ಭಾರತದಲ್ಲಿ ಡೀಸೆಲ್ ಚಾಲಿತ ಸಣ್ಣ ಕಾರುಗಳ ಯುಗ ಮುಗಿಯಿತೇ ಎಂಬ ಪ್ರಶ್ನೆ ದೇಶದ ಆಟೊಮೊಬೈಲ್ ಆಸಕ್ತರ ಮುಂದಿದೆ. ಇಂತಹ ಕಾರುಗಳ ಕಾಲ ಮುಗಿಯಿತು ಎಂಬ ಉತ್ತರವೂ ಪ್ರಶ್ನೆಯ ಹಿಂದೆಯೇ ಬರುತ್ತದೆ. ದೇಶದಲ್ಲಿ ಸಣ್ಣ ಗಾತ್ರದ ಡೀಸೆಲ್ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಬಹುತೇಕ ಎಲ್ಲಾ ಕಂಪನಿಗಳು, ಅಂತಹ ಕಾರುಗಳ ತಯಾರಿಕೆ ಮತ್ತು ಮಾರಾಟವನ್ನು ನಿಲ್ಲಿಸಿವೆ.

ಡೀಸೆಲ್ ಕಾರುಗಳು ಉಗುಳುವ ಹೊಗೆಯಲ್ಲಿನ ಮಾಲಿನ್ಯಕ್ಕೆ ಕಡಿವಾಣ ಹಾಕುವ ಬಿಎಸ್–6 ಪರಿಮಾಣ ಜಾರಿಗೆ ಬಂದಿದ್ದು ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಭಾರತದ ಹೆಚ್ಚಿನ ಕಾರು ತಯಾರಕ ಕಂಪನಿಗಳೂ ಇದನ್ನು ಒಪ್ಪಿಕೊಳ್ಳುತ್ತವೆ.

ಭಾರತದಲ್ಲಿ ಸಣ್ಣ ಡೀಸೆಲ್ ಕಾರುಗಳ ಯುಗ 2000ನೇ ಇಸವಿಯ ಆಸುಪಾಸಿನಲ್ಲಿ ಆರಂಭ ಆಯಿತು ಎನ್ನಬಹುದು. ಟಾಟಾ ಮೋಟರ್ಸ್ನ ಇಂಡಿಕಾ 1.5 ಲೀಟರ್ ಡೀಸೆಲ್ ಕಾರು, ಆರಂಭದ ದಿನಗಳಲ್ಲಿ ವೈಯಕ್ತಿಕ ಬಳಕೆಯ ಖಾಸಗಿ ಕಾರಿನ ಸ್ಥಾನ ಪಡೆಯಿತು. ಹೆಚ್ಚು ಮೈಲೇಜ್ (ಇಂಧನ ದಕ್ಷತೆ), ನಿರ್ವಹಣೆಯ ವೆಚ್ಚ ಕಡಿಮೆ, ಇದನ್ನು ಟ್ಯಾಕ್ಸಿ ವಲಯದಲ್ಲೂ ಹೆಚ್ಚು ಜನಪ್ರಿಯಗೊಳಿಸಿತು.ಫಿಯಟ್ 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಈ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಡೀಸೆಲ್ ಅವತರಣಿಕೆಯಲ್ಲಿ ಈ ಎಂಜಿನ್ ಬಳಸಲಾಯಿತು. ಒಂದು ದಶಕಕ್ಕೂ ಹೆಚ್ಚು ಕಾಲ ಈ ಎಂಜಿನ್ ದೇಶದ ಸಣ್ಣ ಡೀಸೆಲ್ ಕಾರುಗಳ ಮಾರುಕಟ್ಟೆಯನ್ನು ಆಳಿತು.

