ನವದೆಹಲಿ: ‘ಭಾರತದಲ್ಲಿ ಕ್ಯಾನ್ಸರ್ ಪ್ರಮಾಣ ಏರುಮುಖವಾಗಿದ್ದು, ಒಟ್ಟು 14.1 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ. ಜತೆಗೆ 9.1 ಲಕ್ಷ ಮಂದಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. ಸ್ತನ ಕ್ಯಾನ್ಸರ್ ಪ್ರಮಾಣ ಅತ್ಯಧಿಕವಾಗಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

ಕ್ಯಾನ್ಸರ್ ಕುರಿತ ಅಂತರರಾಷ್ಟ್ರೀಯ ಸಂಸ್ಥೆ (IARC) ಈ ವಿಷಯ ಕುರಿತು ಅಧ್ಯಯನ ನಡೆಸಿದೆ. ತುಟಿ ಮತ್ತು ಬಾಯಿ ಹಾಗೂ ಶ್ವಾಸಕೋಶ ಕ್ಯಾನ್ಸರ್‌ಗಳು ಪುರುಷರನ್ನು ಹೆಚ್ಚಾಗಿ ಭಾದಿಸುತ್ತಿವೆ. ಇವುಗಳ ಪ್ರಮಾಣ ಕ್ರಮವಾಗಿ ಶೇ 15.6 ಹಾಗೂ ಶೇ 8.5ರಷ್ಟಿದೆ. ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಕೊರಳಿನ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇವುಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕ್ರಮವಾಗಿ ಶೇ 27 ಹಾಗೂ ಶೇ 18ರಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಕಳೆದ ಐದು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿರುವವ ಸಂಖ್ಯೆ 32.6 ಲಕ್ಷಕ್ಕೆ ಏರಿಕೆಯಾಗಿದೆ. ಜಾಗತಿಕಮಟ್ಟದಲ್ಲಿ ಕ್ಯಾನ್ಸರ್‌ಗೆ ತುತ್ತಾಗುತ್ತಿರುವವರ ಸಂಖ್ಯೆ 2 ಕೋಟಿಯಾದರೆ, ಇದರಿಂದ ಮೃತಪಟ್ಟವರು 97 ಲಕ್ಷ. ಕಳೆದ 5 ವರ್ಷಗಳಲ್ಲಿ 5.3 ಕೋಟಿ ಜನ ಕ್ಯಾನ್ಸರ್‌ನೊಂದಿಗೆ ಬದುಕು ನಡೆಸುತ್ತಿದ್ದಾರೆ. ಸರಾಸರಿಯಾಗಿ ಪ್ರತಿ 5 ಜನರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. ಪುರುಷರಲ್ಲಿ ಪ್ರತಿ 9 ಜನರಲ್ಲಿ ಒಬ್ಬರು ಹಾಗೂ ಮಹಿಳೆಯರಲ್ಲಿ ಪ್ರತಿ 12ರಲ್ಲಿ ಒಬ್ಬರು ಕ್ಯಾನ್ಸರ್‌ನಿಂದ ಮೃತಪಡುತ್ತಿದ್ದಾರೆ.
.Union Budget: ಗರ್ಭಕಂಠದ ಕ್ಯಾನ್ಸರ್ ತಡೆಗೆ 9-14ರ ವಯಸ್ಸಿನ ಬಾಲಕಿಯರಿಗೂ ಲಸಿಕೆ.ಆಧುನಿಕ ಜೀವನಶೈಲಿಯಿಂದ ಕ್ಯಾನ್ಸರ್ ಹೆಚ್ಚಳ: ತಜ್ಞರ ಕಳವಳ.
75ರ ವಯೋಮಾನಕ್ಕೂ ಪೂರ್ವದಲ್ಲಿ ಕ್ಯಾನ್ಸರ್‌ಗೆ ಒಳಗಾಗುತ್ತಿರುವವರ ಸಂಖ್ಯೆ ಶೇ 10.6ರಷ್ಟು, ಈ ಸಮಸ್ಯೆಯಿಂದ ಮೃತಪಡುತ್ತಿರುವವರ ಸಂಖ್ಯೆ ಶೇ 7.2 ರಷ್ಟು. ಜಾಗತಿಕ ಮಟ್ಟದಲ್ಲಿ ಈ ಸಂಖ್ಯೆಗಳು ಕ್ರಮವಾಗಿ ಶೇ 20 ಹಾಗೂ ಶೇ 9.6ರಷ್ಟಿದೆ ಎಂದು ವರದಿ ಹೇಳಿದೆ.

ಜಾಗತಿಕ ಮಟ್ಟದಲ್ಲಿ 185 ರಾಷ್ಟ್ರಗಳಲ್ಲಿ ಹಲವು ಕ್ಯಾನ್ಸರ್ ನಿರ್ವಹಣೆಯ ಕನಿಷ್ಠ ಆರ್ಥಿಕ ನೆರವಿನ ಆರೋಗ್ಯ ಸೌಲಭ್ಯಗಳನ್ನು ಹೊಂದಿದ್ದು, ಇದು ಶೇ 39ರಷ್ಟಿದೆ. ಆದರೆ ನೋವು ನಿವಾರಕ ಒಳಗೊಂಡಂತೆ ಉಪಶಮನ ಆರೈಕೆಯು ಶೇ 28 ರಾಷ್ಟ್ರಗಳಲ್ಲಿ ಮಾತ್ರ ಇದೆ.

