ಭಟ್ಕಳ: ತಾಲ್ಲೂಕಿನ ಚಿತ್ರಾಪುರ ಮಠಕ್ಕೆ ಗುರುವಾರ ರಾತ್ರಿ ಆಗಮಿಸಿದ್ದ ಚಿತ್ರನಟ ಯಶ್ ಚಿತ್ರಾಪುರದಲ್ಲಿರುವ ಸಣ್ಣ ಕಿರಾಣಿ ಅಂಗಡಿಯಿಂದ ಮಗಳಿಗೆ ಚಾಕಲೊಟ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಅವರಿಗೆ ಐಸ್ ಕ್ಯಾಂಡಿ ಕೊಡಿಸಿದ್ದಾರೆ. ದಂಪತಿಯು ಅಂಗಡಿಯ ಎದುರು ನಿಂತ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಸಿನಿಮಾ ಚಿತ್ರೀಕರಣದ ಒತ್ತಡದ ನಡುವೆಯೂ ವರ್ಷಕ್ಕೆ ಒಮ್ಮೆ ಚಿತ್ರಾಪುರ ಮಠಕ್ಕೆ ಭೇಟಿ ನೀಡುತ್ತಾರೆ. ಈ ಬಾರಿಯೂ ಮಠಕ್ಕೆ ಭೇಟಿ ನೀಡಿದ್ದ ಅವರು ಒಂದು ದಿನ ಅಲ್ಲಿಯೇ ತಂಗಿದ್ದರು. ಶುಕ್ರವಾರ ಮಠದಿಂದ ತೆರಳಿದ್ದಾರೆ.

ಕಿರಾಣಿ ಅಂಗಡಿಯ ಕಟ್ಟೆಯ ಮೇಲೆ ಸ್ಟಾರ್ ನಟಿ ರಾಧಿಕಾ ಕುಳಿತು ಐಸ್‌ಕ್ಯಾಂಡಿ ಸವಿಯುತ್ತಿದ್ದರೆ, ಯಶ್ ಅಂಗಡಿಯಲ್ಲಿ ವ್ಯವಹರಿಸುತ್ತಿರುವ ಚಿತ್ರವು ತಡವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ಸ್ಟಾರ್ ನಟನ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.