ಗರ್ಭಾವಸ್ಥೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಯು ದೇಹದ ತೂಕ ಹೆಚ್ಚಾಗುವುದು ಸಾಮಾನ್ಯ. ಆದರೆ ಅತಿಯಾದ ತೂಕ ಹೆಚ್ಚಳ ಕೂಡ ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂಬುದು ನಿಮಗೆ ತಿಳಿದಿದೆಯೇ?

ಹೌದು, ಗರ್ಭಿಣಿಯರು ಹೆಚ್ಚು ಆಹಾರ ಸೇವನೆ ಮಾಡಬೇಕು ಎನ್ನುವ ಭರದಲ್ಲಿ ಅವಶ್ಯಕತೆಗಿಂತ ಹೆಚ್ಚು ತೂಕ ಹೆಚ್ಚಳ ಮಾಡಿಕೊಂಡರೆ, ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುವುದು. ಈ ಬಗ್ಗೆ ಫೋರ್ಟಿಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಸುನೀತಾ ಶರ್ಮಾ ವಿವರಿಸಿದ್ದಾರೆ.

ಗರ್ಭಾವಸ್ಥೆಯ ಬೊಜ್ಜಿನಿಂದ ಆಗುವ ಸಮಸ್ಯೆಗಳು:

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಳವು ಸಹ ಆರೋಗ್ಯಕರವಾಗಿರಬೇಕು. ೧೦ ರಿಂದ ೧೫ ಕೆ.ಜಿ ತೂಕ ಹೆಚ್ಚಳ ಸರ್ವೇ ಸಾಮಾನ್ಯ. ಇದಕ್ಕೂ ಮೀರಿದ ತೂಕ ಹೆಚ್ಚಳ ಒಂದಷ್ಟು ಸಮಸ್ಯೆ ಉಂಟು ಮಾಡಬಹುದು. ಹೆಚ್ಚು ತೂಕದಿಂದ ಗರ್ಭಿಣಿ ಓಡಾಡಲು ಸಾಧ್ಯವಾಗದೇ ಜಡಜೀವನ ಶೈಲಿಯನ್ನು ಹೊಂದಬಹುದು. ಕೆಲವರಿಗೆ ಅಧಿಕ ರಕ್ತದೊತ್ತಡ ಉಂಟು ಮಾಡಿದರೆ, ಡಯಾಬಿಟಿಸ್ ಬರುವ ಸಾಧ್ಯತೆ ಇದೆ. ಕೇವಲ ತಾಯಿಗಷ್ಟೇ ಅಲ್ಲದೆ, ಮಗುವಿನ ಬೆಳವಣಿಗೆ ಮೇಲೂ ಪರಿಣಾಮ ಬೀರಲಿದೆ. ಅಂದರೆ, ಅತಿಯಾದ ಭ್ರೂಣದ ಬೆಳವಣಿಗೆ, ಭವಿಷ್ಯದಲ್ಲಿ ಮಗುವಿಗೆ ಸ್ಥೂಲಕಾಯತೆ ಉಂಟಾಗುವುದು, ಟೈಪ್ 2 ಮಧುಮೇಹದ ಆತಂಕ, ಅವಧಿಗೂ ಮುನ್ನವೇ ಮಗುವಿನ ಜನ್ಮವಾಗುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.

ಪ್ರಿಕ್ಲಾಂಪ್ಸಿಯಾ ಸಮಸ್ಯೆ ಬರಬಹುದು:

ಕೆಲವು ಮಹಿಳೆಯರಿಗೆ ಗರ್ಭಾವಸ್ಥೆಯ ಸಂದರ್ಭದಲ್ಲಿ ಅಧಿಕ ರಕ್ತದೊತ್ತಡ ಉಂಟಾಗಬಹುದು, ಈ ಸಮಸ್ಯೆಯಿಂದ ಕೆಲವು ಮಹಿಳೆಯರಿಗೆ ಪ್ರಿಕ್ಲಾಂಪ್ಸಿಯಾ ಆರೋಗ್ಯ ಸಮಸ್ಯೆ ಉಂಟಾಗಬಹುದು. ಪ್ರಿಕ್ಲಾಂಪ್ಸಿಯಾ ಎಂದರೆ, ಲಿವರ್ ಹಾಗೂ ಕಿಡ್ನಿಗಳು ಸರಿಯಾಗಿ ಕೆಲಸ ಮಾಡದೇ ಇರಬಹುದು. ಈ ರೀತಿಯ ಒಂದು ಸ್ಥಿತಿ ಯನ್ನು ವೈದ್ಯಕೀಯ ಲೋಕದಲ್ಲಿ ಪ್ರಿಕ್ಲಾಂಪ್ಸಿಯಾ ಎನ್ನಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ಮಹಿಳೆಯರು ತಮ್ಮ ದೇಹದ ತೂಕವನ್ನು ಸಮತೋಲದಲ್ಲಿ ಕಾಪಾಡಿಕೊಳ್ಳುವುದರಿಂದ ಬಿಪಿ ಉಂಟಾಗುವುದಿಲ್ಲ. ಇದರಿಂದ ಪ್ರಿಕ್ಲಾಂಪ್ಸಿಯಾ ಸಮಸ್ಯೆಯೂ ಕಾಡುವುದಿಲ್ಲ.

