ಕಿಚ್ಚ ಸುದೀಪ್ ಸಾರಥ್ಯದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಹತ್ತನೇ ಸೀಸನ್ ಪ್ರಾರಂಭವಾಗಿದ್ದು, ಒಟ್ಟು 17 ಸ್ಪರ್ಧಿಗಳು ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ. ಈ ಬಾರಿ ಹತ್ತು ಹಲವು ಕುತೂಹಲಗಳನ್ನು ಹೊತ್ತು ತಂದಿರುವ ಈ ಶೋಗೆ ಸಿನಿಮಾ, ಧಾರವಾಹಿ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ...

ಕನ್ನಡದ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಗಳಿಸಿರುವ ನಮ್ರತಾ ಗೌಡ ಈ ಬಾರಿ ಬಿಗ್‌ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ‘ಆಕಾಶ ದೀಪ’ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಇವರು ನಂತರ ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ಹಿಮಾ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದರು. ‘ನಾಗಿಣಿ–2’ ಧಾರಾವಾಹಿಯಲ್ಲಿಯೂ ಮಿಂಚಿದ್ದರು. ಇದೀಗ ದೊಡ್ಮನೆಯಲ್ಲಿ ಹಾಲು ಉಕ್ಕಿಸುವ ಮೂಲಕ ಹೊಸ ಪಯಣ ಪ್ರಾರಂಭಿಸಿದ್ದಾರೆ.

‘ನಮ್ಮನೆ ಯುವರಾಣಿ’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ಸ್ನೇಹಿತ್ ಈ ಬಾರಿಯ ಬಿಗ್‌ಬಾಸ್‌ನಲ್ಲಿ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಹೊಸ ಭರವಸೆಯ ಮೂಲಕ ಹೊಸ ಹೆಜ್ಜೆ ಇಟ್ಟಿರುವ ಸ್ನೇಹಿತ್ ಕೊನೆಯವರೆಗೂ ಮನೆಯೊಳಗೆ ಸ್ಥಾನ ಉಳಿಸಿಕೊಳ್ಳಲಿದ್ದಾರಾ ನೋಡಬೇಕು.

ಮೂಲ ಮೈಸೂರು ಆದರು ರ್‍ಯಾಪರ್ ಇಶಾನಿ ಹುಟ್ಟಿ ಬೆಳೆದದ್ದು ಮಾತ್ರ ದುಬೈ ಮತ್ತು ಲಾಸ್ ಏಂಜಲೀಸ್‌ನಲ್ಲಿ. ಈ ಬಾರಿ ಮೂರನೇ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟ ಇವರು ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಬಿಗ್‌ಬಾಸ್‌ನಲ್ಲಿ ಇವರ ರ್‍ಯಾಪ್ ಹಾಡುಗಳು ಎಷ್ಟು ಮೋಡಿ ಮಾಡುತ್ತದೆ ಎಂದು ನೋಡಬೇಕಿದೆ.

‘ಹರಹರ ಮಹಾದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡುವ ಮೂಲಕ ಕಿರುತೆರೆಯ ಶಿವ ಎಂದೇ ಖ್ಯಾತಿಗಳಿಸಿರುವ ವಿನಯ್ ಗೌಡ ಈ ಬಾರಿ ನಾಲ್ಕನೇ ಸ್ಪರ್ಧಿಯಾಗಿ ಬಿಗ್ ಬಾಸ್‌ಗೆ ಕಾಲಿಟ್ಟಿದ್ದಾರೆ. ಶಿವನಾಗಿ ಜನರ ಹೃದಯ ಗೆದ್ದ ಇವರು ವಿನಯ್ ಆಗಿ ಜನತೆಗೆ ಎಷ್ಟು ಮನರಂಜನೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.

‘ತುಕಾಲಿ ಸಂತೋಷ್’ ಎಂಬ ಹೆಸರಿನಿಂದ ಜನಪ್ರಿಯತೆ ಗಳಿಸಿರುವ ಸಂತೋಷ್ ಕುಮಾರ್ ಅವರು ಬಿಗ್‌ಬಾಸ್ ಮನೆಯೊಳಗೆ ಐದನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಹಾಸ್ಯ ನಟನಾಗಿರುವ ಇವರು ಮನೆಯೊಳಗೆ ನಗು ತುಂಬುವುದಂತು ಗ್ಯಾರಂಟಿ. ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಭಾಗವಹಿಸಿ ಜನಮನ ಗೆದ್ದ ಇವರು ದೊಡ್ಮನೆ ಗೆಲ್ಲುವರೇ ನೋಡಬೇಕಿದೆ

