ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಮದರ್ ತೆರೇಸಾ ಅವರ ಜೀವನಗಾಥೆ ಇದೀಗ ವೆಬ್ ಸರಣಿಯಾಗಿ ಮೂಡಿಬರಲಿದೆ. ಸಾಹಿತಿ, ಚಿತ್ರಕಥೆಗಾರ ದಿ. ಜಾನ್ ಪಾಲ್ ಪುತ್ತುಸ್ಸೆರಿ ಹಾಗೂ ನಿರ್ದೇಶಕ ಪಿ. ಚಂದ್ರಕುಮಾರ್ ಈ ಸರಣಿಯನ್ನು ನಿರ್ಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ವೆಬ್ ಸರಣಿಯ ಶೀರ್ಷಿಕೆಯನ್ನು ಅನಾವರಣಗೊಳಿಸಲಾಯಿತು.

‘ಹಿಂದಿ,ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ತಯಾರಾಗಲಿರುವ ಈ ಪ್ಯಾನ್ ಇಂಡಿಯಾ ವೆಬ್ ಸಿರೀಸ್ ಅನ್ನು ಸುಮಾರು ₹30 ಕೋಟಿ ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಿದ್ದೇವೆ. ಹಿರಿಯನಟ ಮಿಥುನ್ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆರೇಸಾ ಹರೆಯದ ಪಾತ್ರಕ್ಕಾಗಿ ಹೊಸ ಪ್ರತಿಭೆಗಳ ಹುಡುಕಾಟ ನಡೆಯುತ್ತಿದ್ದು, ರಾಜ್ಯದಲ್ಲೂ ಆಡಿಶನ್ ಮಾಡಲಾಗುತ್ತದೆ. ತೆರೇಸಾ ಅವರ ಬಾಲ್ಯ, ಹರೆಯದ ಜೀವನ ಹೇಗಿತ್ತು ಎಂಬುದರಿಂದ ಅವರ ಸೇವೆವರೆಗಿನ ಎಲ್ಲ ಅಂಶಗಳು ಇದರಲ್ಲಿರಲಿದೆ’ ಎಂದರು ನಿರ್ದೇಶಕ ಚಂದ್ರಶೇಖರ್.

ಪಿ.ಸುಕುಮಾರ್ ಅವರ ಛಾಯಾಚಿತ್ರಗ್ರಹಣ, ಜರೀ ಅಮರದೇವ ಅವರ ಸಂಗೀತ ಇದ್ದು, ಅನಿತಾ ಮೆನ್ನನ್, ತನಿಮಾ ಮೆನ್ನನ್, ಸಾಪಿಕೌರ್, ಜೋಷಿ ಜೋಸೆಫ್ ಪ್ರಮುಖ ತಾರಾಗಣದಲ್ಲಿದ್ದಾರೆ. ಒಟಿಟಿ ವಾಹಿನಿಯೊಂದರಲ್ಲಿ ಈ ಸರಣಿ ಬಿತ್ತರಗೊಳ್ಳಲಿದೆ ಎಂದು ತಂಡ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.