ಆತಂಕ ಮತ್ತು ಖಿನ್ನತೆಯ ಅಪಾಯ ಇನ್ನೂ ಕೆಲವರು ಗರ್ಭಾವಸ್ಥೆಯಲ್ಲಿ ಸಾಕಷ್ಟು ಆತಂಕಕ್ಕೆ ಒಳಗಾಗುತ್ತಾರೆ, ಮಗುವಿನ ಬೆಳವಣಿಗೆ, ಮಗುವಿನ ಜನನ ಇತರೆ ವಿಚಾರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಇದರಿಂದಲೂ ಸಹ ದೇಹದ ತೂಕ ಹೆಚ್ಚಬಹುದು.

ತೂಕ ನಿರ್ವಹಣೆ ಹೇಗೆ?:

ಗರ್ಭಾವಸ್ಥೆಯಲ್ಲಿ ಹೆಚ್ಚುದ ಗುಣಮಟ್ಟದ ಆಹಾರ ಸೇವನೆ ಒಳ್ಳೆಯದು. ಹಣ್ಣು, ತರಕಾರಿ,ಧಾನ್ಯಗಳು, ಬೇಳೆಕಾಳುಗಳು ಡ್ರೈ ಫ್ರೂಟ್ಸ್ನಂತಹ ಆಹಾರಗಳನ್ನು ಸೇವನೆ ಮಾಡುವುದು ಒಳಿತು. ಕೆಲವರು ಬಯಕೆ ಹೆಸರಿನಲ್ಲಿ ಜಂಕ್ಫುಡ್ಗಳ ಸೇವನೆ, ಬೀದಿಬದಿ ಫಾಸ್ಟ್ಫುಡ್, ಸಕ್ಕರೆಯುಕ್ತ ಆಹಾರ, ಎಣ್ಣೆಯಲ್ಲಿ ಕರಿದ ಆಹಾರ ಸೇವನೆ ಮಾಡುತ್ತಾರೆ. ಇದು ಅತ್ಯಂತ ಅಪಾಯಕಾರಿ, ಮಗುವಿನ ಬೆಳವಣಿಗೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ತಾಯಿಯ ಸಕ್ಕರೆ ಮಟ್ಟ ಹಾಗೂ ರಕ್ತದೊತ್ತಡವನ್ನು ವೇಗವಾಗಿ ಹೆಚ್ಚಿಸಲಿದ್ದು, ದೇಹದ ತೂಕವನ್ನು ದುಪ್ಪಟ್ಟು ಮಾಡಿಬಿಡುತ್ತದೆ. ಹೀಗಾಗಿ ಬಯಕೆಯ ಹೆಸರಿನಲ್ಲಿ ಆರೋಗ್ಯಕರ ಹಾಗೂ ತಾಜಾ ಆಹಾರಗಳನ್ನು ಸೇವಿಸುವುದು ಉತ್ತಮ. ಮಾಂಸ ಸೇವನೆಯ ಮೇಲೂ ನಿಯಂತ್ರಣವಿರಬೇಕು, ಇಲ್ಲದಿದ್ದರೆ, ಕೆಲವು ಮಾಂಸಗಳು ಅಪಾಯ ತಂದೊಡ್ಡಬಹುದು.

ದೈಹಿಕ ವ್ಯಾಯಾಮ:

ಗರ್ಭಿಣಿಯರು ಹೆರಿಗೆ ಆಗುವವರೆಗೂ ದೈಹಿಕ ವ್ಯಾಯಾಮ ಮಾಡುವುದು ಅತಿ ಅವಶ್ಯಕ. ದೈಹಿಕ ವ್ಯಾಯಾಮ, ಯೋಗ, ಧ್ಯಾನದಿಂದ ತಮ್ಮ ಆರೋಗ್ಯ ಉತ್ತಮವಾಗಿರಲಿದೆ.

ತೂಕ ಹೆಚ್ಚಳದ ಮೇಲೆ ಕಣ್ಣಿರಲಿ:

ಈ ಒಂಬತ್ತು ತಿಂಗಳ ಅವಧಿಯಲ್ಲಿ ನಿಮ್ಮ ಹಾಗೂ ಮಗುವಿನ ತೂಕ ಎಷ್ಟು ಹೆಚ್ಚಳವಾಗುತ್ತಿದೆ ಎಂಬುದರ ಮೇಲೆ ನಿಗಾವಹಿಸಿ, ಇಲ್ಲವಾದರೆ, ಬಿಪಿ, ಶುಗರ್ ಬರುವ ಸಾಧ್ಯತೆ ಹಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.