ಸಂಜೆ ಹಕ್ಕಿಗಳೆಲ್ಲಾ ಗೂಡು ಸೇರುವ ತವಕದಲ್ಲಿ ಚೀವ್ಗುಟ್ಟುತ್ತಾ ಹಾರುತ್ತಿದ್ದವು. ತಂಪಾಗಿ ಬೀಸುವ ಗಾಳಿ ಮನಸ್ಸಿಗೆ ಕಚಗುಳಿ ಇಡುವಂತಿತ್ತು. ಈ ಸುಂದರ ಸಂಜೆಯ ಸೊಬಗನ್ನು ಆಸ್ವಾದಿಸುತ್ತಾ ಜಯನಗರದ ನಾಲ್ಕನೇ ಬ್ಲಾಕಿನ ಫುಟ್ಪಾತ್ನಲ್ಲಿಸ್ನೇಹಿತೆಯೊಂದಿಗೆ ಹರಟುತ್ತಾ ಸಾಗುತ್ತಿರುವಾಗ ಥಟ್ಟನೆ ಕಣ್ಣು ಒಂದೆಡೆ ನೆಟ್ಟಿತು... ಅದು ಕೂಲ್ ಜಾಯಿಂಟ್.

ಅಲ್ಲಿ ಪುಟ್ಟ ಮಗುವೊಂದು ಬಾರ್ಬಿ ಡಾಲ್ ಆಕಾರದ ಗುಲಾಬಿ ಬಣ್ಣದ ಐಸ್ಕ್ರೀಂ ಅನ್ನು ಗಲ್ಲದ ಮೇಲೆ ಹರಿಸಿಕೊಂಡು, ಕೈಗೆಲ್ಲಾ ಮೆತ್ತಿಕೊಂಡು ಪ್ರಪಂಚವೇ ತನ್ನ ಐಸ್ಕ್ರೀಂನಲ್ಲಿದೆ ಎಂಬಂತೆ ನೆಕ್ಕುತ್ತಿತ್ತು. ಯುವತಿಯರ ಗುಂಪೊಂದು ಆಫೀಸಿನಲ್ಲಿ ನಡೆದ ತಮಾಷೆಯ ಘಟನೆಗಳನ್ನು ಇನ್ನಷ್ಟು ಸ್ವಾರಸ್ಯವಾಗಿ ವಿವರಿಸಿಕೊಂಡು, ನಗೆ ಚಟಾಕಿ ಹಾರಿಸುತ್ತಾ... ಸಾಸ್ಗೆ ಅದ್ದಿಕೊಂಡು ಸ್ಯಾಂಡ್ವಿಚ್ನ ಬ್ರೆಡಿನ ತುಂಡಿಗೆ ನೋವಾಗುವಂತೆ ಮೆಲ್ಲಗೆ ಕಚ್ಚಿ ತಿನ್ನುತ್ತಿದ್ದರು.

ಇವೆಲ್ಲವನ್ನೂ ಒಮ್ಮೆ ಕಣ್ಣಲ್ಲೇ ಸ್ಕಾನ್ ಮಾಡಿದ ನಮ್ಮ ಬಾಯಿಯಲ್ಲಿ ನೀರು... ಹೊಟ್ಟೆಯೂ ತನಗೂ ಅದು ಬೇಕು ಎಂಬಂತೆ ಶಬ್ದ ಮಾಡತೊಡಗಿತು. ನಾವು ಕೂಲ್ ಜಾಯಿಂಟ್ ಹೊಕ್ಕೆವು.ಮೊದಲು ‘ಚೀಸ್ ಟೊಮೆಟೊ ಗ್ರಿಲ್’ ಆರ್ಡರ್ ಮಾಡಿದ್ದಾಯ್ತು. ನಮ್ಮೆದುರೇ ಬ್ರೆಡ್ ಚೂರು ಪಡೆದು ಅದರ ಒಳಕ್ಕೆ ಚೀಸ್, ಪುದೀನಾ ಚಟ್ನಿ ಮೆತ್ತಿ, ಮೇಲೆ ಕ್ಯಾಪ್ಸಿಕಂ, ಟೊಮೆಟೊ, ಕಾರ್ನ್, ಬೇಯಿಸಿದ ಆಲೂಗಡ್ಡೆ ಹಾಗೂ ಕ್ಯಾರೆಟ್ ಚೂರುಗಳನ್ನು ಇಟ್ಟು ಅದರ ಮೇಲೆ ಇನ್ನೊಂದಿಷ್ಟು ಚೀಸ್ ಹಾಕಿ, ಇನ್ನೊಂದು ಬ್ರೆಡ್ನಿಂದ ಮುಚ್ಚಿ ಅದನ್ನು ಅಲ್ಲೇ ಪಕ್ಕದ ಗ್ರಿಲ್ಡ್ ಮೆಷಿನ್ ಒಳಗಿಟ್ಟು, ಬಿಸಿ ಮಾಡಿ ತಟ್ಟೆಗೆ ಹಾಕಿ ಕೊಟ್ಟರು.

