ಬೆಂಗಳೂರು: ವಿಕೆಟ್ ಕೀಪರ್ ಎಲ್. ಆರ್. ಚೇತನ್ ಮತ್ತು ಬೌಲಿಂಗ್–ಆಲ್ರೌಂಡರ್ ಎಲ್. ಮನ್ವಂತಕುಮಾರ್ ಅವರು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಯು ಶುಕ್ರವಾರ 15 ಆಟಗಾರರಿರುವ ತಂಡವನ್ನು ಪ್ರಕಟಿಸಿದೆ. ಮಯಂಕ್ ಅಗರವಾಲ್ ನಾಯಕತ್ವ ವಹಿಸಲಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಆಡುತ್ತಿರುವ ಭಾರತ ತಂಡದಲ್ಲಿರುವ ವೈಶಾಖ ವಿಜಯಕುಮಾರ್ ಅವರೂ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಎ ತಂಡದಲ್ಲಿರುವ ಬ್ಯಾಟರ್ ದೇವದತ್ತ ಪಡಿಕ್ಕಲ್ ಕೂಡ ಸ್ಥಾನ ಗಿಟ್ಟಿಸಿದ್ದಾರೆ.

ಇದೇ 23ರಿಂದ ಡಿಸೆಂಬರ್ 5ರವರೆಗೆ ಟೂರ್ನಿಯು ಇಂದೋರ್ನಲ್ಲಿ ನಡೆಯಲಿದೆ. ಕರ್ನಾಟಕವು ಆಡಲಿರುವ ಬಿ ಗುಂಪಿನಲ್ಲಿ ಉತ್ತರಾಖಂಡ, ತ್ರಿಪುರ, ಸೌರಾಷ್ಟ್ರ, ಸಿಕ್ಕಿಂ, ತಮಿಳುನಾಡು, ಬರೋಡಾ ಮತ್ತು ಗುಜರಾತ್ ತಂಡಗಳು ಇವೆ.

ಕರ್ನಾಟಕ ತಂಡ: ಮಯಂಕ್ ಅಗರವಾಲ್ (ನಾಯಕ), ಮನೀಷ್ ಪಾಂಡೆ (ಉಪನಾಯಕ), ದೇವದತ್ತ ಪಡಿಕ್ಕಲ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಆರ್. ಸ್ಮರಣ್, ಕೆ.ಎಲ್.ಶ್ರೀಜಿತ್ (ವಿಕೆಟ್ ಕೀಪರ್), ವೈಶಾಖ ವಿಜಯಕುಮಾರ್, ಮ್ಯಾಕ್ನಿಲ್ ನರೊನ್ಹಾ, ವಾಸುಕಿ ಕೌಶಿಕ್, ಮನೋಜ್ ಭಾಂಡಗೆ, ವಿದ್ಯಾಧರ್ ಪಾಟೀಲ, ಎಲ್.ಆರ್.ಚೇತನ್ (ವಿಕೆಟ್ ಕೀಪರ್), ಶುಭಾಂಗ್ ಹೆಗಡೆ, ಎಲ್ ಮನ್ವಂತ್ ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.