ಕೋಲ್ಕತ್ತ: ವಿಶ್ವದ ಅಗ್ರಮಾನ್ಯ ಚೆಸ್ ಆಟಗಾರ, ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ ಅವರು ಟಾಟಾ ಸ್ಟೀಲ್ ಚೆಸ್ ಇಂಡಿಯಾ ರ್ಯಾಪಿಡ್ ಟೂರ್ನಿಯ ಓಪನ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಭಾರತದ ಆರ್. ಪ್ರಜ್ಞಾನಂದ ಅವರು ರನ್ನರ್ ಅಪ್ ಆದರು.

ಮಹಿಳೆಯರ ವಿಭಾಗದಲ್ಲಿ ರಷ್ಯಾದ ಅಲೆಕ್ಸಾಂದ್ರಾ ಗೊರಿಯಾಚಕಿನಾ ಅವರು ಸತತ ಉತ್ತಮ ಲಯ ಕಾಪಾಡಿಕೊಂಡರು. 7.5 ಅಂಕಗಳೊಂದಿಗೆ ವಿಜೇತರಾದರು.

ಕಾರ್ಲಸನ್ ಅವರು ಏಳನೇ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೇಮರ್ ವಿರುದ್ಧ ಜಯಗಳಿಸಿದರು. ಎಂಟನೇ ಸುತ್ತಿನಲ್ಲಿಯೂ ಮ್ಯಾಗ್ನಸ್ ಅವರು ಡೇನಿಲ್ ದುಬೊವ್ ವಿರುದ್ಧ ಗೆದ್ದರು. ಒಂಬತ್ತನೇ ಸುತ್ತಿನಲ್ಲಿ ನಾದಿರ್ಬೆಕ್ ಅಬ್ದುಸತ್ತೊರೊವ್ ಅವರ ವಿರುದ್ಧ ಡ್ರಾ ಸಾಧಿಸಿದರು. 9ರಲ್ಲಿ 7.5 ಅಂಕಗಳನ್ನು ಗಳಿಸಿದ ಮ್ಯಾಗ್ನಸ್ ಅವರು ಪ್ರಶಸ್ತಿ ತಮ್ಮದಾಗಿಸಿಕೊಂಡರು. ಚೆನ್ನೈನ ಪ್ರಜ್ಞಾನಂದ 5.5 ಅಂಕ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.