ಸ್ಯಾಂಡ್ವಿಚ್ ಚೂರನ್ನು ಟೊಮೆಟೊ ಚಟ್ನಿಯಲ್ಲಿ ಅದ್ದಿ ಹಾಗೇ ಬಾಯಿಗಿಟ್ಟರೆ ಖಾರ ಹಾಗೂ ಸಿಹಿ ರುಚಿಯಿಂದ ಆಹಾ! ಎನಿಸಿತ್ತು. ಹಾಗೇ ಮಾತನಾಡುತ್ತಾ, ಪ್ಲೇಟ್ ಖಾಲಿಯಾಗಿದ್ದೇ ಗೊತ್ತಾಗಲಿಲ್ಲ.ಐಸ್ಕ್ರೀಂ ರುಚಿಯನ್ನೂ ನೋಡುವಾ ಎಂದು ಮೆನುವಿನಲ್ಲಿ ಹುಡುಕುತ್ತಿರುವಾಗಹಾಟ್ ಚಾಕಲೇಟ್ ಕೇಕ್ ಫಡ್ಜ್ ಹೆಸರು ಗಮನ ಸೆಳೆಯಿತು. ಇದೇನೋ ಹೆಸರೇ ವಿಚಿತ್ರವಾಗಿದೆಯಲ್ಲಾ ಎಂದುಕೊಂಡು ಅದನ್ನು ಕೇಳಿದೆವು.ಸಣ್ಣ ಬೌಲ್ನಲ್ಲಿ ಕೆಳಗೆ ಚಾಕಲೇಟ್ ರಸ ತುಂಬಿಕೊಂಡು, ಅದರ ಮೇಲೆ ಗುಮ್ಮಟದಂತೆ ವೆನಿಲ್ಲಾ ಐಸ್ಕ್ರೀಂ. ಅದಕ್ಕೆ ಚಾಕಲೇಟ್ ರಸದಿಂದ ಮಾಡಿದ ವಿನ್ಯಾಸ, ಗೋಡಂಬಿ ಹಾಗೂ ಒಣಹಣ್ಣುಗಳ ಅಲಂಕಾರ. ಚಮಚದಿಂದ ಚಾಕಲೇಟ್ ಹಾಗೂ ಐಸ್ಕ್ರೀಂ ತೆಗೆದುಕೊಂಡು ಬಾಯಿಗಿಟ್ಟಾಗ, ಚಾಕಲೇಟ್ನಲ್ಲಿ ಅದ್ದಿದ ಕೇಕ್ ತುಂಡು ಐಸ್ಕ್ರೀಂ ರುಚಿಯನ್ನು ಇಮ್ಮಡಿಸಿತ್ತು.ಬಿಸಿ ಬಿಸಿ ಚಾಕಲೇಟ್ ರಸ ಹಾಗೂ ತಣ್ಣಗಿನ ಐಸ್ಕ್ರೀಂ ಕಾಂಬಿನೇಷನ್ ತಿನ್ನುವುದೇ ಸುಖ.

ಅದು ಮುಗಿದಾಗಮೆನು ಕಾರ್ಡ್ನಲ್ಲಿದ್ದ ವರ್ಲ್ಡ್ ಕಪ್ ಐಸ್ಕ್ರೀಂ ಎಂಬ ಹೆಸರು ನೋಡಿ ಇದೇನು ಹೆಸರೇ ಹೀಗಿದೆಯಲ್ಲಾ? ಎಂದು ಅಂದುಕೊಂಡೆವು. ನಮ್ಮ ಕಣ್ಣೆದುರೇ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಮೂರು ಸ್ಕೂಪ್ ಐಸ್ಕ್ರೀಂ ಅನ್ನು ಗುಂಡಗಿನ ಗಾಜಿನ ಗ್ಲಾಸ್ಗೆ ಹಾಕಿ ಅದರ ಮೇಲೆ ಗೋಡಂಬಿ, ಚೆರ್ರಿ ಹಾಗೂ ಬೇರೆ ಬೇರೆ ಹಣ್ಣುಗಳಿಂದ ಅಲಂಕಾರ ಮಾಡಿದರು. ನಮ್ಮ ಕೈಗಿಟ್ಟಾಗ ಒಂದು ರೀತಿಯ ಬಣ್ಣದ ಚೆಂಡಿನಂತೆ ಅನಿಸಿತು. ಐಸ್ಕ್ರೀಂ ಹಾಗೇ ಬಾಯಲ್ಲಿ ಕರಗಿ ಹೋಯಿತು.

