ವಿಶ್ವರಂಗಭೂಮಿಯ ದಿನದ ಅಂಗವಾಗಿ ಬೆಂಗಳೂರಿನ ‘ವಿ ಮೂವ್ ಥೇಯಟರ್’ ನಾಟಕ ತಂಡ ‘ನಥಿಂಗ್ ಲೈಕ್ ದಟ್’ ಆಂಗ್ಲ ನಾಟಕ ಪ್ರದರ್ಶಿಸುತ್ತಿದೆ.

‘ನಥಿಂಗ್ ಲೈಕ್ ದಟ್‘ ಒಟ್ಟು ಐದು ಘಟ್ಟಗಳ ಪಯಣವಾಗಿದ್ದು ಪ್ರತಿಯೊಂದು ಹಂತವೂ ಮನುಷ್ಯ ಸಹಜವಾದ ದೈಹಿಕ ಸಮಸ್ಯೆ ಮತ್ತು ಮಾನಸಿಕ ಒತ್ತಡಗಳನ್ನೂ ನೈಜವಾಗಿ ಅನಾವರಣಗೊಳಿಸುತ್ತದೆ.

ನಾವು ಪ್ರತಿದಿನ ಕನ್ನಡಿಯಲ್ಲಿ ನೋಡುವ ನಮ್ಮ ಪ್ರತಿಬಿಂಬ ಸಮಾಜದ ಪ್ರತಿಧ್ವನಿಯಂತೆ ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ನಮ್ಮೆಲ್ಲರ ಒಳಗಿನ ಮಾನಸಿಕ ದುಗುಡ, ದುಮ್ಮಾನ,ವೇದನೆ, ತಳಮಳ ಕನ್ನಡಿ ಮೂಲಕ ನಮ್ಮ ಮುಂದೆ ಹರಡಿಕೊಂಡಾಗ ಉಂಟಾಗುವ ಸಂಘರ್ಷ ಈ ನಾಟಕದ ತಿರುಳು.

ಮಧುವಂತಿ ಜಿ. ಬರೆದ ನಾಟಕಕ್ಕೆ ಸೂರಜ್ ಕಿರಣ್ ನಿರ್ದೇಶನ ಮತ್ತು ಶಶಾಂಕ್ ಇಲ್ಲೂರು ಸಹ ನಿರ್ದೇಶನವಿದೆ. ಸುಹಾಸ್ ಸಂಗೀತ ನೀಡಿದ್ದಾರೆ. ವರುಣ್ ಮರಿಚಿ, ಆದಿತ್ಯ ನಾಯಕ್, ಸಾಗರ್ ಉರಬಿನಹಟ್ಟಿ, ಸ್ವಾಮಿ, ಸೌಂದರ್ಯ ನಾಗರಾಜ್, ಶ್ರೀಪ್ರಿಯಾ, ಮುಕುಲ್ ಭಾರದ್ವಾಜ್, ರಾಘವೇಂದ್ರ ಮತ್ತು ಶರ್ಮಿಳಾ ಸಿಂಘಾಲ್ ಪಾತ್ರ ವರ್ಗದಲ್ಲಿದ್ದಾರೆ.

ನಾಟಕ: ‘ನಥಿಂಗ್ ಲೈಕ್ ದಟ್‘ ಇಂಗ್ಲಿಷ್ ನಾಟಕ

ಸ್ಥಳ: ರಂಗ ಶಂಕರ, ದಿನಾಂಕ: ಏಪ್ರಿಲ್ 2, 2019, ಸಂಜೆ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.