2024 ಕಾಲಿರಿಸಿದೆ. ಈ ವರ್ಷವು ಹಲವು ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ ಎಂಬುದು ಈ ಹೊತ್ತಿನ ನಿರೀಕ್ಷೆ. ರಾಜಕಾರಣ, ಕಾನೂನು ಕಟ್ಟಳೆ, ಬಾಹ್ಯಾಕಾಶ ವಿಜ್ಞಾನ ಇವೆಲ್ಲವುಗಳಲ್ಲಿ ಹೊಸ ಬದಲಾವಣೆ ಮತ್ತು ಹೊಸ ಸಾಧನೆಗೆ ದೇಶ ಸಿದ್ಧವಾಗಿದೆ. ಇವುಗಳ ಜತೆಯಲ್ಲೇ ದೇಶದ ಜನಜೀವನವನ್ನು ನೇರವಾಗಿ ಪ್ರಭಾವಿಸುವ ಮೀಸಲಾತಿಯ ವಿಚಾರವು ಹೊಸ ಬದಲಾವಣೆಗೆ ತೆರೆದುಕೊಳ್ಳುವ ಸಾಧ್ಯತೆ ಇದೆ. ಈ ವರ್ಷ ಎದುರು ನೋಡಬೇಕಾದ ಕೆಲವು ಮಹತ್ವದ ವಿಷಯಗಳ ಮುನ್ನೋಟವನ್ನು ‘ಪ್ರಜಾವಾಣಿ’ ಇಲ್ಲಿ ಕಟ್ಟಿಕೊಟ್ಟಿದೆ.

ರಾಮಮಂದಿರ:

ಅಯೋಧ್ಯೆಯ ರಾಮಮಂದಿರವನ್ನು ಇದೇ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಧಾರ್ಮಿಕವಾಗಿ ಮತ್ತು 2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯವಾಗಿ ಇದು ಅತಿ ಹೆಚ್ಚು ಮಹತ್ವ ಪಡೆದ ವಿಚಾರವಾಗಿದೆ.

ಚುನಾವಣೆ:

ಮೇ ತಿಂಗಳ ಒಳಗೆ ಲೋಕಸಭೆಗೆ ಚುನಾವಣೆ ನಡೆದು, ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾಗಬೇಕಿದೆ. ಆನಂತರ ವರ್ಷದುದ್ದಕ್ಕೂ ಒಟ್ಟು ಆರು ರಾಜ್ಯ ಮತ್ತು ಜಮ್ಮು–ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆಯಬೇಕಿದೆ.

ಸಿಎಎ:

ನೆರೆಯ ದೇಶಗಳಲ್ಲಿ ಧರ್ಮದ ಕಾರಣಕ್ಕೆ ಕಿರುಕುಳ ಅನುಭವಿಸಿದ ಮುಸ್ಲಿಮೇತರ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಲೋಕಸಭಾ ಚುನಾವಣೆಗೂ ಮುನ್ನವೇ ಜಾರಿಗೆ ತರುವ ನಿರೀಕ್ಷೆ ಇದೆ

ಷೇರುಪೇಟೆ:

ನಿಫ್ಟಿ 25,000ದ ಗಡಿ ಮತ್ತು ಬಿಎಸ್ಇ ಸೆನ್ಸೆಕ್ಸ್ ಈ ವರ್ಷದಲ್ಲೇ 80,000 ಅಂಶಗಳ ಗಡಿ ದಾಟಲಿವೆ ಎನ್ನುತ್ತವೆ ಷೇರು ದಲ್ಲಾಳಿ ಕಂಪನಿಗಳು

ಇಸ್ರೊ:

ಎಕ್ಸ್–ರೇ ಮೂಲಗಳ ಕಪ್ಪುರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯುವ ಉದ್ದೇಶದ ‘ಎಕ್ಸ್–ರೇ ಪೋಲಾರಿಮೀಟರ್ ಉಪಗ್ರಹ’ (ಎಕ್ಸ್ಪೊಸ್ಯಾಟ್) ಉಡಾವಣೆಯ (ಜನವರಿ 1) ಮೂಲಕ ಹೊಸ ವರ್ಷವನ್ನು ಆರಂಭಿಸಲು ಈಗ ಇಸ್ರೊ ಸಜ್ಜಾಗಿದೆ

ಎಸ್ಸಿ,ಎಸ್ಟಿ ಉಪ ವರ್ಗೀಕರಣ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಉಪವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆಯೇ ಎಂಬುದನ್ನು ಪರಿಶೀಲಿಸುವ ಸಂಬಂಧದ ಅರ್ಜಿಗಳು ಸುಪ್ರೀಂ ಕೋರ್ಟ್ನ ಏಳು ಸದಸ್ಯರ ಸಂವಿಧಾನ ಪೀಠದ ಮುಂದೆ ಇದೆ. 2020ರ ಆಗಸ್ಟ್ನಲ್ಲಿಯೇ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು, ಈ ಅರ್ಜಿಗಳನ್ನು ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ವರ್ಗಾಯಿಸಿತ್ತು. ಇದೇ 17ಕ್ಕೆ ವಿಚಾರಣೆ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.