ಇಂಡಿಕಾ, ಇಂಡಿಗೊ, ಇಂಡಿಕಾ ವಿಸ್ತಾ, ಸ್ವಿಫ್ಟ್ ಡಿಝೈರ್, ಇಟಿಯೋಸ್, ಕ್ಸೆಂಟ್ ಕಾರುಗಳು ಭಾರತದ ಟ್ಯಾಕ್ಸಿ ವಲಯವನ್ನು ಆಳಿದವು. ಪೆಟ್ರೋಲ್ ಕಾರುಗಳಿಗಿಂತ ಹೆಚ್ಚು ಮೈಲೇಜ್ ನೀಡುತ್ತವೆ ಮತ್ತು ನಿರ್ವಹಣೆ ಅಗ್ಗ ಎಂಬುದೇ ಈ ಡೀಸೆಲ್ ಕಾರುಗಳ ಜನಪ್ರಿಯತೆಗೆ ಕಾರಣವಾಯಿತು. ಈಗ ಬಿಎಸ್–6 ಅವತರಣಿಕೆಯ ಕಾರಣ ಇಂತಹ ಕಾರುಗಳ ಬೆಲೆಯಲ್ಲಿ ಭಾರಿ ಏರಿಕೆ ಆಗಬೇಕಿತ್ತು. ಆದರೆ, ಕಂಪನಿಗಳು ಈ ಕಾರುಗಳ ತಯಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿಯೇ ಬಿಟ್ಟವು. ಇಲ್ಲವೇ ಡೀಸೆಲ್ ಅವತರಣಿಕೆಯನ್ನು ಸ್ಥಗಿತಗೊಳಿಸಿದವು.

ಈ ಕಾರುಗಳಬಿಎಸ್–6 ಅವತರಣಿಕೆ ಅಭಿವೃದ್ಧಿಪಡಿಸುವುದು ಹೆಚ್ಚು ಲಾಭಕರವಲ್ಲ ಎಂದು ಟಾಟಾ ಮೋಟರ್ಸ್ ಹೇಳಿತ್ತು. ಹೀಗಾಗಿ ಕಂಪನಿಯು ತನ್ನ ಟಿಯಾಗೋ ಮತ್ತು ಟಿಗಾರ್ ಸಣ್ಣ ಕಾರುಗಳ ಡೀಸೆಲ್ ಅವತರಣಿಕೆಯ ತಯಾರಿಯನ್ನು ನಿಲ್ಲಿಸಿತು. ಮಹೀಂದ್ರಾ ಸಹ ತನ್ನ ಸಣ್ಣ ಕಾರು ಕೆಯುವಿಯಲ್ಲಿ ಇದ್ದ 1.2 ಲೀಟರ್ ಡೀಸೆಲ್ ಅವತರಣಿಕೆಯನ್ನು ಸ್ಥಗಿತಗೊಳಿಸಿತು. ಆದರೆ ಈ ಎರಡೂ ಕಂಪನಿಗಳು ದೊಡ್ಡ ಡೀಸೆಲ್ ಎಂಜಿನ್ ಇರುವ ಕಾರುಗಳ ತಯಾರಿಕೆ ಮುಂದುವರಿಸಿವೆ.

ಮಾರುತಿ ಸುಜುಕಿ ಕಂಪನಿಯು ಭಿನ್ನ ಹಾದಿಯಲ್ಲಿ ಸಾಗಿತು. ಮಾರುತಿ ಕಂಪನಿಯು ತನ್ನ ಎಲ್ಲಾ ಡೀಸೆಲ್ ಕಾರುಗಳಿಗಾಗಿ ಫಿಯೆಟ್ನ 1.3 ಲೀಟರ್ ಮಲ್ಟಿಜೆಟ್ ಎಂಜಿನ್ ಅನ್ನು ಅವಲಂಭಿಸಿತ್ತು. ಈ ಎಂಜಿನ್ ಅನ್ನು ಬಿಎಸ್–6ಗೆ ಅಪ್ಗ್ರೇಡ್ ಮಾಡುವುದನ್ನು ಕೈಬಿಟ್ಟ ಫಿಯೆಟ್, ಈ ಎಂಜಿನ್ನ ತಯಾರಿಕೆಯನ್ನೇ ನಿಲ್ಲಿಸಿತು. ಈ ಎಂಜಿನ್ಗಳ ಪೂರೈಕೆ ಇಲ್ಲದ ಕಾರಣ ಮತ್ತು ತನ್ನ ಬಳಿ ಬಿಎಸ್–6 ಪರಿಮಾಣದ ಡೀಸೆಲ್ ಎಂಜಿನ್ ಇಲ್ಲದ ಕಾರಣ ಮಾರುತಿ ಎಲ್ಲಾ ಡೀಸೆಲ್ ಕಾರುಗಳ ತಯಾರಿಕೆಯನ್ನು ನಿಲ್ಲಿಸಿದೆ.

