ವಿಶ್ಚಸಂಸ್ಥೆ: ಪ್ರತಿ ವರ್ಷ ಜೂನ್ 7ರಂದು ವಿಶ್ವ ಆಹಾರ ಸುರಕ್ಷತಾ ದಿನಅಚರಿಸಲಾಗುತ್ತದೆ. ಈ ದಿನದಂದು ಆಹಾರ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ಪ್ರತಿ ವರ್ಷವೂವಿಶ್ವ ಆಹಾರ ಸುರಕ್ಷತಾ ದಿನವನ್ನು ಒಂದೊಂದುಧ್ಯೇಯವಾಕ್ಯದ ಅಡಿಯಲ್ಲಿ ಆಚರಣೆ ಮಾಡುವುದು ವಿಶೇಷ. ಕಳೆದ ವರ್ಷ ‘ಉತ್ತಮ ನಾಳೆಗಾಗಿ ಇಂದು ಸುರಕ್ಷಿತ ಆಹಾರ‘ ಎನ್ನುವ ಥೀಮ್ ಅಡಿಯಲ್ಲಿ ಆಚರಣೆ ಮಾಡಲಾಗಿತ್ತು. ಈ ಸಲ ‘ಸುರಕ್ಷಿತ ಆಹಾರ, ಉತ್ತಮ ಆರೋಗ್ಯ‘ ಎಂಬ ಪರಿಕಲ್ಪನೆಯಲ್ಲಿ ಆಚರಣೆ ಮಾಡಲಾಗುತ್ತಿದೆ.

ಸುರಕ್ಷಿತವಲ್ಲದ ಆಹಾರದಿಂದ ಬರಬಹುದಾದ ಆಪಾಯಗಳ ಕುರಿತು ತಿಳಿವಳಿಕೆ, ಅವುಗಳನ್ನು ಪತ್ತೆಹಚ್ಚುವುದು, ಆಹಾರ ಸುರಕ್ಷತೆಗೆ ಕೊಡುಗೆ ನೀಡುವುದು, ಆರೋಗ್ಯ ಕುರಿತು ಈ ದಿನದಂದು ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಗಮನ ಸೆಳೆಯುತ್ತದೆ.

ಉತ್ತಮ ಮತ್ತು ಸುರಕ್ಷಿತ ಆಹಾರವನ್ನು ಸೇವಿಸುವುದರಿಂದ ದೀರ್ಘಾವಧಿಗೆ ಆಗುವ ಲಾಭಗಳು ಮತ್ತು ಆರೋಗ್ಯ ಪ್ರಯೋಜನಗಳ ಕುರಿತು ಜನರಿಗೆ ಅರಿವು ಮೂಡಿಸಲಾಗುತ್ತದೆ.

ಇದನ್ನೂ ಓದಿ:ಮಾನವನ ಗರಿಷ್ಠ ಜೀವಿತಾವಧಿ 150 ವರ್ಷ: ಹೊಸ ಸಂಶೋಧನೆ

ಅಸುರಕ್ಷಿತ ಮತ್ತು ಕೃತಕ ಆಹಾರ ಬಳಕೆಯಿಂದ ಬರುವ ಅಪಾಯಗಳ ಕುರಿತು ಜಾಗತಿಕವಾಗಿ ಅಭಿಯಾನ, ವಿಚಾರ ಸಂಕಿರಣಗಳು, ಚರ್ಚೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದುಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇದನ್ನೂ ಓದಿ:World No Tobacco Day | ಧೂಮಪಾನ ಎಂಬ ವಿಷಪಾನ: ತ್ಯಜಿಸಲು ನೂರಾರು ಕಾರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.