ಚುನಾವಣೆ ಬಂತೆಂದರೆ, ಪಕ್ಷಗಳ ಕಾರ್ಯಾಲಯಗಳು ಗಿಜಿ ಗಿಜಿ ಎನ್ನುತ್ತವೆ. ಚುನಾವಣೆ ಮುಗಿಯುವವರೆಗೂ ಇದೇ ಸ್ಥಿತಿ. ಚುನಾವಣೆಯಲ್ಲಿ ಪಕ್ಷದ ಕಾರ್ಯತಂತ್ರ ಏನಾಗಿರಬೇಕು, ಪ್ರಣಾಳಿಕೆ ಏನು, ಜನರು ಏನು ಬಯಸುತ್ತಿದ್ದಾರೆ... ಇವೇ ಮಾತುಕತೆಗಳು. ಆದರೆ, ಈಗ ಈ ಎಲ್ಲ ಚರ್ಚೆಗಳು ಈಗ ಒಂದು ಕೋಣೆಗೆ ಸೀಮಿತವಾಗಿವೆ. ಒಂದು ಲ್ಯಾಪ್‌ಟಾಪ್‌ಗೆ ಸೀಮಿತವಾಗಿವೆ. ಪಕ್ಷಗಳ ಚುನಾವಣಾ ಕಾರ್ಯತಂತ್ರ ರೂಪಿಸುವುದು ಪಕ್ಷಗಳ ನಾಯಕರಾಗಲಿ, ಕಾರ್ಯಕರ್ತರಾಗಲಿ ಅಲ್ಲ. ಬದಲಿಗೆ, ಚುನಾವಣಾ ಕಾರ್ಯತಂತ್ರ ರೂಪಿಸುವ ಸಂಸ್ಥೆಗಳು. ಇವುಗಳೇ ರಾಜಕೀಯ ಪಕ್ಷಗಳ ಗೆಲುವಿನ ಜೀವಾಳವಾಗಿವೆ. ಭಾರತದ ಚುನಾವಣೆ ರಾಜಕೀಯ ತಂತ್ರಗಾರಿಕೆಯನ್ನೇ ಈ ಸಂಸ್ಥೆಗಳು ಬದಲಾಯಿಸಿ ಬಿಟ್ಟಿವೆ...