ಭಾರತದಲ್ಲಿ ಸಣ್ಣ ಡೀಸೆಲ್ ಕಾರುಗಳ ಮಾರುಕಟ್ಟೆಯಲ್ಲಿ ದೊಡ್ಡ ಪಾಲು ಹೊಂದಿದ್ದ ಟೊಯೊಟಾ ಸಹ ತನ್ನ ಜನಪ್ರಿಯ ಟ್ಯಾಕ್ಸಿ ಸೆಗ್ಮೆಂಟ್ ಸೆಡಾನ್ ಇಟಿಯೋಸ್ನ ತಯಾರಿಕೆಯನ್ನು ನಿಲ್ಲಿಸಿತು. ಈ ಕಾರಿನಲ್ಲಿದ್ದ 1.4ಡಿ ಡೀಸೆಲ್ ಎಂಜಿನ್ ಅನ್ನು ಬಿಎಸ್–6ಗೆ ಅಪ್ಗ್ರೇಡ್ ಮಾಡುವುದು ಹೆಚ್ಚು ಲಾಭಕರವಲ್ಲ ಎಂಬುದು ಕಂಪನಿಯ ಈ ನಿರ್ಧಾರಕ್ಕೆ ಕಾರಣವಾಗಿತ್ತು.

ಫೋಕ್ಸ್ವ್ಯಾಗನ್ ಸಮೂಹ ಕಂಪನಿ ಸಹ ತನ್ನ ಜನಪ್ರಿಯ 1.5 ಲೀಟರ್ ಟಿಡಿಐ ಡೀಸೆಲ್ ಎಂಜಿನ್ ಇರುವ ಹ್ಯಾಚ್ಬ್ಯಾಕ್ ಮತ್ತು ಸೆಡಾನ್ಗಳ ತಯಾರಿಕೆ ನಿಲ್ಲಿಸಿದೆ.

ಈ ಎಲ್ಲಾ ಕಂಪನಿಗಳ ಈ ನಿರ್ಧಾರವು ಭಾರತದ ಸಣ್ಣ ಡೀಸೆಲ್ ಕಾರು ಮಾರುಕಟ್ಟೆಯಲ್ಲಿ ದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ. ಈ ವರ್ಗದ ಬಹುತೇಕ ಕಾರುಗಳು ಜನಪ್ರಿಯತೆ ಪಡೆದಿದ್ದದ್ದು ಟ್ಯಾಕ್ಸಿ ವಲಯದಲ್ಲಿ. ಆದರೆ, ಈಗ ಟ್ಯಾಕ್ಸಿ ವಲಯದಲ್ಲಿ ಹೂಡಿಕೆ ಮಾಡಲು ಸಣ್ಣ ಡೀಸೆಲ್ ಕಾರುಗಳೇ ಲಭ್ಯವಿಲ್ಲ. ಡೀಸೆಲ್ ಬೆಲೆಯಲ್ಲಿ ಆದ ಬಾರಿ ಏರಿಕೆ ಸಹ ವೈಯಕ್ತಿಕ ಬಳಕೆಯ ಖಾಸಗಿ ಡೀಸೆಲ್ ವಾಹನಗಳ ಬೇಡಿಕೆಯನ್ನು ಕುಂದಿಸಿದೆ.

ಈ ಎಲ್ಲಾ ಅಂಶಗಳು ಭಾರತದ ಸಣ್ಣ ಡೀಸೆಲ್ ಕಾರುಗಳ ಮಾರುಕಟ್ಟೆಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಿವೆ.

ಬಿಎಸ್–6 ಕಾರಣ...

ಬಿಎಸ್–4ನಿಂದ ಬಿಎಸ್–6ಗೆ ನೇರವಾಗಿ ಮೇಲ್ದರ್ಜೆಗೆ ಏರಬೇಕಾದ ಅನಿವಾರ್ಯ ಬಂದೊದಗಿದ್ದೇ ಸಣ್ಣ ಡೀಸೆಲ್ ಕಾರುಗಳ ಅಂತ್ಯಕ್ಕೆ ಕಾರಣ ಎಂದು ಕಾರು ತಯಾರಕ ಕಂಪನಿಗಳೇ ಒಪ್ಪಿಕೊಂಡಿವೆ.

