ನವದೆಹಲಿ: ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತಗಾರ ಎ ಆರ್ ರೆಹಮಾನ್ ಅವರ ಮೊದಲ ನಿರ್ಮಾಣದ ‘99 ಸಾಂಗ್ಸ್’ ಚಿತ್ರದ ಕಾರ್ಯಕ್ರಮದ ವಿಡಿಯೊವೊಂದು ವೈರಲ್ ಆಗಿದೆ.

ವಿಶ್ವೇಶ್ ಕೃಷ್ಣಮೂರ್ತಿ ಅವರ ಚೊಚ್ಚಲ ನಿರ್ದೇಶನದ ‘99 ಸಾಂಗ್ಸ್’ನಲ್ಲಿ ಹೊಸಮುಖಗಳಾದ ಇಹಾನ್ ಭಟ್ ಮತ್ತು ಎಡಿಲ್ಸಿ ವರ್ಗಾಸ್ಪ್ರಮುಖ ಪಾತ್ರದಲ್ಲಿನಟಿಸಿದ್ದಾರೆ. ಇತ್ತೀಚೆಗೆ, ಚೆನ್ನೈನಲ್ಲಿ ಚಿತ್ರದ ಲಾಂಚಿಂಗ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ನಡೆಸಿ ಕೊಡುತ್ತಿದ್ದ ನಿರೂಪಕಿ ತಮಿಳು ಭಾಷೆಯಲ್ಲಿ ಎ ಆರ್ ರಹಮಾನ್ ಅವರನ್ನು ಸ್ವಾಗತಿಸಿದರು. ಆದರೆ, ನಟ ಇಹಾನ್ ಭಟ್ ಅವರಿಗೆ ಹಿಂದಿಯಲ್ಲಿ ಸ್ವಾಗತ ಕೋರಿದರು. "ಇಹಾನ್ ಭಟ್, ಚೆನ್ನೈ ಮೇ ಆಪ್ ಕಾ ಹಾರ್ದಿಕ್ ಸ್ವಾಗತ್ ಕರ್ತಿ ಹೂ," ಎಂದರು.

ಈ ಸಂದರ್ಭ ಮಂದಹಾಸ ಬೀರುತ್ತಾ ಆಶ್ಚರ್ಯಕರ ರೀತಿಯಲ್ಲಿ ‘ಹಿಂದಿ’! ಎಂದು ಪ್ರತಿಕ್ರಿಯಿಸಿದ ರೆಹಮಾನ್, ಸ್ಟೇಜ್ನಿಂದ ಕೆಳಗಿಳಿಯುವಂತೆ ತಮಾಷೆ ಮಾಡಿದರು. ಬಳಿಕ, ‘ನೀವು ತಮಿಳು ಭಾಷೆಯಲ್ಲಿ ಮಾತನಾಡುತ್ತೀರೋ ಇಲ್ಲವೋ ಎಂದು ನಾನು ಈಗಾಗಲೇ ನಿಮ್ಮನ್ನು ಕೇಳಿರಲಿಲ್ಲವೇ?’ಎಂದು ಹಾಸ್ಯ ಚಟಾಕಿ ಹಾರಿಸಿದರು.

ಈ ವೇಳೆ, ಕಾರ್ಯಕ್ರಮದಲ್ಲಿ ಸೇರಿದ್ದ ಜನ ಸಮೂಹ ನಗೆಗಡಲಲ್ಲಿ ತೇಲಿತು.

ಬಳಿಕ, ಮತ್ತೆ ತಮಿಳಿನಲ್ಲಿ ಉತ್ತರಿಸಿದ ನಿರೂಪಕಿ, ಇಹಾನ್ ಭಟ್ ಅವರಿಗೆ ಅರ್ಥವಾಗಲಿ ಎಂದು ಅವರನ್ನು ಹಿಂದಿ ಭಾಷೆಯಲ್ಲಿ ಸ್ವಾಗತಿಸಲು ಪ್ರಯತ್ನಿಸಿದ್ದಾಗಿ ಸ್ಪಷ್ಟಪಡಿಸಿದರು.

ಈ ಚಿತ್ರವನ್ನು ಎ ಆರ್ ರಹಮಾನ್ ಅವರೇ ಅವರ ವೈಎಂ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಹೊಸಮುಖಗಳ ಜೊತೆಗೆ ಲಿಸಾ ರೇ, ಮನೀಶಾ ಕೊಯಿರಾಲಾ, ಆದಿತ್ಯ ಸೀಲ್, ಡ್ರಮ್ಮರ್ ರಂಜಿತ್ ಬರೋಟ್ ಮತ್ತು ರಾಹುಲ್ ರಾಮ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.