ಮಹಾ ರಾಜಕೀಯ | ರೆಸಾರ್ಟ್ ರಾಜಕಾರಣ ಆರಂಭ, ಕಾಂಗ್ರೆಸಿಗರು ಭೋಪಾಲ್‌ಗೆ, ಶಿವಸೈನಿಕರು ಜೈಪುರಕ್ಕೆ
LIVE
ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿಯಾಗಿ, ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಶನಿವಾರ ಬೆಳಗ್ಗೆ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೂಡಿ ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದ ಶಿವಸೇನಾಗೆ ನಿರಾಸೆಯಾಗಿದೆ. ಇತ್ತ ಕಾಂಗ್ರೆಸ್ ಕೂಡ ಮೌನಕ್ಕೆ ಶರಣಾಗಿದೆ. ಇಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತ ಕ್ಷಣ ಕ್ಷಣದ ಅಪ್‌ಡೇಟ್ ಇಲ್ಲಿದೆ.
ಶಿವಸೇನಾ ಶಾಸಕರು ಹೋಟೆಲ್ ಲಲಿತ್‌ಗೆ, ಕಾಂಗ್ರೆಸ್ ಶಾಸಕರು ಮಧ್ಯಪ್ರದೇಶಕ್ಕೆ, ಎನ್‌ಸಿಪಿ ಬಂಡಾಯ ಶಾಸಕರು ದಿಲ್ಲಿಗೆ
11:1123 Nov 2019
ಮೋದಿ ಹೈ ತೋ ಮುಮ್‌ಕೀನ್ ಹೈ ಎಂದ ಫಡಣವೀಸ್: ಮೋದಿ, ಅಮಿತ್‌ಶಾ ಹಾಗೂ ಬೆಂಬಲಿಸಿದ ಶಾಸಕರಿಗೆ ಸಿಎಂ ಧನ್ಯವಾದ
10:5123 Nov 2019
ಬೆಂಬಲ ನೀಡಿದ ಎಲ್ಲ ಶಾಸಕರು, ಸ್ವತಂತ್ರರಿಗೆ ಧನ್ಯವಾದ. ನಮ್ಮ ಸರ್ಕಾರ ರೈತರು, ಜನಸಾಮಾನ್ಯರಿಗಾಗಿ ಕೆಲಸ ಮಾಡಲಿದೆ ಮತ್ತು 5 ವರ್ಷ ಭದ್ರವಾಗಿ ಆಳ್ವಿಕೆ ನಡೆಸಲಿದೆ ಎಂದ ದೇವೇಂದ್ರ ಫಡಣವೀಸ್
10:3323 Nov 2019
ರಾಮ ಮಂದಿರ ವಿರೋಧಿಸುವ ಕಾಂಗ್ರೆಸ್ ಜತೆ ಶಿವಸೇನಾದಿಂದ ಜನತೆಗೆ ವಿಶ್ವಾಸದ್ರೋಹ: ಬಿಜೆಪಿ ಕಿಡಿ
10:3123 Nov 2019
ಅಜಿತ್ ಪವಾರ್‌ಗೆ ಬೆದರಿಕೆಯೊಡ್ಡಿ ಬೆಂಬಲ ಪಡೆದ ಬಿಜೆಪಿ: ಸಂಜಯ್ ರಾವುತ್ ಆರೋಪ
10:2923 Nov 2019
ಹಾಜರಾತಿಗೆ ಪಡೆದ ಸಹಿಯನ್ನು ಬೆಂಬಲ ಪತ್ರಕ್ಕೆ ದುರುಪಯೋಗಪಡಿಸಿಕೊಂಡ ಬಿಜೆಪಿ: ಎನ್‌ಸಿಪಿ ಮುಖಂಡ
10:2523 Nov 2019
ಮಹಾರಾಷ್ಟ್ರ ರಾಜಕೀಯ: ಎನ್‌ಸಿಪಿ ಬಂಡಾಯ ಶಾಸಕರನ್ನು ದೆಹಲಿಗೆ ವಿಮಾನ ಮೂಲಕ ರವಾನಿಸಲು ಸಿದ್ಧತೆ