ಬಿಎಸ್–4ನಿಂದ ಬಿಎಸ್–6ಗೆ ಡೀಸೆಲ್ ಎಂಜಿನ್ ಅನ್ನು ಅಪ್ಗ್ರೇಡ್ ಮಾಡಿದರೆ, ಸಣ್ಣ ಡೀಸೆಲ್ ಕಾರುಗಳ ಬೆಲೆಯಲ್ಲಿ ₹ 1.2 ಲಕ್ಷದಿಂದ ₹ 1.5 ಲಕ್ಷದವರೆಗೆ ಏರಿಕೆಯಾಗುತ್ತದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿತ್ತು. ದುಬಾರಿ ಬೆಲೆಯಲ್ಲಿ ಸಣ್ಣ ಕಾರುಗಳ ಮಾರಾಟ ಸಾಧ್ಯವಿಲ್ಲದ ಕಾರಣ, ಎಲ್ಲಾ ಕಾರುಗಳ ಡೀಸೆಲ್ ಅವತರಣಿಕೆಯನ್ನೇ ನಿಲ್ಲಿಸುತ್ತೇವೆ ಎಂದು ಕಂಪನಿ ಹೇಳಿತ್ತು.

ಬಿಎಸ್–6 ಮಾನದಂಡವನ್ನು ಮುಟ್ಟಬೇಕಾದರೆ ಡೀಸೆಲ್ ಎಂಜಿನ್ನ ಎಕ್ಸಾಸ್ಟ್ ವ್ಯವಸ್ಥೆಯಲ್ಲಿ (ಹೊಗೆ ಉಗುಳುವ ವ್ಯವಸ್ಥೆ) ಭಾರಿ ಬದಲಾವಣೆ ಮಾಡಬೇಕಿತ್ತು. ಡೀಸೆಲ್ ಪಾರ್ಟಿಕಲ್ ಫಿಲ್ಟರ್ (ಡಿಪಿಎಫ್), ಹೊಗೆಯಲ್ಲಿನ ಸಾರಜನಕದ ಆಕ್ಸೈಡ್ ವಿಭಜನಾ ವ್ಯವಸ್ಥೆಯನ್ನು ಅಳವಡಿಸಬೇಕಿತ್ತು. ಇದರಲ್ಲಿ ಡಿಪಿಎಫ್ ಅತ್ಯಂತ ದುಬಾರಿ ಮೊತ್ತದ ಉಪಕರಣವಾಗಿದೆ. ಇದರ ನಿರ್ವಹಣೆಯ ವೆಚ್ಚವೂ ಹೆಚ್ಚು.

ಪ್ರತಿ ಸಣ್ಣ ಡೀಸೆಲ್ ಎಂಜಿನ್ಗಾಗಿ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕಂಪನಿಗಳು ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಬೇಕಿತ್ತು. ಇದು ಈ ಕಾರುಗಳ ಬೆಲೆಯಲ್ಲಿ ಭಾರಿ ಏರಿಕೆಗೆ ಕಾರಣವಾಗುತ್ತಿತ್ತು. ಬೆಲೆ ಏರಿಕೆ ಮತ್ತು ನಿರ್ವಹಣೆ ವೆಚ್ಚದ ಏರಿಕೆಯ ಕಾರಣ ಈ ಕಾರುಗಳ ಮಾರಾಟ ನಿರೀಕ್ಷಿತ ಮಟ್ಟದಲ್ಲಿ ಆಗುವುದಿಲ್ಲ ಎಂದು ಕಂಪನಿಗಳು ಅಂದಾಜಿಸಿದ್ದವು. ಹೀಗಾಗಿ ಸಣ್ಣ ಡೀಸೆಲ್ ಕಾರುಗಳ ತಯಾರಿಕೆಯನ್ನೇ ಸ್ಥಗಿತಗೊಳಿಸಿದವು.

