ಬೆಂಗಳೂರು: ಕಿರುತೆರೆ ನಟ ಶೈನ್‌ಶೆಟ್ಟಿ ಅವರು ಕಲರ್ಸ್ ಕನ್ನಡ ವಾಹಿನಿಯ ‘ಬಿಗ್ ಬಾಸ್’ ರಿಯಾಲಿಟಿ ಶೋನ ಏಳನೇ ಆವೃತ್ತಿಯ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಭಾನುವಾರ ಪ್ರಸಾರವಾದ ಸಂಚಿಕೆಯಲ್ಲಿ ಕಾರ್ಯಕ್ರಮದ ನಿರೂಪಕ ನಟ ಸುದೀಪ್, ‘ಬಿಗ್‌ಬಾಸ್’ ಪಟ್ಟಕ್ಕೆ ಶೈನ್‌ಶೆಟ್ಟಿ ಅವರು ಆಯ್ಕೆಯಾಗಿರುವುದಾಗಿ ಅವರ ಕೈ ಎತ್ತಿ ಘೋಷಿಸಿದರು. ಪ್ರತಿಸ್ಪರ್ಧಿ ನಟ ಕುರಿ ಪ್ರತಾಪ್ ರನ್ನರ್ ಅಪ್ ಆದರು. ಫೈನಲ್‌ಗೆ ನೇರವಾಗಿ ಪ್ರವೇಶಿಸಿದ್ದ ವಾಸುಕಿ ವೈಭವ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಶೈನ್‌ಶೆಟ್ಟಿ ಅವರಿಗೆ ಬಹುಮಾನವಾಗಿ ₹ 50 ಲಕ್ಷ ನಗದು, ಟ್ರೋಫಿ ಹಾಗೂ ಕಾರು ನೀಡಲಾಯಿತು.

20 ಸ್ಪರ್ಧಿಗಳು ಈ ಬಾರಿಯ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಪ್ರೇಕ್ಷಕರ ಮತದಾನದ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗಿದೆ.ಪ್ರಶಸ್ತಿ ಸ್ವೀಕರಿಸಿ ಖುಷಿ ಹಂಚಿಕೊಂಡ ಶೈನ್‌ಶೆಟ್ಟಿ, ’ಇದು ನನ್ನ ಜೀವನದ ಗೆಲುವು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.