ವಿಶ್ವದಲ್ಲಿ ಶ್ವಾಸಕೋಶ ಕ್ಯಾನ್ಸರ್‌ಗೆ ತುತ್ತಾಗುತ್ತಿರುವ ಸಂಖ್ಯೆ ಹೆಚ್ಚಳವಾಗಿದೆ. ಹೊಸ ಪ್ರಕರಣಗಳ ಸಂಖ್ಯೆ ಶೇ 12.4ಕ್ಕೆ ಏರಿಕೆಯಾಗಿದೆ. ಹೀಗೆ ಕ್ಯಾನ್ಸರ್‌ನಿಂದ ಬಳಲುತ್ತಿರುವವರಲ್ಲಿ ಮೃತಪಟ್ಟವರ ಸಂಖ್ಯೆ ಶೇ 19. ಏಷ್ಯಾದಲ್ಲಿ ಅತಿಯಾದ ತಂಬಾಕು ಸೇವನೆ ಇದಕ್ಕೆ ಪ್ರಮುಖ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.

ನಂತರದ ಸ್ಥಾನದಲ್ಲಿ ಸ್ತನ ಕ್ಯಾನ್ಸರ್ ನಿಲ್ಲುತ್ತದೆ. ಹೊಸ ಪ್ರಕರಣಗಳ ಸಂಖ್ಯೆ ಶೇ 11.6ರಷ್ಟು. ಇದು ಜಾಗತಿಕ ಮಟ್ಟದ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 7ರಷ್ಟು ಪಾಲನ್ನು ಹೊಂದಿದೆ.

ಜಾಗತಿಕ ಮಟ್ಟದಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಡುವ 8 ಕ್ಯಾನ್ಸರ್‌ಗಳಲ್ಲಿ ಗರ್ಭಕೊರಳಿನ ಕ್ಯಾನ್ಸರ್ ಕೂಡಾ ಒಂದು. ಸುಮಾರು 25 ರಾಷ್ಟ್ರಗಳಲ್ಲಿ ಇದು ಸಾಮಾನ್ಯ ಎಂಬಂತಾಗಿದೆ. ಇವುಗಳಲ್ಲಿ ಬಹುತೇಕವು ಆಫ್ರಿಕಾದ ಸಹರಾ ಭಾಗದಲ್ಲಿವೆ.

ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣ ನಿಯಂತ್ರಿಸಲು 15 ವರ್ಷ ಒಳಗಿನ ಹೆಣ್ಣುಮಕ್ಕಳಿಗೆ ಹ್ಯೂಮನ್ ಪ್ಯಾಪಿಲೊಮಿಯಾ ವೈರಸ್ (HPV) ನಿಯಂತ್ರಣಕ್ಕೆ ನೀಡುವ ಲಸಿಕೆ ನೀಡಬೇಕು. 35ರ ವರ್ಷದೊಳಗಿನ ಶೇ 70ರಷ್ಟು ಮಹಿಳೆಯರ ಕ್ಯಾನ್ಸರ್ ತಪಾಸಣೆ ಆಗಬೇಕು. ಇದರಿಂದ ಶೇ 90ರಷ್ಟು ಮಹಿಳೆಯರನ್ನು ಕ್ಯಾನ್ಸರ್‌ನಿಂದ ರಕ್ಷಿಸಲು ಸಾಧ್ಯ. 2030ರೊಳಗೆ ಇದನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಓಷೆನಿಯಾದಲ್ಲಿ ಪ್ರತಿ 1 ಲಕ್ಷ ಜನರಿಗೆ 409, ಉತ್ತರ ಅಮೆರಿಕ ಹಾಗೂ ಯುರೋಪ್‌ನಲ್ಲಿ ಕ್ರಮವಾಗಿ ಪ್ರತಿ ಒಂದು ಲಕ್ಷ ಜನರಿಗೆ 365 ಹಾಗೂ 280, ಆಸ್ಟ್ರೇಲಿಯಾ–ನ್ಯೂಜಿಲ್ಯಾಂಡ್ ಪ್ರಾಂತ್ಯದಲ್ಲಿ 400 ಜನರಲ್ಲಿ ಕ್ಯಾನ್ಸರ್ ಕಂಡುಬಂದಿದೆ. ಯುರೋಪ್‌ನಲ್ಲಿ 82ರ ವಯೋಮಾನದಲ್ಲಿ ಕ್ಯಾನ್ಸರ್‌ಗೆ ತುತ್ತಾದವರ ಸಂಖ್ಯೆ 1ಲಕ್ಷ, ಆಫ್ರಿಕಾದಲ್ಲಿ ಇದು 72 ವರ್ಷ ಹಾಗೂ ಏಷ್ಯಾದಲ್ಲಿ 69ನೇ ವಯಸ್ಸಿನಲ್ಲಿ ಕ್ಯಾನ್ಸರ್‌ಗೆ ತುತ್ತಾಗುತ್ತಿರುವವರ ಸಂಖ್ಯೆ ದೊಡ್ಡದಿದೆ.
.ಕ್ಯಾನ್ಸರ್‌ನಿಂದ ಬಾಲಿವುಡ್ ನಟಿ ಪೂನಂ ಪಾಂಡೆ ನಿಧನ.ಕಿದ್ವಾಯಿ: ಕ್ಯಾನ್ಸರ್ ಮರಣ ಪ್ರಕರಣ ಹೆಚ್ಚಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.