ಡೀಸೆಲ್ ಬೆಲೆ ಏರಿಕೆಯ ಹೊಡೆತ

ಭಾರತದಲ್ಲಿ ಸಣ್ಣ ಡೀಸೆಲ್ ಕಾರುಗಳ ಯುಗ ಆರಂಭವಾದ ಸಂದರ್ಭದಲ್ಲಿ 1 ಲೀಟರ್ ಡೀಸೆಲ್ ಬೆಲೆಯು, 1 ಲೀಟರ್ ಪೆಟ್ರೋಲ್ಗಿಂತ ಸುಮಾರು ₹ 30ರಷ್ಟು ಕಡಿಮೆ ಇತ್ತು. ಅಲ್ಲದೆ, ಡೀಸೆಲ್ ಕಾರುಗಳ ಇಂಧನ ದಕ್ಷತೆ (ಮೈಲೇಜ್) ಪೆಟ್ರೋಲ್ ಕಾರುಗಳಿಗಿಂತ ಶೇ 40ರಷ್ಟು ಹೆಚ್ಚು ಇತ್ತು. ಇದು ಆ ಕಾರುಗಳ ಜನಪ್ರಿಯತೆಗೆ ಕಾರಣವಾಗಿತ್ತು.

ನಂತರದ ವರ್ಷಗಳಲ್ಲಿ ಪೆಟ್ರೋಲ್ ಕಾರುಗಳ ಎಂಜಿನ್ ತಂತ್ರಜ್ಞಾನದಲ್ಲೂ ಬೆಳವಣಿಗೆ ಆದ ಕಾರಣ ಅವುಗಳ ಇಂಧನ ಕ್ಷಮತೆ ಏರಿಕೆಯಾಯಿತು. ಅಲ್ಲದೆ ಡೀಸೆಲ್ ಮತ್ತು ಪೆಟ್ರೋಲ್ನ ಬೆಲೆಯ ನಡುವಣ ಅಂತರ ಕಡಿಮೆಯಾಯಿತು. ಇದು ಸಣ್ಣ ಡೀಸೆಲ್ ಕಾರುಗಳ ಬೇಡಿಕೆ ಕುಸಿಯಲು ಕಾರಣವಾಯಿತು. ಈಗ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ನಡುವೆ ಅಂತರವಿಲ್ಲ. ಕೆಲೆವೆಡೆ ಪೆಟ್ರೋಲ್, ಡೀಸೆಲ್ಗಿಂತಲೂ ದುಬಾರಿ ಆಗಿದೆ. ಇದು ಡೀಸೆಲ್ ಕಾರುಗಳಿಗೆ ಬೇಡಿಕೆ ಕುಸಿತವನ್ನು ಮತ್ತಷ್ಟು ಉತ್ತೇಜಿಸಿತು.

ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುತ್ತವೆ ಎಂದು ಎನ್ಜಿಟಿಯು ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ಕಾರುಗಳ ಬಳಕೆಯನ್ನು ನಿಷೇಧಿಸಿತು. ದೇಶದ ಬೇರೆ ನಗರಗಳಲ್ಲೂ ಈ ನಿಷೇಧ ಜಾರಿಯಾಗಬಹುದು ಎಂಬ ಆತಂಕವು, ಡೀಸೆಲ್ ಕಾರುಗಳ ಖರೀದಿಯಿಂದ ಜನರು ಹಿಂದೇಟು ಹಾಕಲು ಕಾರಣವಾಯಿತು. ಈ ಅನಿಶ್ಚಿತತೆ ಸಹ ಸಣ್ಣ ಡೀಸೆಲ್ ಕಾರುಗಳ ಬೇಡಿಕೆ ಮತ್ತು ಮಾರುಕಟ್ಟೆ ಕುಸಿಯಲು ಕಾರಣವಾಯಿತು.

