನ್ನಡದ ಮಟ್ಟಿಗೆ ಇದೊಂದು ಹೊಸ ರೀತಿಯ ಪ್ರಯೋಗವಾಗಿದ್ದು, ಥ್ರಿಲ್ಲರ್ ಕಥಾಹಂದರ ವನ್ನು ಇದು ಒಳಗೊಂಡಿದೆ. ಚಿತ್ರದ ಪೂರ್ತಿ ವಿಜಯ ರಾಘವೇಂದ್ರ ಒಬ್ಬರೇ ನಟಿಸಿದ್ದಾರೆ. ‘ಹೊಸ ತಂತ್ರಜ್ಞಾನ ವುಳ್ಳ ಕ್ಯಾಮೆರಾಗಳನ್ನು ಬಳಸಿ, ಅದ್ಧೂರಿಯಾದ ಸೆಟ್ ನಿರ್ಮಾಣ ಮಾಡಿ ಚಿತ್ರೀಕರಣ ಮಾಡಲಾಗಿದೆ. ಸದ್ಯದಲ್ಲೇ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸುತ್ತೇವೆ’ ಎಂದಿದ್ದಾರೆ ಆನಂದ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.