ಕೋವಿಡ್ 19 ಪರೀಕ್ಷೆಯನ್ನು ಮನೆಯಲ್ಲೇ ಮಾಡಿಕೊಳ್ಳಲು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅನುಮೋದನೆ ನೀಡಿದೆ. ಕೋವಿಡ್ ರೋಗಿಗಳ ನಿಕಟ ಸಂಪರ್ಕದಲ್ಲಿರುವವರು ಮತ್ತು ಒಮ್ಮೆ ಕೋವಿಡ್ ಸೋಂಕಿಗೆ ತುತ್ತಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೆ ಅವರು ಪದೇ ಪದೇ ಕೋವಿಡ್ ಪರೀಕ್ಷೆಗೆ ಲ್ಯಾಬ್‌ಗೆ ತೆರಳುವ ಬದಲು ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮೂಲಕ ಮನೆಯಲ್ಲೇ ಪರಿಶೀಲಿಸಿಕೊಳ್ಳಬಹುದು.

ಕೋವಿಡ್ ಪರೀಕ್ಷಾ ಕೇಂದ್ರಗಳಲ್ಲಿ ಜನಸಂದಣಿ, ಲಾಕ್‌ಡೌನ್ ಮತ್ತು ಪರೀಕ್ಷಾ ವೆಚ್ಚ ಹೀಗೆ ಹಲವು ಅನಾನುಕೂಲಗಳನ್ನು ಪರಿಗಣಿಸಿ, ಜನರು ಸೂಕ್ತ ರೀತಿಯಲ್ಲಿ ಮನೆಯಲ್ಲಿ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಕಿಟ್ ಬಳಸಿ ಕೋವಿಡ್ 19 ಫಲಿತಾಂಶ ಪಡೆಯಬಹುದು ಎಂದು ಐಸಿಎಂಆರ್ ವಿವರಿಸಿದೆ.

ಆದರೆ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್‌ಗೆ ಸಂಬಂಧಿಸಿ ನಿಯಮಾವಳಿಯನ್ನು ಐಸಿಎಂಆರ್ ಬಿಡುಗಡೆ ಮಾಡಿದೆ. ಅದರಲ್ಲಿ ಹೇಳಿರುವಂತೆ ನಿಗದಿತ ಪ್ರಕ್ರಿಯೆ ಮೂಲಕ ಕೋವಿಡ್ ಟೆಸ್ಟ್ ಮಾಡಿಕೊಳ್ಳಬಹುದು. ಅತಿ ಶೀಘ್ರದಲ್ಲಿ ಕೋವಿಡ್ ಸೋಂಕಿನ ಪಾಸಿಟಿವ್ ಮತ್ತು ನೆಗೆಟಿವ್ ಕುರಿತು ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಫಲಿತಾಂಶ ನೀಡುತ್ತದೆ. ಹೀಗಾಗಿ ಅಗತ್ಯ ಇರುವವರು ತ್ವರಿತವಾಗಿ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ.

ಐಸಿಎಂಆರ್ ಹೇಳಿರುವ ನಿಯಮಗಳು ಏನು ಮತ್ತು ಮನೆಯಲ್ಲೇ ಕೋವಿಡ್ ಟೆಸ್ಟ್ ಮಾಡಲು ಇರುವ ಪ್ರಕ್ರಿಯೆಗಳು

ಪ್ರಯೋಗಾಲಯದಲ್ಲಿ ಕೋವಿಡ್ ಸೋಂಕು ಪ್ರಕರಣ ದೃಢಪಟ್ಟ ವ್ಯಕ್ತಿಗಳ ನಿಕಟ ಸಂಪರ್ಕದಲ್ಲಿರುವವರು ಮನೆಯಲ್ಲೇ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬಹುದು.

ಕೋವಿಡ್ ಸೋಂಕಿನ ಕುರಿತು ಆರೋಗ್ಯ ಸಚಿವಾಲಯ ಹೊರಡಿಸಿರುವ ಕೈಪಿಡಿಯಲ್ಲಿ ವಿವರಿಸಿರುವ ರೋಗ ಲಕ್ಷಣ ತೀವ್ರವಾಗಿದ್ದಲ್ಲಿ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಬಹುದು.

ಯಾವುದೇ ಲಕ್ಷಣವಿಲ್ಲದೆ, ಯಾವುದೇ ಸಮಸ್ಯೆಯಿಲ್ಲದೆ ಅನಗತ್ಯವಾಗಿ ಟೆಸ್ಟ್ ಮಾಡಿಸಿಕೊಳ್ಳಬಾರದು.

ಐಸಿಎಂಆರ್ ಅನುಮೋದಿಸಿರುವ ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಬಳಕೆದಾರರ ಕೈಪಿಡಿಯಲ್ಲಿರುವ ವಿಧಾನವನ್ನು ಹಂತಹಂತವಾಗಿ ಸೂಚನೆಯಂತೆ ಬಳಸಬೇಕು.