ಸುದ್ದಿಯಾಗಿದ್ದ ‘ಡೀಸೆಲ್ಗೇಟ್’ ಹಗರಣ:

2015ರಲ್ಲಿ ಬಯಲಿಗೆ ಬಂದಿದ್ದ ಫೋಕ್ಸ್ವ್ಯಾಗನ್ ಕಾರು ಕಂಪನಿಯ ಹಗರಣ ‘ಡೀಸೆಲ್ಗೇಟ್’ ಎಂದೇ ಕುಖ್ಯಾತಿ ಪಡೆದಿತ್ತು. ಮಾಲಿನ್ಯ ಹೊರಸೂಸುವಿಕೆ ಮಾನದಂಡಗಳನ್ನು ಪಾಲಿಸಲು ಹೆಣಗಾಡಿದ್ದ ಜರ್ಮನಿಯ ಕಾರು ಉತ್ಪಾದಕ ಕಂಪನಿಯು ಇದಕ್ಕಾಗಿ ಅಡ್ಡದಾರಿ ಹಿಡಿದಿತ್ತು. ಫೋಕ್ಸ್ವ್ಯಾಗನ್ ಕಾರುಗಳು ಹೆಚ್ಚು ಮಾಲಿನ್ಯಕಾರಕ ಕಣಗಳನ್ನು ಹೊರಸೂಸುತ್ತಿದ್ದರೂ, ಅದನ್ನು ಮುಚ್ಚಿಟ್ಟು ಸಾಫ್ಟ್ವೇರ್ನಲ್ಲಿ ಸರಿ ಇದೆ ಎಂಬಂತೆ ಬಿಂಬಿಸಿ, ಕೊನೆಗೆ ಸಿಕ್ಕಿಹಾಕಿಕೊಂಡಿತ್ತು. ಕಠಿಣ ಮಾಲಿನ್ಯ ನಿಯಂತ್ರಣ ಶಿಫಾರಸುಗಳನ್ನು ಪಾಲಿಸಲಾಗದ ಬಹುತೇಕ ಕಂಪನಿಗಳು ಇದೇ ದಾರಿ ಅನುಸರಿಸಿದ್ದವು ಎಂಬ ಸಂಶಯ ಇದೆ.

ಡೀಸೆಲ್ ‘ಎಸ್ಯುವಿ’ಗಳಿಗೆ ಇದೆ ಬೇಡಿಕೆ:

ಭಾರತದಲ್ಲಿ ಡೀಸೆಲ್ ಎಂಜಿನ್ನ ಸಣ್ಣಕಾರುಗಳಿಗೆ ಬೇಡಿಕೆ ಅಷ್ಟಾಗಿ ಇಲ್ಲದಿದ್ದರೂ, ‘ಎಸ್ಯುವಿ’ ಕೊಳ್ಳುವ ಶೇ 70ರಷ್ಟು ಗ್ರಾಹಕರು ಡೀಸೆಲ್ ಎಂಜಿನ್ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಗಮನಾರ್ಹ. ಇತ್ತೀಚಿನ ದಿನಗಳಲ್ಲಿ ಎಸ್ಯುವಿ ಅವತರಣಿಕೆಗಳಿಗೆ ಭಾರಿ ಬೇಡಿಕೆಯಿದೆ. ಡೀಸೆಲ್ ಎಂಜಿನ್ನ ಗಟ್ಟಿತನ, ಸಾಮರ್ಥ್ಯವು ಎಸ್ಯುವಿಗಳ ವಿನ್ಯಾಸಕ್ಕೆ ಸರಿಯಾಗಿ ಹೊಂದುತ್ತದೆ. ಪೆಟ್ರೋಲ್ ಎಂಜಿನ ಚಾಲಿತ ಎಸ್ಯುವಿಗಳನ್ನು ಇಷ್ಟಪಡುವವರ ಪ್ರಮಾಣ ಕಡಿಮೆ ಎಂದೇ ಹೇಳಬಹುದು.