ನೀತು ವನಜಾಕ್ಷಿ ಬಿಗ್‌ಬಾಸ್ ಮನೆಯೊಳಗೆ ಆರನೇ ಸ್ಪರ್ಧಿಯಾಗಿದ್ದಾರೆ. ತೃತೀಯ ಲಿಂಗಿ ಸಮುದಾಯದಿಂದ ಬಂದಿರುವ ಇವರು, ಟ್ರಾನ್ಸ್‌ಜೆಂಡರ್‌ಗಳ ಬಗ್ಗೆ ಇರುವ ಪೂರ್ವಗ್ರಹಗಳನ್ನು ಹೋಗಲಾಡಿಸುವ ಉದ್ದೇಶದಿಂದ ಬಿಗ್‌ಬಾಸ್ ವೇದಿಕೆಗೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ವನಜಾಕ್ಷಿ ಅವರ ಆತ್ಮವಿಶ್ವಾಸ ದೊಡ್ಮನೆಯಲ್ಲಿ ಹೇಗೆ ಕೆಲಸ ಮಾಡಲಿದೆ ಎಂದು ನೋಡಬೇಕಿದೆ.

30 ವರ್ಷಗಳ ಕಾಲ ಕನ್ನಡ ಕಿರುತೆರೆ ಲೋಕದಲ್ಲಿ ಸಿರಿವಂತೆಯಾಗಿ ಮೆರೆದ ಸಿರಿ ಅವರು ಬಿಗ್ ಬಾಸ್ ಮನಗೆ ಏಳನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ಅತ್ಯಂತ ಪ್ರಬುದ್ಧ ನಟನೆ ಮೂಲಕ ಗಮನ ಸೆಳೆದಿರುವ ಇವರು ದೊಡ್ಮನೆಯಲ್ಲಿ ಯಾವ ರೀತಿ ಸ್ಪರ್ಧೆ ನೀಡಲಿದ್ದಾರೆ ಎನ್ನುವುದು ನಮ್ಮ ನಿರೀಕ್ಷೆಯಾಗಿದೆ.

ಉರಗ ತಜ್ಞ ಸ್ನೇಕ್ ಶ್ಯಾಮ್ ಬಿಗ್ ಬಾಸ್ ಮನೆಗೆ ಎಂಟನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ಹಾವು ಹಿಡಿಯುವುದರಲ್ಲಿ ಪಳಗಿರುವ ಇವರು ಬಿಗ್ ಬಾಸ್ ಮನೆಯ ಇತರ ಸ್ಪರ್ಧಿಗಳಿಗೆ ಯಾವ ರೀತಿ ಸ್ಪರ್ಧೆ ನೀಡಲಿದ್ದಾರೆ ಎಂದು ನೋಡಬೇಕಿದೆ.

ಕನ್ನಡ ಹಲವು ಧಾರಾವಾಹಿಗಳಲ್ಲಿ ಪೋಷಕ ನಟಿಯಾಗಿ ನಟಿಸಿರುವ ಭಾಗ್ಯಶ್ರಿ ಈ ಬಾರಿಯ ದೊಡ್ಮನೆಗೆ 9ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ನಮ್ಮಮ್ಮ ಸೂಪರ್ ಸ್ಟಾರ್‌ನಲ್ಲಿ ಸ್ಪರ್ಧಿಸಿಯೂ ಗಮನ ಸೆಳೆದಿದ್ದರು. ಬಿಗ್ ಬಾಸ್ ಮನೆಗೆ ಯಾವ ರೀತಿಯ ಭಾಗ್ಯ ತರಲಿದ್ದಾರೆ ನೋಡಬೇಕಿದೆ

ಈ ಬಾರಿ ದೊಡ್ಮನೆಗೆ ಪತ್ರಕರ್ತ ಗೌರೀಶ್ ಅಕ್ಕಿ ಹತ್ತನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ಬಿಗ್‌ಬಾಸ್ ಅರ್ಥ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಬಂದಿರುವುದಾಗಿ ಹೇಳಿರುವ ಗೌರೀಶ್ ಅವರು ಕೊನೆಗೆ ಟ್ರೋಫಿ ಹಿಡಿಯುತ್ತಾರೋ ಇಲ್ಲ ಹಾಗೆ ಹಿಂತಿರುಗುತ್ತಾರೋ ನೋಡಬೇಕಿದೆ.

