‘ಕರಟಕ ದಮನಕ’ ಚಿತ್ರದ ಬಳಿಕ ನಿರ್ದೇಶಕ ಯೋಗರಾಜ್ ಭಟ್ ‘ಮುಂಗಾರು ಮಳೆ’ ನಿರ್ಮಾಪಕ ಇ.ಕೃಷ್ಣಪ್ಪ ಜೊತೆ ಕೈಜೋಡಿಸಿದ್ದು ಗೊತ್ತೇ ಇದೆ. ಶೂಟಿಂಗ್ ವೇಳೆ ನಡೆದ ಅವಘಡದಿಂದಾಗಿ ‘ಮನದ ಕಡಲು’ ಎಂಬ ಈ ಚಿತ್ರದ ಶೀರ್ಷಿಕೆ ಬಹಿರಂಗಗೊಂಡಿತ್ತು. ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಸಿರುವ ಕುರಿತು ತಂಡ ಅಪ್ಡೇಟ್ ನೀಡಿತ್ತು.

‘ಚಿತ್ರಕ್ಕೆ ಮೂರು–ನಾಲ್ಕು ಶೀರ್ಷಿಕೆಗಳನ್ನು ಯೋಚಿಸಲಾಗಿದ್ದು ಅದರಲ್ಲಿ ‘ಮನದ ಕಡಲು’ ಕೂಡ ಒಂದು. ಇದು ವರ್ಕಿಂಗ್ ಟೈಟಲ್. ಇದೇ ಅಂತಿಮ ಶೀರ್ಷಿಕೆಯಲ್ಲ’ ಎನ್ನುತ್ತಿವೆ ಚಿತ್ರತಂಡದ ಮೂಲಗಳು. ಈ ಹಿಂದೆ ‘ಫಿಸಿಕ್ಸ್ ಟೀಚರ್’ ಎಂಬ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದ್ದ ಸುಮುಖ್ ಈ ಚಿತ್ರದ ನಾಯಕ.

‘ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಇದೊಂದು ತ್ರಿಕೋನ ಪ್ರೇಮಕಥೆ. ವೈದ್ಯರೊಬ್ಬರ ಬದುಕಿನ ತಿರುವಿನಿಂದ ಶುರುವಾಗುವ ಪ್ರೇಮಕಥೆ ರಾಜ್ಯದ ಗಡಿ ದಾಟಿ ಮಹಾರಾಷ್ಟ್ರದಲ್ಲಿಯೂ ನಡೆಯುತ್ತದೆ. ಬೆಂಗಳೂರು, ಮಂಗಳೂರು, ಮಹಾರಾಷ್ಟ್ರದಲ್ಲಿ ಚಿತ್ರೀಕರಣ ನಡೆದಿದೆ. ಈಗಾಗಲೇ ಚಿತ್ರದ ಬಹುಭಾಗ ಚಿತ್ರೀಕರಣ ಪೂರ್ಣಗೊಂಡಿದೆ’ ಎನ್ನುತ್ತಿವೆ ಚಿತ್ರತಂಡದ ಮೂಲಗಳು.

ವಿ.ಹರಿಕೃಷ್ಣ ಸಂಗೀತ, ಸಂತೋಷ್ ರೈ ಪತಾಜೆ ಛಾಯಾಚಿತ್ರಗ್ರಹಣವಿದೆ. ಶಿವಧ್ವಜ್, ನೇತ್ರಾ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.