ಕಾರುಗಳನ್ನು ಹೆಚ್ಚು ಬಳಕೆ ಮಾಡುವವರು ಮತ್ತು ಹೆಚ್ಚಿನ ಟಾರ್ಕ್ ಉತ್ಪಾದನೆ ಅಪೇಕ್ಷಿಸುವವರು ಪೆಟ್ರೋಲ್ಗಿಂತ ಡೀಸೆಲ್ ಎಂಜಿನ್ ಚಾಲಿತ ಕಾರುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಓಡಿಸದೇ ನಿಲ್ಲಿಸಿದ್ದರೆ ನಷ್ಟ

ಪೆಟ್ರೋಲ್ ಕಾರುಗಳಿಂತ ಅದೇ ಮಾದರಿಯ ಡೀಸೆಲ್ ಕಾರುಗಳ ಬೆಲೆ ₹ 1.5 ಲಕ್ಷದಿಂದ ₹ 2 ಲಕ್ಷದಷ್ಟು ಹೆಚ್ಚು. ಅಥವಾ ಅದಕ್ಕಿಂತಲೂ ಹೆಚ್ಚು. ಈಗ ಬಿಎಸ್–6 ಪರಿಮಾಣದ ಡೀಸೆಲ್ ಕಾರುಗಳು ಬಂದಿರುವುದರಿಂದ ಬೆಲೆಯ ಈ ಅಂತರ ಮತ್ತಷ್ಟು ದೊಡ್ಡದಾಗಿದೆ. ಹೆಚ್ಚು ಮೈಲೇಜ್ ನೀಡುತ್ತದೆ ಎಂಬ ಒಂದೇ ಕಾರಣಕ್ಕೆ ಡೀಸೆಲ್ ಕಾರು ಖರೀದಿಸುವುದು ಜೇಬಿಗೆ ಹೊರೆಯೇ ಸರಿ.

ಡೀಸೆಲ್ ಕಾರುಗಳ ಮೇಲೆ ಹೆಚ್ಚುವರಿಯಾಗಿ ಹೂಡಿಕೆ ಮಾಡಿದ ಸುಮಾರು ₹ 2 ಲಕ್ಷದಷ್ಟು ಹಣದ ಲಾಭ ಪಡೆಯಬೇಕೆಂದರೆ, ಆ ಕಾರನ್ನು ಹೆಚ್ಚು–ಹೆಚ್ಚು ಓಡಿಸಬೇಕು. ಡೀಸೆಲ್ ಕಾರುಗಳನ್ನು ಖರೀದಿಸಿ, ವಾರಕ್ಕೆ–ಎರಡು ವಾರಕ್ಕೆ ಒಮ್ಮೆ ಓಡಿಸಿದರೆ ಖಂಡಿತಾ ಅದು ಜೇಬಿಗೆ ಹೊರೆಯಾಗುತ್ತದೆ.

ಬದಲಿಗೆ ಡೀಸೆಲ್ ಕಾರನ್ನು ದಿನಕ್ಕೆ 100 ಕಿ.ಮೀ.ನಷ್ಟು ಓಡಿಸಿದರೆ ಮಾತ್ರ ಅದರಿಂದ ಲಾಭವಾಗುತ್ತದೆ. ಡೀಸೆಲ್ ಬೆಲೆ 60ರ ಆಸುಪಾಸಿನಲ್ಲಿ ಇದ್ದಾಗ, ಪ್ರತಿದಿನ 60 ಕಿ.ಮೀ ಓಡಿಸಿದರೂ, ಹೆಚ್ಚುವರಿ ಹೂಡಿಕೆಯನ್ನು ಐದು ವರ್ಷದಲ್ಲಿ ಹಿಂಪಡೆಯಬಹುದಿತ್ತು. ಆದರೆ ಈಗ ಪ್ರತಿದಿನ 100 ಕಿ.ಮೀ. ಓಡಿಸಬೇಕಿದೆ. ಅಂದರೆ, ಒಂದು ವರ್ಷದಲ್ಲಿ 36,000 ಕಿ.ಮೀಗೂ ಹೆಚ್ಚು ಓಡಿಸಬೇಕಾಗುತ್ತದೆ. ಇಷ್ಟು ದೂರ ಓಡಿಸುವಂತಿದ್ದರೆ ಮಾತ್ರ ಡೀಸೆಲ್ ಕಾರು ಖರೀದಿ ಲಾಭದಾಯಕ.

