ಸಂಸತ್ತಿಗೆ ಅತಿಹೆಚ್ಚು ಸಂಸದರನ್ನು ಕಳುಹಿಸುವ ರಾಜ್ಯಗಳಲ್ಲಿ ಬಿಹಾರವೂ ಒಂದು. ಬಿಹಾರವು ಲೋಕಸಭೆಗೆ 40 ಸಂಸದರನ್ನು ಕಳುಹಿಸುತ್ತದೆ. ಹೀಗಾಗಿ ರಾಜ್ಯದ ರಾಜಕಾರಣವು ರಾಷ್ಟ್ರರಾಜಕಾರಣದಲ್ಲಿ ಮಹತ್ವ ಪಡೆದೇ ಪಡೆಯುತ್ತದೆ. ಪ್ರಾದೇಶಿಕ ಪಕ್ಷಗಳೇ ಪ್ರಧಾನವಾಗಿರುವ ರಾಜ್ಯದಲ್ಲಿ, ರಾಷ್ಟ್ರೀಯ ಪಕ್ಷಗಳು ಮೈತ್ರಿ ಮೊರೆ ಹೋಗುವುದು ಅನಿವಾರ್ಯ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿಯಲ್ಲಿವೆ. ಕಾಂಗ್ರೆಸ್ ತನ್ನ ಹಳೆಯ ಮೈತ್ರಿಯನ್ನೇ ಮುಂದುವರಿಸಿದ್ದರೆ, ಬಿಜೆಪಿ ಮೈತ್ರಿಯನ್ನು ಬದಲಿಸಿದೆ. ಇದರ ಜತೆಯಲ್ಲೇ ಮೈತ್ರಿ ಲೆಕ್ಕಾಚಾರ ಮತ್ತು ರಾಜಕೀಯ ಸಂಯೋಜನೆ ಈ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಹೊಸ ರೂಪ ಪಡೆದುಕೊಳ್ಳುತ್ತಿದೆ