ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ| ಆಟ: ಸಾಮರಸ್ಯದ ಪಾಠ
ಆಳ–ಅಗಲ| ಆಟ: ಸಾಮರಸ್ಯದ ಪಾಠ
ಫಾಲೋ ಮಾಡಿ
Published 10 ಜೂನ್ 2024, 23:48 IST
Last Updated 10 ಜೂನ್ 2024, 23:48 IST
Comments
‘ಆಟಕ್ಕೆ ಸಮಯ, ವ್ಯವಸ್ಥೆ ಬೇಕು’
ಒಂದು ಕಟುಂಬವನ್ನೇ ತೆಗೆದುಕೊಳ್ಳುವುದಾದರೆ, ಆಟ ಎಂಬುದು ನಿಕೃಷ್ಟ ಎನ್ನುವ ಭಾವನೆ ಇದೆ. ಆದರೆ, ಸಣ್ಣ ಮಕ್ಕಳು ಆಡಿ ಆಡಿಯೇ ಕಲಿಯುವುದು. ಮನೆಯಲ್ಲಿಯೂ ಆಟಕ್ಕೆ ಸಮಯವಿಲ್ಲ, ಶಾಲೆಗಳಲ್ಲಿಯೂ ಆಟಕ್ಕೆ ಸಮಯವಿಲ್ಲ. ಕಲಿಕಾ ವಿಧಾನದಲ್ಲಿಯೂ ಆಟಕ್ಕೆ ಪ್ರಾಮುಖ್ಯ ಇಲ್ಲದೇ ಇರುವುದು ಸಮಸ್ಯೆ. ಇನ್ನು ಬಾಲ್ಯ ವಿವಾಹ ಮಾಡುತ್ತಾರೆ. ಆಗ ವಿವಾಹವಾದ ಸಣ್ಣ ವಯಸ್ಸಿನ ಮಕ್ಕಳಿಗೆ ಯಾಕೆ ಆಟಬೇಕು ಎಂದು ಕೇಳಲಾಗುತ್ತದೆ. ಇನ್ನು ಯುದ್ಧದ ಸಮಯದಲ್ಲಿ ನಿರಾಶ್ರಿತರ ಶಿಬಿರಗಳಲ್ಲಿ ಇರುವ ಮಕ್ಕಳ ಆಟದ ಬಗ್ಗೆ ಯಾರು ಯೋಚಿಸುತ್ತಾರೆ? ಅಂಗವಿಕಲ ಮಕ್ಕಳು ಇರುತ್ತಾರೆ ಅವರು ಎಲ್ಲಿ ಆಡಬೇಕು? ಇಂಥ ಮಕ್ಕಳಿಗಾಗಿ ನಮ್ಮ ಬಳಿ ಯಾವ ವ್ಯವಸ್ಥೆ ಇದೆ? ನಮಗೆ ತಿಳಿಯದೆಯೇ ಹಕ್ಕುಗಳನ್ನು ಕಸಿದುಕೊಳ್ಳುವುದು ಒಂದು. ಆಟವು ಯಾವುದೇ ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಭಾಗ ಎಂದು ಭಾವಿಸದೇ ಅವರ ಹಕ್ಕುಗಳನ್ನು ಕಸಿದು ಕೊಳ್ಳುವುದು ಇನ್ನೊಂದು. ಮಕ್ಕಳ ಕೈಯಲ್ಲಿ ಮೊಬೈಲ್‌ ಕೊಡಬೇಡಿ ಎನ್ನುತ್ತೇವೆ. ಆದರೆ, ಅವರು ಹೊರಗೆ ಎಲ್ಲಿಗೆ ಆಡಲು ಹೋಗಬೇಕು? ಅದಕ್ಕೇನು ವ್ಯವಸ್ಥೆ ಮಾಡಿದ್ದೇವೆ? ಇದಕ್ಕೆಲ್ಲಾ ಉತ್ತರ ಕಂಡುಕೊಳ್ಳಬೇಕಿದೆ
ಕವಿತಾರತ್ನ, ದಿ ಕನ್ಸರ್ನ್ಡ್‌ ಫಾರ್ ‌ವರ್ಕಿಂಗ್‌ ಚಿಲ್ಡ್ರನ್‌ ಸಂಸ್ಥೆಯ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT