ನವದೆಹಲಿ: ದಿನ ಬೆಳಗಾಗುವುದರಲ್ಲಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ರಾನು ಮಂಡಲ್ ಇದೀಗ ಯುಟ್ಯೂಬ್ನಲ್ಲಿ ಟಾಪ್ ಟ್ರೆಂಡ್ ಆಗಿದ್ದಾರೆ.

ತೇರಿ, ಮೇರಿ ಕಹಾನಿ ಹೈ..’ ಗೀತೆಯನ್ನು ಹಾಡಿರುವ ಅವರವಿಡಿಯೊ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ, ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಿಮೇಶ್ ರೇಶಮಿಯಾ ಅವರ ಹ್ಯಾಪಿ ಹಾರ್ಡಿ ಅಂಡ್ ಹೀರ್ ಚಿತ್ರದ ‘ತೇರಿ ಮೇರಿ ಕಹಾನಿ ಹೈ‘ ಗೀತೆ ಹಾಡಿದ ಬಳಿಕ ಇದೀಗ ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾನು ಮಂಡಲ್ ಅವರು ಇತ್ತೀಚೆಗೆ ಹಿಂದಿಯ ಕ್ಯಾರಿಯರ್ ನ್ಯೂಸ್ ಸುದ್ದಿ ವಾಹಿನಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಹಾಡಿರುವ ಹಳೆಯ ಹಿಂದಿ ಚಿತ್ರ ಗೀತೆಗಳು ವೈರಲ್ ಆಗಿವೆ. ಹಾಗೇ ಸೋನಿ ಟಿ.ವಿಯ ಸೂಪರ್ಸ್ಟಾರ್ಸಿಂಗರ್ನಲ್ಲಿ ವಿಶೇಷ ಅತಿಥಿಯಾಗಿಯೂ ಭಾಗವಹಿಸಿದ್ದಾರೆ. ಮುಂದೆ ಈ ಕಾರ್ಯಕ್ರಮದಲ್ಲಿ ಹಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಸಿಂಗಿಂಗ್ ಸ್ಟಾರ್ ರಾನು ಮಂಡಲ್ಗೆ ₹ 55 ಲಕ್ಷದ ಮನೆ ನೀಡಿದರೇ ಸಲ್ಮಾನ್ ಖಾನ್?

ಯುಟ್ಯೂಬ್ನಲ್ಲಿ ರಾನು ಮಂಡಲ್ ಎಂದು ಟೈಪಿಸಿದರೆ ಅವರು ಟಾಪ್ ಟ್ರೆಂಡಿಂಗ್ನಲ್ಲಿ ಕಾಣಸಿಗುತ್ತಾರೆ.

ತಮ್ಮ 60 ವರ್ಷಗಳ ಬಳಿಕ ರಾನು ಮಂಡಲ್ ಅವರ ಬದುಕ ಹೊಸ ತಿರುವು ಪಡೆದುಕೊಂಡಿದೆ. ದೂರವಾಗಿದ್ದ ಕುಟುಂಬದವರು ಮತ್ತು ಸಂಬಂಧಿಕರು ಇದೀಗ ಹತ್ತಿರ ಬರುತ್ತಿದ್ದಾರೆ.

ಇದನ್ನೂ ಓದಿ:ರಾನು ಮಂಡಲ್ಎಂಬ ಇಂಟರ್ನೆಟ್ ಸ್ಟಾರ್!

ಪಶ್ಚಿಮಬಂಗಾಳದ ರಣಘಾಟ್ನ ಅವರು ರೈಲ್ವೆ ಫ್ಲಾಟ್ಫಾರಂನಲ್ಲಿ ಆತ್ಮಖುಷಿಗೆ ಹಾಡುತ್ತಿದ್ದುದು ಹೊಟ್ಟೆ ಹೊರೆಯಲು ನೆರವಾಗುತ್ತಿತ್ತು. ಆಕೆ ದನಿಯಲ್ಲಿ ಗಾಯಕಿ ಲತಾ ಮಂಗೇಷ್ಕರ್ ಛಾಯೆ ಗುರುತಿಸಿದ ಒಬ್ಬರು ವಿಡಿಯೊ ಮಾಡಿ ಜಾಲತಾಣಕ್ಕೆ ಹಾಕಿದರು. ಅದು ಅವರ ಅದೃಷ್ಟವನ್ನೇ ಬದಲಿಸಿತು.

ಇವರು ದನಿಯಾಗಿರುವ ಶೋರ್ ಚಿತ್ರದ ‘ಏಕ್ ಪ್ಯಾರ್ ಕಾ ನಗ್ಮಾ ಹೈ.. ಮೌಜೋಂಕಿ ರವಾನಿ ಹೈ, ಜಿಂದಗೀ ಔರ್ ಕುಚ್ ಭೀ ನಹೀ.. ತೇರಿ, ಮೇರಿ ಕಹಾನಿ ಹೈ..’ ಗೀತೆಗಳು ಸಾಕಷ್ಟು ಜನಪ್ರಿಯತೆ ಪಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.