ಬಾಸ್ಕೆಟ್‌ಬಾಲ್‌ನಿಂದ ಫಿಟ್‌ನೆಸ್ ಹವ್ಯಾಸಕ್ಕೆ, ಅಲ್ಲಿಂದ ಮಾಡಲಿಂಗ್ ಕ್ಷೇತ್ರಕ್ಕೆ ಜಿಗಿದಿರುವ ಅಜಯ್ ಅವರು ಸದ್ಯ ಬರ್ಗರ್ ಶಾಪ್ ನಡೆಸುತ್ತಿದ್ದಾರೆ. ಬಿಗ್‌ಬಾಸ್ ಮನೆಗೆ ಹನ್ನೊಂದನೇ ಸ್ಪರ್ಧಿಯಾಗಿ ಬಂದಿದ್ದಾರೆ. ವಿಲನ್ ರೋಲ್ ಸಿಕ್ಕಿದ್ರೆ ಮಾಡ್ತಿನಿ ಎನ್ನುವ ಮೈಖಲ್ ದೊಡ್ಮನೆಯಲ್ಲಿ ಯಾರಿಗೆ ವಿಲನ್ ಆಗುತ್ತಾರೆ ಎನ್ನುವುದೇ ಕುತೂಹಲ.

ಡ್ರೋನ್‌ನಿಂದಲೇ ಭಾರೀ ಟ್ರೋಲ್‌ಗೆ ಒಳಗಾಗಿರುವ ಪ್ರತಾಪ್ ಅವರು ಬಿಗ್ ಬಾಸ್ ಮನೆಗೆ ಹನ್ನೆರಡನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ತಮ್ಮನ್ನು ಕಾಲೆಳೆವರಿಗೆ ತಮ್ಮ ಸಾಧನೆ ಮೂಲಕವೇ ಉತ್ತರಿಸುತ್ತೇನೆ ಎನ್ನುವ ಇವರು ದೊಡ್ಮನೆಯಲ್ಲಿ ಯಾವ ರೀತಿ ಸವಾಲುಗಳನ್ನು ಎದುರಿಸುತ್ತಾರೆ ನೋಡಬೇಕಿದೆ.

ಧಾರವಾಹಿಗಳಲ್ಲಿ ವಿಲನ್ ಪಾತ್ರದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ತನಿಶಾ ಕುಪ್ಪಂಡ ಅವರು ಈ ಬಾರಿ ಹದಿಮೂರನೇ ಸ್ಪರ್ಧಿಯಾಗಿ ಮನೆಯೊಳಗೆ ಬಲಗಾಲಿಟ್ಟಿದ್ದಾರೆ. ತೆರೆಯ ಮೇಲೆ ವಿಲನ್ ಆಗಿರುವ ಇವರು ಮನೆಯೊಳಗೆ ಯಾರಿಗೆ ವಿಲನ್ ಆಗುತ್ತಾರೆ?................

ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್, ದೊಡ್ಮನೆಗೆ ಹದಿನಾಲ್ಕನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗಿರುವ ಇವರು ಮನೆಯೊಳಗೆ ತಮ್ಮ ಇಮೇಜ್ ಬದಲಾಯಿಸಿಕೊಳ್ಳುತ್ತಾರಾ? ಅಥವಾ ಮತ್ತಷ್ಟು ಟ್ರೋಲ್‌ಗೆ ಒಳಗಾಗುತ್ತಾರಾ ನೋಡಬೇಕಿದೆ.

‘ಚಾರ್ಲಿ’ ಚಿತ್ರದ ಮೂಲಕ ಗಮನ ಸೆಳೆದ ನಟಿ ಸಂಗೀತಾ ಶೃಂಗೇರಿ, ಹದಿನೈದನೇ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ‘ಕೋಟಿ ಕೊಟ್ಟರು ಬಿಗ್ ಬಾಸ್‌ಗೆ ಹೋಗುವುದಿಲ್ಲ’ ಎಂದ ಇವರು ಇದೀಗ ಮನೆುಯೊಳಗೆ ಪ್ರವೇಶಿಸಿದ್ದಾರೆ. ನಟಿಯಾಗಿ ಗೆದ್ದಿರುವ ಇವರು ಸ್ಪರ್ಧಿಯಾಗಿ ಹೇಗೆ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ ಎನ್ನುವುದೇ ಕುತೂಹಲ.

ಕೃಷಿಕ ಸಂತೋಷ್ ವರ್ತೂರ್ ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಹದಿನಾರನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ‘ಡೊಳ್ಳು’ ಚಿತ್ರದಲ್ಲಿ ಗಮನಾರ್ಹ ಪಾತ್ರ ಮಾಡಿ ಗಮನ ಸೆಳೆದ ಕಾರ್ತಿಕ್ ಮಹೇಶ್, ಕೊನೆಯ ಸ್ಪರ್ಧಿಯಾಗಿ ಮನೆಯೊಗಳಗೆ ಪ್ರವೇಶಿಸಿದ್ದಾರೆ. ಹಲವಾರು ಧಾರವಾಹಿಗಳಲ್ಲಿಯೂ ಕಾರ್ತಿಕ್ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.