ಬೆಂಗಳೂರು: ಡಬಲ್ ಎಲಿಮಿನೇಷನ್ ಮುಗಿಸಿ ಏಳನೇ ವಾರಕ್ಕೆ ಕಾಲಿಟ್ಟಿರುವ ಬಿಗ್ಬಾಸ್ ಸ್ಪರ್ಧಿಗಳ ನಡುವೆ ಗೆಲುವಿಗಾಗಿ ಬಾರಿ ಹಣಾಹಣಿ ಪ್ರಾರಂಭಗೊಂಡಿದೆ. ಎರಡು ತಂಡಗಳಾಗಿ ವಿಭಜನೆಗೊಂಡಿರುವ ಸ್ಪರ್ಧಿಗಳು, ಎದುರಾಳಿ ತಂಡಗಳಿಗೆ ಒಂದರ ಮೇಲೊಂದರಂತೆ ಸವಾಲು ನೀಡುವ ಮೂಲಕ ಆಟದ ಬಿಸಿ ತಲೆ ಬೋಳಿಸಿಕೊಳ್ಳುವವರೆಗೂ ತಲುಪಿದೆ.

ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳನ್ನು ‘ಗಜಕೇಸರಿ’ ಮತ್ತು ‘ಸಂಪತ್ತಿಗೆ ಸವಾಲ್’ ಎಂಬ ಎರಡು ತಂಡಗಳಾಗಿ ವಿಭಾಗಿಸಲಾಗಿದ್ದು, ‘ಗಜಕೇಸರಿ’ ತಂಡದಲ್ಲಿ ವಿನಯ್, ನಮ್ರತಾ, ಸಂಗೀತಾ, ಸ್ನೇಹಿತ್, ಸಿರಿ ಮತ್ತು ಪ್ರತಾಪ್ ಇದ್ದಾರೆ. ಎದುರಾಳಿ ‘ಸಂಪತ್ತಿಗೆ ಸವಾಲ್’ ತಂಡದಲ್ಲಿ ಮೈಕಲ್, ನೀತು, ತನಿಷಾ, ವರ್ತೂರು ಸಂತೋಷ್, ಕಾರ್ತಿಕ್ ಹಾಗೂ ತುಕಾಲಿ ಸಂತೋಷ್ ಇದ್ದಾರೆ.

ಎರಡು ತಂಡಗಳಿಗೂ ಬಿಗ್ಬಾಸ್ ಒಂದು ಟಾಸ್ಕ್ ನೀಡಿದ್ದು, ಅದರನ್ವಯ ಎದುರಾಳಿ ತಂಡಕ್ಕೆ ಒಂದಾದ ಮೇಲೆ ಒಂದರಂತೆ ಸವಾಲುಗಳನ್ನು ನೀಡಬೇಕಿದೆ. ಇದರಂತೆ, ಗಜಕೇಸರಿ ತಂಡದಲ್ಲಿರುವ ಸಂಗೀತಾ ಅವರು ಎದುರಾಳಿ ತಂಡದಲ್ಲಿರುವ ಕಾರ್ತಿಕ್ ಮತ್ತು ತುಕಾಲಿ ಅವರು ತಲೆಯನ್ನು ಕ್ಲೀನ್ ಶೇವ್ ಮಾಡಿಸಿಕೊಳ್ಳಬೇಕು ಎಂದು ಸವಾಲು ಹಾಕಿದ್ದಾರೆ.
.Bigg Boss Kannada: ಬಿಗ್ಬಾಸ್ ಮನೆಗೆ ಬ್ರಹ್ಮಾಂಡ ಗುರೂಜಿ ಸ್ಪೆಷಲ್ ಎಂಟ್ರಿ!.
ಈ ಸವಾಲಿಗೆ ಮೊದಲು ವಿರೋಧ ವ್ಯಕ್ತವಾಗಿದ್ದು, ನಂತರ ‘ಗೇಮ್ಗಾಗಿ, ತಂಡಕ್ಕಾಗಿ ಏನಾದ್ರೂ ಮಾಡುತ್ತೀನಿ, ತಲೆ ಬೋಳಿಸಿಕೊಂಡರೂ ಕೂದಲು ಮತ್ತೆ ಬರುತ್ತೆ’ ಎಂದು ಹೇಳಿರುವ ಕಾರ್ತಿಕ್ ತಮ್ಮ ತಲೆ ಬೋಳಿಸಿಕೊಳ್ಳಲು ಸಿದ್ಧರಾಗಿ ಕೂತಿದ್ದಾರೆ.

ಬಿಗ್ಬಾಸ್ ಪ್ರಾರಂಭದಿಂದಲೂ ಕಾರ್ತಿಕ್ ಹಾಗೂ ಸಂಗೀತಾ ಅವರ ಸ್ನೇಹ ಎಲ್ಲರ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ, ಕಾರ್ತಿಕ್ ಅವರ ಜೊತೆಗೆ ಅಷ್ಟು ಸ್ನೇಹದಿಂದ ಇದ್ದ ಸಂಗೀತಾ ಅವರೇ ಕಾರ್ತಿಕ್ ಅವರಿಗೆ ತಲೆ ಬೋಳಿಸಿಕೊಳ್ಳುವ ಸವಾಲು ಹಾಕಿದ್ದಾರೆ. ಈ ಮೂಲಕ ಬಿಗ್ಬಾಸ್ ಅನ್ನು ಗೆಲ್ಲುವ ಹಠ ಸ್ಪರ್ಧಿಗಳನ್ನು ಯಾವ ಅತಿರೇಕಕ್ಕೆ ತೆಗೆದುಕೊಂಡು ಹೋಗುತ್ತಿದೆ ಎಂಬುದು ಎಲ್ಲರನ್ನು ಅಚ್ಚರಿಗೊಳಿಸಿದೆ.
.ನನ್ನ ಪಾಡಿಗೆ ನಾನಿದ್ದಿದ್ದೇ ತಪ್ಪು: ಮುಂದಿನವಾರ ಇವರೇ ಎಲಿಮಿನೇಟ್ ಎಂದ ಭಾಗ್ಯಶ್ರೀ.
ಬಿಗ್ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು Jio Cinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.