ಏನಾದರೂ ಜ್ಯೂಸ್ ಕುಡಿಯೋಣವೆಂದು ಮಾವಿನಹಣ್ಣು ಜ್ಯೂಸ್ ತರಿಸಿಕೊಂಡೆವು. ಇದೂ ಇಷ್ಟೇ, ಹಾಲು, ಐಸ್ಕ್ರೀಂ, ಮಾವಿನ ಹಣ್ಣುಗಳ ಸಣ್ಣ ಸಣ್ಣ ಚೂರಿನಿಂದ ಕೂಡಿದ ನುಣ್ಣನೆ ಅರೆದ ಮಾವಿನಹಣ್ಣಿನ ರಸ ನಾಲಿಗೆ ರುಚಿಯನ್ನು ತಣಿಸಿತ್ತು, ಹೊಟ್ಟೆಯನ್ನು ತುಂಬಿಸಿತ್ತು.

ನಗರದಲ್ಲಿ ಐಸ್ಕ್ರೀಂ ಪಾರ್ಲರ್ಗಳಿಗೇನೂ ಕೊರತೆಯಿಲ್ಲ, ಗಲ್ಲಿಗೊಂದರಂತೆ ಐಸ್ಕ್ರೀಂ ಪಾರ್ಲರ್ಗಳು ನಾಯಿಕೊಡೆಗಳಂತೆ ತಲೆ ಎತ್ತಿಕೊಂಡಿವೆ. ಆದರೆ ಕೂಲ್ ಜಾಯಿಂಟ್ ಕಳೆದ ಇಪ್ಪತ್ತು ವರ್ಷಗಳಿಂದ ರುಚಿ ಹಾಗೂ ಸ್ವಚ್ಛತೆ ಕಾರಣದಿಂದ ಹೆಸರು ಗಳಿಸಿಕೊಂಡು ಬಂದಿದೆ.ಇದು ಯುವಕರ ಅಡ್ಡಾ ಎಂದೇ ಫೇಮಸ್.

ಇದು ಸಂಜೆ ಸ್ನ್ಯಾಕ್ಸ್ ಹಾಗೂ ಐಸ್ಕ್ರೀಂಗೆ ಫೇಮಸ್. ಬರೀ ಬೇಸಿಗೆ ಹಾಗೂ ಮಟ ಮಟ ಮಧ್ಯಾಹ್ನಕ್ಕಷ್ಟೇ ಐಸ್ಕ್ರೀಂ ಎಂಬ ಭಾವನೆ ನಮ್ಮಲ್ಲಿದ್ದರೆ ಕೂಲ್ ಜಾಯಿಂಟ್ ಅದನ್ನು ಸುಳ್ಳು ಮಾಡುತ್ತದೆ. ಕಾರಣವರ್ಷದ ಎಲ್ಲಾ ದಿನವೂ, ಎಲ್ಲಾ ಹೊತ್ತಿನಲ್ಲೂ ಇಲ್ಲಿ ಐಸ್ಕ್ರೀಂನ ಸ್ವಾದ ಸವಿಯುವ ಮಂದಿಯನ್ನು ನಾವು ಕಾಣಬಹುದು.

ಕೂಲ್ ಜಾಯಿಂಟ್ ಅನ್ನು ಗೋಪಾಡಿ ಶ್ರೀನಿವಾಸ ರಾವ್ ಹಾಗೂ ಆರ್. ಪ್ರಭಾಕರ್ ಅವರು 1998ರ ಡಿಸೆಂಬರ್ನಲ್ಲಿ ಆರಂಭಿಸಿದರು. ಈಗ ಶ್ಯಾಂ ಪ್ರಕಾಶ್, ಕುಂದಾಪುರದ ಮಹೇಶ್ ಜಿ. ಕೃಷ್ಣಮೂರ್ತಿ, ಸುದರ್ಶನ್, ಮಹೇಶ್, ಶ್ಯಾಂ ಪ್ರಕಾಶ್ ನಡೆಸಿಕೊಂಡು ಬರುತ್ತಿದ್ದಾರೆ.

