ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಸ ಸಿನಿಮಾ ‘ಯಜಮಾನ’ದ ಮೊದಲ ಹಾಡು ಬಿಡುಗಡೆ ಆಗಿದೆ. ಹಾಡಿನ ಹೆಸರು ‘ಶಿವನಂದಿ’. ಇದಕ್ಕೆ ಸಂಗೀತ ನೀಡಿರುವವರು ವಿ. ಹರಿಕೃಷ್ಣ.

ಯೂಟ್ಯೂಬ್‌ನಲ್ಲಿ ಹಾಡು ಬಿಡುಗಡೆಯಾದಐದುಗಂಟೆಗಳಲ್ಲಿ 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

‘ಯಜಮಾನ’ ಚಿತ್ರದ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸುವ ಉದ್ದೇಶದಿಂದ ಹಾಡುಗಳನ್ನು ‘ಆಡಿಯೊ ಹಬ್ಬ’ ಹೆಸರಿನಲ್ಲಿ ಬಿಡುಗಡೆ ಮಾಡುವ ತೀರ್ಮಾನ ಮಾಡಿದೆ ಚಿತ್ರತಂಡ. ಆಡಿಯೊ ಹಬ್ಬದ ಭಾಗವಾಗಿ ಮೊದಲ ಹಾಡು ಸಂಕ್ರಾಂತಿಯ ದಿನ ಬಿಡುಗಡೆ ಆಗಿದೆ.

ಹರಿಕೃಷ್ಣ ಅವರ ಸಂಗೀತ ಹಾಗೂ ದರ್ಶನ್ ಅವರ ಅಭಿನಯ ಇರುವ 25ನೇ ಚಿತ್ರ ಇದು. ಚಿತ್ರದಲ್ಲಿ ಒಟ್ಟು ಐದು ಹಾಡುಗಳು ಇವೆ. ‘ಇದು ಆ್ಯಕ್ಷನ್ ಡ್ರಾಮಾ. ಮಾಸ್ ಕಮರ್ಷಿಯಲ್ ಸಿನಿಮಾ. ಕುಟುಂಬದ ಎಲ್ಲರೂ ಸೇರಿ ನೋಡಬಹುದಾದ ಸಿನಿಮಾ’ ಎನ್ನುವುದು ನಿರ್ಮಾಪಕರಲ್ಲಿ ಒಬ್ಬರಾದ ಶೈಲಜಾ ನಾಗ್ ಅವರ ಮಾತು. ಹರಿಕೃಷ್ಣ ಮತ್ತು ಪಿ. ಕುಮಾರ್ ಅವರು ಜೊತೆಯಾಗಿ ಈ ಚಿತ್ರ ನಿರ್ದೇಶಿಸಿದ್ದಾರೆ. ರಂಗಕರ್ಮಿ, ನಟ ಬಿ. ಸುರೇಶ ಅವರೂ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.

ಹಾಡಿನ ಲಿಂಕ್ ಇಲ್ಲಿದೆ: https://www.youtube.com/watch?v=xor-V7Tg9BM

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.