ನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆ, ಕಲೆಯನ್ನು ಪ್ರತಿಬಿಂಬಿಸುವ 'ರುದ್ರಾಭಿಷೇಕಂ' ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ವಿಜಯ ರಾಘವೇಂದ್ರ ಚಿತ್ರದ ನಾಯಕ.

'ಇನ್ನೊಂದು ಒಳ್ಳೆಯ ಪ್ರಯತ್ನ. ನಮ್ಮ ನಾಡಿನ ಸಾಂಸ್ಕೃತಿಕ ಹಿನ್ನೆಲೆಯ ಜೊತೆಗೆ ಒಂದು ಸಣ್ಣ ಇತಿಹಾಸ, ಅದರ ವೈಭವವನ್ನು ಸಾರುವ ಕಥೆ. ಕಮರ್ಷಿಯಲ್ ಅಂಶಗಳಿದ್ದರೂ ಕೂಡ ಭಕ್ತಿ ಪ್ರಧಾನ ಚಿತ್ರ. ನಿರ್ದೇಶಕರು ವೀರಗಾಸೆ ಕಲೆಯ ಹಿನ್ನೆಲೆ ಇಟ್ಟುಕೊಂಡು ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಾನು ಒಬ್ಬ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ನನಗೆ ಸಾಕಷ್ಟು ಗೆಟಪ್ಗಳಿವೆ' ಎಂದರು ವಿಜಯ ರಾಘವೇಂದ್ರ.

ವಸಂತ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಬ್ಯಾನರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ನಾಯಕಿಯಾಗಿ ಮೈಸೂರು ಮೂಲದ ರಂಗಭೂಮಿ ಕಲಾವಿದೆ ಪ್ರೇರಣಾ ಕಾಣಿಸಿಕೊಂಡಿದ್ದಾರೆ. ವಿ. ಮನೋಹರ್ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮುತ್ತುರಾಜ್ ಛಾಯಾಚಿತ್ರಗ್ರಹಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.