‘20 ವರ್ಷಗಳ ಹಿಂದೆ ಐಸ್ಕ್ರೀಂ, ಸ್ಯಾಂಡ್ವಿಚ್ಸಿಗುವುದುಫೈವ್ಸ್ಟಾರ್ ಹೋಟೆಲ್ಗಳಲ್ಲಿಯೇ ಎಂಬ ಅಲಿಖಿತ ನಿಯಮವಿತ್ತು. ಗುಣಮಟ್ಟದ ಆಹಾರ ಪದಾರ್ಥವನ್ನು ಕೈಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ನೀಡಬೇಕು ಎಂಬ ಉದ್ದೇಶದಿಂದ ಇದನ್ನು ಆರಂಭಿಸಿದೆವು.ಜನ ಸಾಮಾನ್ಯರಿಗೆ ₹10ಕ್ಕೆ ಸ್ಯಾಂಡ್ವಿಚ್ ಮಾರಲು ಆರಂಭಿಸಿದೆವು. ಅನಂತರ ಕಡಿಮೆ ಬೆಲೆಗೆಐಸ್ಕ್ರೀಂ ಮಾಡಿದೆವು. ಈಗಲೂ ಇದು ಮುಂದುವರಿದಿದೆ. ಇಲ್ಲಿ ಸ್ಯಾಂಡ್ವಿಚ್ಗಳ ಬೆಲೆ ₹40ರಿಂದ ಆರಂಭ. ಐಸ್ಕ್ರೀಂಗಳ ಗರಿಷ್ಠ ಬೆಲೆ ₹160. ಮಕ್ಕಳಿಗೆ ₹50 ರಿಂದ ಆರಂಭ. ನಾವು ಗುಣಮಟ್ಟ ಹಾಗೂ ರುಚಿಯಲ್ಲಿ ಯಾವತ್ತೂ ರಾಜಿಯಾಗಿಲ್ಲ’ ಎಂದು ಹೇಳುತ್ತಾರೆ ಕೂಲ್ ಜಾಯಿಂಟ್ ಮಾಲಿಕ ಮಹೇಶ್ ಹತ್ವಾರ್.

‘ಐಸ್ಕ್ರೀಂಗೆ ನಂದಿನಿ ಹಾಲು, ತಾಜಾ ಹಣ್ಣುಗಳು, ಸ್ಯಾಂಡ್ವಿಚ್ಗೆ ಗುಣಮಟ್ಟದ ಬ್ರೆಡ್, ತಾಜಾ ತರಕಾರಿಗಳನ್ನೇ ಬಳಸುತ್ತೇವೆ’ ಎಂದು ಮಹೇಶ್ ಹೇಳುತ್ತಾರೆ.

ಕೂಲ್ ಜಾಯಿಂಟ್ ವಿಶೇಷ

ಇಲ್ಲಿ ಆಯಾಯ ವಯಸ್ಸಿನವರಿಗೆ ಇಷ್ಟವಾಗುವಂತೆ ಜ್ಯೂಸ್, ಸ್ಮೂತಿ, ಐಸ್ಕ್ರೀಂ ಹಾಗೂ ಸ್ಯಾಂಡ್ವಿಚ್ಗಳಿರುವುದು ವಿಶೇಷ. ಮಕ್ಕಳ ಐಸ್ಕ್ರಿಂ, ಹರ್ಬಲ್ ಜ್ಯೂಸ್ಗಳು, ಯುವಕ ಯುವತಿಯರಿಗೆ ಬೇರೆ ಬೇರೆ ಹೆಸರಿನ ಐಸ್ಕ್ರೀಂಗಳು, ಸ್ಯಾಂಡ್ವಿಚ್ಗಳು ಲಭ್ಯ. ಹಾಟ್ ಚಾಕಲೇಟ್ ಫಡ್ಜ್, ಕೇಕ್ ಫಡ್ಜ್, ಸ್ಪೆಷಲ್ ಐಸ್ಕ್ರೀಂ ವರೈಟಿಯಲ್ಲಿ ಮೈ ಡಾರ್ಲಿಂಗ್, ಹನಿ ನಟ್ ಕ್ರಂಚ್, ಗಡ್ ಬಡ್ ಸ್ಪೆಷಲ್, ಟ್ರೀಮ್ ಗರ್ಲ್, ಲವರ್ಸ್ ಸ್ಪೆಷಲ್ ಹೀಗೆ ಆಕರ್ಷಕ ಹೆಸರುಗಳುಳ್ಳ ಐಸ್ಕ್ರೀಂಗಳು ಗಮನ ಸೆಳೆಯುತ್ತವೆ. ಕಿಡ್ಸ್ ಸ್ಪೆಷಲ್ ಐಸ್ಕ್ರಿಂನಲ್ಲಿ ಸ್ಪೈಡರ್ ಮ್ಯಾನ್, ಜಂಗಲ್ ಬುಕ್, ಹೀಮ್ಯಾನ್ನಂತಹ ಹೆಸರುಳ್ಳ ಐಸ್ಕ್ರಿಂಗಳಿವೆ. ಸ್ಮೂತಿ ಐಸ್ಕ್ರೀಂ, ಫಾಲೂದಗಳನ್ನಿಲ್ಲಿ ಸವಿಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.