ಬೆಂಗಳೂರು: ಮನೆಯ ಸದಸ್ಯರಿಗೆ ಬಿಗ್ಬಾಸ್ ಒಂದು ಸರ್ಪ್ರೈಸ್ ನೀಡಿದ್ದಾರೆ. ಆ ಸರ್ಪ್ರೈಸ್ ನೋಡಿ ಮನೆ ಮಂದಿಯೆಲ್ಲಾ ಅಚ್ಚರಿಗೊಳಗಾಗಿದ್ದಾರೆ.

ಹೌದು, ಬಿಗ್ಬಾಸ್ನ 10ನೇ ಆವೃತ್ತಿಯಲ್ಲಿ ಎಲಿಮಿನೇಟ್ ಆಗಿದ್ದ ಸ್ಪರ್ಧಿಗಳು ಮತ್ತೆ ಮನೆಗೆ ರೀ ಎಂಟ್ರಿ ಕೊಟ್ಟಿದ್ದಾರೆ.

‘ನಿಮಗಾಗಿ ಒಂದು ಸರ್ಪ್ರೈಸ್ ಕಾದಿದೆ. ಗಾರ್ಡನ್ ಏರಿಯಾಗೆ ಹೋಗಿ’ ಎಂದು ಬಿಗ್ಬಾಸ್ ಮನೆಯ ಸದಸ್ಯರಿಗೆ ಆದೇಶಿಸಿದ್ದಾರೆ. ಅಲ್ಲಿ ಒಂದು ಟೇಬಲ್ ಮೇಲೆ ಬಲೂನ್, ಕೇಕ್ ಜೊತೆಗೆ ಎರಡು ಬಾಕ್ಸ್ಗಳನ್ನು ಇರಿಸಲಾಗಿದೆ. ತುಕಾಲಿ ಸಂತೋಷ್ ಅವರು ಒಂದು ಬಾಕ್ಸ್ ಅನ್ನು ತೆರೆಯುತ್ತಿದ್ದಂತೆ ಬೆಚ್ಚಿ ಹಿಂದಕ್ಕೆ ಜಿಗಿದಿದ್ದಾರೆ. ಉಳಿದವರು ಭಯದಿಂದ ಕಿರುಚಿದ್ದಾರೆ. ಏಕೆಂದರೆ ಆ ಬಾಕ್ಸ್ ಒಳಗಿರುವುದು ಒಂದು ತಲೆ!

ಇದೇನು ಬಿಗ್ಬಾಸ್ ಮನೆಯೊಳಗೆ ಕ್ರೈಂ ಸೀನ್ ಎಂದು ಕಣ್ಣುಜ್ಜಿಕೊಂಡು ನೋಡಿದರೆ ತಲೆ ಅಲುಗಾಡುತ್ತಿದೆ. ಕಣ್ಣುಗಳು ತೆರೆಯುತ್ತಿವೆ. ಮುಖದಲ್ಲಿ ನಗುವಿದೆ. ಅದು ಮತ್ಯಾರೂ ಅಲ್ಲ. ಬಿಗ್ಬಾಸ್ ಹಳೆಯ ಸ್ಪರ್ಧಿ ಇಶಾನಿ! ಟೇಬಲ್ ಕೆಳಗೆ ಅವಿತಿಟ್ಟುಕೊಂಡು ಬರೀ ತಲೆಯನ್ನಷ್ಟೇ ಟೆಬಲ್ನಿಂದ ಹೊರಗೆ ಹಾಕಿ ಮನೆ ಮಂದಿಗೆ ಸಖತ್ ಶಾಕ್ ಕೊಟ್ಟಿದ್ದಾರೆ ಇಶಾನಿ.

ಇಶಾನಿ ಅವರ ಜೊತೆಗೆ ರಕ್ಷಿತ್, ಸ್ನೇಹಿತ್ ಮತ್ತು ನೀತು ಕೂಡ ಬಿಗ್ಬಾಸ್ ಮನೆಯೊಳಗೆ ರೀ ಎಂಟ್ರಿ ಕೊಟ್ಟಿದ್ದಾರೆ.

ಮನೆಗೆ ಆಗಮಿಸಿರುವ ಹಳೆಯ ಸ್ಪರ್ಧಿಗಳು ಮನೆಯ ಎಲ್ಲ ಸದಸ್ಯರೊಂದಿಗೆ ಮಾತನಾಡುತ್ತಾ ಅವರಿಗೆ ಕಿವಿಮಾತು ಹೇಳುತ್ತಿದ್ದಾರೆ. ನೀತು ಅವರು ಪ್ರತಾಪ್ಗೆ ‘ನಿನಗೆ ಸಪೋರ್ಟ್ ಅಂತ ನಿಂತಿದ್ದೇ ಸಂಗೀತಾ. ಅದೇ ಬ್ರೇಕ್ ಆಗಿ ಬಿಟ್ಟರೆ ಏನು ಕಥೆ? ಎಂದು ಪ್ರಶ್ನಿಸಿದ್ದಾರೆ. ‘ನಾನು ಮನೆಯೊಳಗೆ ಕಾರ್ತಿಕ್ ಜೊತೆಗೆ ನಡೆದುಕೊಳ್ಳುತ್ತಿರುವುದನ್ನು ನೋಡಿ ಸ್ನೇಹಿತ್ ಉರ್ಕೊಂಡಿದಾರಾ?’ ಎಂದು ನಮ್ರತಾ ಕೇಳುತ್ತಿದ್ದ ಹಾಗೆಯೇ ಸ್ನೇಹಿತ್ ಕಿಚನ್ನಲ್ಲಿ ಪ್ರತ್ಯಕ್ಷರಾಗಿ, ‘ಹಲೋ ನಮ್ರತಾ’ ಎಂದು ನಮ್ರತಾಗೆ ನಮಸ್ತೆ ಹೇಳಿದ್ದಾರೆ.

ಒಟ್ಟಾರೆ ಹಳೆ ಸ್ಪರ್ಧಿಗಳ ಎಂಟ್ರಿ ಮನೆಯೊಳಗೆ ರೋಮಾಂಚನವನ್ನು ಉಂಟು ಮಾಡಿದೆ. ಇದರಿಂದ ಯಾರಿಗೆ ಅನುಕೂಲವಾಗಲಿದೆ, ಯಾರಿಗೆ ಅನನುಕೂಲವಾಗಲಿದೆ ಎಂಬುದು ಈ ವಾರಾಂತ್ಯದ ಹೊತ್ತಿಗೆ ತಿಳಿಯಲಿದೆ.

ಬಿಗ್ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು Jio Cinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.