ನವದೆಹಲಿ: ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ(ಪಿಒಕೆ) ಚಾಂಪಿಯನ್ಸ್ ಟ್ರೋಫಿ ಪ್ರವಾಸ ಆಯೋಜಿಸಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧಾರಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಡೆ ನೀಡಿದೆ.

ಪಿಸಿಬಿಯ ಕ್ರಮಕ್ಕೆ ಬಿಸಿಸಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಐಸಿಸಿ ಶುಕ್ರವಾರ ಈ ನಿರ್ಧಾರ ಕೈಗೊಂಡಿದೆ.

2017ರಲ್ಲಿ ಕೊನೆಯ ಬಾರಿಗೆ ನಡೆದಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯು, ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ನಿರಾಕರಿಸಿದ ನಂತರ ಅಸ್ಥಿರವಾಗಿದೆ.

ಭಾರತವು ದುಬೈನಲ್ಲಿ ತಮ್ಮ ಪಂದ್ಯಗಳನ್ನು ನಡೆಸಬೇಕೆಂಬ ‘ಹೈಬ್ರಿಡ್ ಮಾಡೆಲ್’ಅನ್ನು ಪಿಸಿಬಿ ತಿರಸ್ಕರಿಸಿದೆ.

ಪಂದ್ಯಾವಳಿಯ ವೇಳಾಪಟ್ಟಿಯನ್ನು ಸಹ ತಡೆಹಿಡಿಯಲಾಗಿದ್ದು, ಪಿಒಕೆ ಕುರಿತಾದ ಪಾಕಿಸ್ತಾನದ ನಡೆ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

ಐಸಿಸಿಯ ಉನ್ನತಾಧಿಕಾರಿಗಳ ಜೊತೆ ಮಾತನಾಡಿರುವ ಐಸಿಸಿ ಕಾರ್ಯದರ್ಶಿ ಜಯ್ ಶಾ ಪಿಒಕೆಯಲ್ಲಿ ಪ್ರವಾಸ ಕುರಿತಾದ ಪಾಕಿಸ್ತಾನದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಬಿಸಿಸಿಐ ಕಾರ್ಯದರ್ಶಿ ಐಸಿಸಿಗೆ ಕರೆ ಮಾಡಿ ಪಾಕ್ ಆಕ್ರಮಿತ ಕಾಶ್ಮೀರದ ಅಡಿಯಲ್ಲಿ ಬರುವ ನಗರಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಪ್ರವಾಸ ಆಯೋಜಿಸಿರುವ ಪಿಸಿಬಿಯ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ, ಐಸಿಸಿಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇಸ್ಲಾಮಾಬಾದ್ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಪಿಒಕೆಗೆ ಯಾವುದೇ ಪ್ರವಾಸ ಸರಿಯಲ್ಲ ’ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಜಾಗತಿಕ ಕ್ರೀಡಾಕೂಟವಾಗಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸುವ ದೇಶಗಳ ಮಂಡಳಿಗಳ ಗಮನಕ್ಕೆ ತರದೇ ವಿವಾದಿತ ಪಿಒಕೆ ಪ್ರದೇಶದ ಅಡಿಯಲ್ಲಿ ಬರುವ ಸ್ಕರ್ಡು, ಮುರ್ರೆ, ಹುಂಜಾನಗರಗಳಲ್ಲಿ ಪ್ರವಾಸದ ವೇಳಾಪಟ್ಟಿಯನ್ನು ಪಿಸಿಬಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.