ಕೋವಿಸೆಲ್ಫ್ ಕಿಟ್

ಮಹಾರಾಷ್ಟ್ರದ ಪುಣೆಯ ಮೈಲ್ಯಾಬ್ ಡಿಸ್ಕವರಿ ಸೊಲ್ಯುಶನ್ಸ್ ಲಿ. ಕಂಪನಿ ಪರಿಚಯಿಸಿರುವ ಕೋವಿಸೆಲ್ಫ್ (ಪ್ಯಾಥೊಕ್ಯಾಚ್) ಕೋವಿಡ್-19 ಒಟಿಸಿ ಆ್ಯಂಟಿಜೆನ್ ಎಲ್‌ಎಫ್ ಡಿವೈಸ್ ಎಂಬ ಹೋಮ್ ಟೆಸ್ಟಿಂಗ್ ಕಿಟ್ ಬಳಸಲು ಐಸಿಎಂಆರ್ ಅನುಮೋದನೆ ನೀಡಿದೆ. ಈ ಉಪಕರಣ ಮತ್ತು ಬಳಕೆ ಕುರಿತು ಸಂಪೂರ್ಣ ಮಾಹಿತಿಯ ವಿಡಿಯೋ ಡೆಮೊ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿದೆ. ಅಲ್ಲದೆ, ಸೂಚನೆಗಳ ಕೈಪಿಡಿ ಕೂಡ ಲಭ್ಯವಿದೆ.ಹೋಮ್ ಟೆಸ್ಟಿಂಗ್ ಕಿಟ್ ಬೆಲೆ ₹250 ಎಂದು ಮೈಲ್ಯಾಬ್ಸ್ ಹೇಳಿದೆ. ಜತೆಗೆ 15 ನಿಮಿಷದಲ್ಲೇ ಕೋವಿಡ್ 19 ಪರೀಕ್ಷೆಯ ಫಲಿತಾಂಶ ಬರಲಿದೆ ಎಂದು ಕಂಪನಿ ತಿಳಿಸಿದೆ.

ಈ ಬಗ್ಗೆ ಖಾಸಗಿ ವಾಹಿನಿ ಜೊತೆ ಮಾತನಾಡಿದ ಮೈಲ್ಯಾಬ್ ಎಂಡಿ, ಹಸ್ಮುಖ್ ರಾವಲ್, ಪ್ರಸ್ತುತ ವಾರಕ್ಕೆ 70 ಲಕ್ಷ ಟೆಸ್ಟ್‌ಗಳನ್ನು ಮಾಡಲಾಗುತ್ತಿದೆ. ಮುಂದಿನ ವಾರಗಳಲ್ಲಿ ಉತ್ಪಾದನೆಯನ್ನು ದ್ವಿಗುಣಗೊಳಿಸಲಾಗುತ್ತದೆ ಎಂದಿದ್ದಾರೆ. ಅಲ್ಲದೆ, ಬೆಲೆ ಎಲ್ಲ ತೆರಿಗೆ ದರ ಸೇರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. 2-3 ದಿನಗಳಲ್ಲೇ ಎಲ್ಲ ಮೆಡಿಕಲ್ ಸ್ಟೋರ್‌ಗಳಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದಿದ್ದಾರೆ.

ಮೊಬೈಲ್ ಆ್ಯಪ್ ಬಳಸಿ

ಹೋಮ್ ಟೆಸ್ಟಿಂಗ್ ಕಿಟ್ ಬಳಸಲು ಮೊಬೈಲ್ ಆ್ಯಪ್ ಅಗತ್ಯವಾಗಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್ ಮೂಲಕ ಅದರಲ್ಲಿ ಹೇಳಿರುವಂತೆ ಮೂಗಿನ ದ್ರವ ಬಳಸಿ ಪರೀಕ್ಷೆ ನಡೆಸಬೇಕು. ಮೊಬೈಲ್ ಆ್ಯಪ್‌ನಲ್ಲಿ ಟೆಸ್ಟ್ ವಿಧಾನದ ಕುರಿತು ವಿವರಿಸಲಾಗಿದೆ.

ಬಳಕೆದಾರರು ಕೋವಿಡ್ ಪರೀಕ್ಷೆಯ ಫಲಿತಾಂಶದ ಸ್ಟ್ರಿಪ್ ಫೋಟೋವನ್ನು ತೆಗೆದು ಆ್ಯಪ್ ಬಳಸಿರುವ ಮೊಬೈಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಈ ಮಾಹಿತಿ ಐಸಿಎಂಆರ್ ಕೋವಿಡ್ 19 ಟೆಸ್ಟಿಂಗ್ ಪೋರ್ಟಲ್‌ನ ಸುರಕ್ಷಿರ ಸರ್ವರ್‌ಗೆ ರವಾನೆಯಾಗುತ್ತದೆ. ಇಲ್ಲಿ ರೋಗಿಗಳ ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲ, ಎಲ್ಲ ವಿವರ ಸುರಕ್ಷಿತವಾಗಿರುತ್ತದೆ ಎಂದು ಐಸಿಎಂಆರ್ ಹೇಳಿದೆ.

ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಬಳಸಿ ಮನೆಯಲ್ಲೇ ಕೋವಿಡ್ 19 ಪರೀಕ್ಷೆ ಮಾಡಿಸಿಕೊಂಡು ಪಾಸಿಟಿವ್ ಫಲಿತಾಂಶ ಬಂದರೆ ಅವರನ್ನು ಕೋವಿಡ್ ಪಾಸಿಟಿವ್ ರೋಗಿಗಳೆಂದೇ ಪರಿಗಣಿಸಲಾಗುತ್ತದೆ, ಮತ್ತೊಮ್ಮೆ ಪ್ರತ್ಯೇಕ ಪರೀಕ್ಷೆ ಅಗತ್ಯವಿಲ್ಲ.

ಕೋವಿಡ್ 19 ಪಾಸಿಟಿವ್ ಫಲಿತಾಂಶ ಬಂದರೆ, ಅವರು ಐಸಿಎಂಆರ್ ಮತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಎಲ್ಲ ನಿಯಮ ಮತ್ತು ಹೋಮ್ ಐಸೋಲೇಶನ್ ಹಾಗೂ ಪೂರಕ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗಿದೆ.

ಕೋವಿಡ್ ತೀವ್ರ ಲಕ್ಷಣಗಳಿದ್ದೂ, ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಹೋಮ್ ಟೆಸ್ಟ್ ಕಿಟ್ ಮೂಲಕ ಪರಿಶೀಲಿಸಿದಾಗ ನೆಗೆಟಿವ್ ಫಲಿತಾಂಶ ಬಂದರೆ, ಅವರು ಶೀಘ್ರದಲ್ಲೇ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಐಸಿಎಂಆರ್ ಹೇಳಿದೆ. ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮೂಲಕ ಪರಿಶೀಲಿಸಿದಾಗ ಕೆಲವೊಮ್ಮೆ ವೈರಲ್ ಲೋಡ್ ಕಡಿಮೆ ಇದ್ದರೆ ನೆಗೆಟಿವ್ ಫಲಿತಾಂಶ ಬರುವ ಸಾಧ್ಯತೆಯಿರುತ್ತದೆ.

ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಹೋಮ್ ಕಿಟ್‌ನಲ್ಲಿ ಸೂಚಿಸಲಾಗುವ ಹಂತಗಳನ್ನು ಪಾಲಿಸುವುದು ಕಡ್ಡಾಯ. ಜತೆಗೆ ಬಳಕೆ ಮಾಡಿದ ಬಳಿಕ ಟೆಸ್ಟ್ ಕಿಟ್, ಇತರ ವಸ್ತುಗಳನ್ನು ಸುರಕ್ಷಿತವಾಗಿ ವಿಸರ್ಜಿಸಬೇಕು.

ಮೈಲ್ಯಾಬ್ ಕಂಪನಿ ಕಳೆದ ವರ್ಷ ದೇಶದಲ್ಲಿ ಮೊದಲ ಬಾರಿಗೆ ಆರ್‌ಟಿ-ಪಿಸಿಆರ್ ಟೆಸ್ಟ್ ಅನ್ನು ಪರಿಚಯಿಸಿತ್ತು. ಈ ಬಾರಿ ಹೋಮ್ ಕಿಟ್ ಪರಿಚಯಿಸಿದ್ದು, ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಮನೆಯಿಂದ ಹೊರಗಡೆ ಹೋಗದೆಯೇ, ವೈದ್ಯಕೀಯ ಸಿಬ್ಬಂದಿ ನೆರವಿಲ್ಲದೆಯೇ ಸ್ವತಃ ಪರೀಕ್ಷೆ ಮಾಡಿಕೊಂಡು ಫಲಿತಾಂಶ ಪಡೆಯಬಹುದು.

ಮಾಹಿತಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್

ರ್‍ಯಾಪಿಡ್ ಆ್ಯಂಟಿಜನ್ ಟೆಸ್ಟ್ ಕೋವಿಡ್ 19 ಹೋಮ್ ಟೆಸ್ಟಿಂಗ್ ಕಿಟ್ ಸೂಚನೆ

ಇನ್ನು ನೀವು ಕೋವಿಡ್-19 ಪರೀಕ್ಷೆ ಮನೆಯಲ್ಲೇ ಮಾಡಿಕೊಳ್ಳಬಹುದು..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.