ಸಣ್ಣ ಹ್ಯಾಚ್ಬ್ಯಾಕ್ ಮಾರುಕಟ್ಟೆಯಲ್ಲಿ ಡೀಸೆಲ್ ಕಾರುಗಳ ಪಾಲು ಶೇ5ರಷ್ಟು ಮಾತ್ರ. ಸೆಡಾನ್ ಮತ್ತು ಸಣ್ಣ ಎಸ್ಯುವಿ ಮಾರುಕಟ್ಟೆಯಲ್ಲೂ ಡೀಸೆಲ್ ಅವತರಣಿಕೆಗಳ ಬೇಡಿಕೆ ಕುಸಿದಿದೆ. ಇಂತಹ ಸ್ಥಿತಿಯಲ್ಲಿ ಸಣ್ಣ ಕಾರುಗಳಿಗಾಗಿ ಬಿಎಸ್6 ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುವುದರಲ್ಲಿ ಯಾವುದೇ ಲಾಭವಿಲ್ಲ. ದೊಡ್ಡ ಕಾರುಗಳಲ್ಲಿ ಡೀಸೆಲ್ ಅವತರಣಿಕೆಗೆ ಬೇಡಿಕೆ ಬಂದರಷ್ಟೇ, ದೊಡ್ಡ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುವ ಬಗ್ಗೆ ಯೋಚಿಸುತ್ತೇವೆ

ಶಶಾಂಕ್ ಶ್ರೀವಾಸ್ತವ, ಮಾರುತಿ ಸುಜುಕಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಕಾರ್ಯಕಾರಿ ನಿರ್ದೇಶಕ

ತೆರೆಗೆ ಸರಿದ ಸಣ್ಣ ಡೀಸೆಲ್ ಕಾರುಗಳು

ಮಾರುತಿ ಸುಜುಕಿ

ಸ್ವಿಫ್ಟ್ 1.3 ಡಿಡಿಐಎಸ್

ಬಲೆನೊ 1.3 ಡಿಡಿಐಎಸ್

ಸಿಯಾಸ್ 1.3 ಡಿಡಿಐಎಸ್

ಸಿಯಾಸ್ 1.5 ಡಿಡಿಐಎಸ್

ವಿಟಾರಾ ಬ್ರೆಜಾ 1.3 ಡಿಡಿಐಎಸ್

ಎಸ್–ಕ್ರಾಸ್ 1.3 ಡಿಡಿಐಎಸ್

ಟಾಟಾ ಮೋಟರ್ಸ್

ಟಿಯಾಗೊ ಡೀಸೆಲ್ 1.05 ರೆವೋಟಾರ್ಕ್

ಟಿಗಾರ್ ಡೀಸೆಲ್ 1.05 ರೆವೋಟಾರ್ಕ್

ಟೊಯೊಟಾ

ಎಟಿಯೋಸ್ 1.4ಡಿ ಡೀಸೆಲ್

ಎಟಿಯೋಸ್ ಲಿವಾ 1.4ಡಿ ಡೀಸೆಲ್

ಮಹೀಂದ್ರಾ ಆ್ಯಂಡ್ ಮಹೀಂದ್ರಾ

ಕೆಯುವಿ 1ಒಒ 1.2 ಲೀಟರ್ ಎಂಫಾಲ್ಕನ್

ಲೊಗೊನ್ 1.5 ಲೀಟರ್ ಡೀಸೆಲ್

ರೆನಾಲ್ಟ್/ನಿಸಾನ್

ಪಲ್ಸ್ 1.5 ಡಿಸಿಐ/ಮಿಕ್ರಾ 1.5 ಡಿಸಿಐ

ಫ್ಲುಯೆನ್ಸ್ 1.5 ಡಿಸಿಐ/ಸನ್ನಿ 1.5 ಡಿಸಿಐ

ಡಸ್ಟರ್ 1.5 ಡಿಸಿಐ/ಟೆರ್ರಾನೊ 1.5 ಡಿಸಿಐ

ಫೋಕ್ಸ್ ವ್ಯಾಗನ್/ಸ್ಕೋಡಾ

ಪೊಲೊ 1.5 ಟಿಡಿಐ

ವೆಂಟೊ 1.5 ಟಿಡಿಐ

ರ್ಯಾಪಿಡ್ 1.5 ಟಿಡಿಐ

ಫಿಯೆಟ್

ಪುಂಟೊ 1.3 ಡಿಡಿಐಎಸ್

ಲೀನಿಯ 1.3 ಡಿಡಿಐಎಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.